ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದೆ: ಶಾಸಕ ಪ್ರಿಯಾಂಕ್ ಖರ್ಗೆ

1
13

ಕಲಬುರಗಿ: ಮಾಜಿ ಸಚಿವರಾದ ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರ ಟ್ವಿಟರ್ ಖಾತೆ ನಿಷ್ಕ್ರಿಯ ವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಲ್ಳುವ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ನನ್ನ ಟ್ವಿಟರ್ ಖಾತೆ ಇದ್ದಕ್ಕಿದ್ದಂತೆ ನಿಷ್ಕ್ರಿಯ ವಾಗಿದೆ. ನಾನು ನನ್ನ ಖಾತೆಯನ್ನು ತೆರೆಯಲು ಸಾಧ್ಯವಾಗದ  ರೀತಿಯಲ್ಲಿ ನಿಯಂತ್ರಣ ತಪ್ಪಿಸಲಾಗಿದೆ.

Contact Your\'s Advertisement; 9902492681

ಇದನ್ನೂ ಓದಿ: ಪಿಎಸ್ ಐ ಅಕ್ರಮ ನೇಮಕಾತಿ ಹಗರಣ: ಎಡಿಜಿಪಿ ವರ್ಗಾವಣೆಗೆ ಶಾಸಕ ಪ್ರಿಯಾಂಕ್ ಖರ್ಗೆ ಆಗ್ರಹ

ಇದು ಟ್ವಿಟರ್ ಸಂಸ್ಥೆ ಯವರಿಂದಾಗಿದೆಯೋ ಅಥವಾ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೋ ಎಂದು ಇನ್ನೂ  ನನಗೆ ತಿಳಿದಿಲ್ಲ ಟ್ವಿಟರ್ ಸಂಸ್ಥೆ ಯಿಂದ ಈ ರೀತಿಯಾಗಿದ್ದರೆ ನನಗೆ ಸೂಚನೆ ನೀಡಲಾಗುತ್ತಿತ್ತು ಎಂದು ತಿಳಿದಿದ್ದೇನೆ ಆದರೆ ಇದೂವರೆಗೂ ನನಗೆ ಯಾವುದೇ ರೀತಿಯ ಸೂಚನೆಗಳು ಬಂದಿರದ ಕಾರಣ ಹ್ಯಾಕ್ ಆಗಿರಬಹುದು ಎನಿಸುತ್ತಿದೆ.

ನನ್ನ‌ ಟ್ವಿಟ್ಟರ್ ಖಾತೆ ನನ್ನ ನಿಯಂತ್ರಣಕ್ಕೆ ಸಿಗುವವರೆಗೂ ಅದರಲ್ಲಿ ಯಾವುದೇ ಬಗೆಯ ಅಸಂಬದ್ಧ ಅಪ್ರಬುದ್ದ ಪೋಸ್ಟ್ಗಳು ಕಂಡುಬಂದಲ್ಲಿ ಅದು ನನ್ನದಾಗಿರುವುದಿಲ್ಲ ಎಂದು ತಿಳಿಯಬೇಕೆಂದು ನನ್ನ ಮನವಿ “ಎಂದು ಶಾಸಕರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆಯಲ್ಲಿ ಆಕ್ರಮ: 8 ಜನರ ಜಾಮೀನು ಅರ್ಜಿ ವಜಾ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here