“ಸ್ಟೆಪ್-ಅಹೆಡ್”: ಡೆಲಿವರಿ ಎಕ್ಸಿಕ್ಯೂಟಿವ್‌ಗಳ ವೃತ್ತಿ ಮಾರ್ಗದರ್ಶನಕ್ಕೆ ಸ್ವಿಗ್ಗಿ ಉಪಕ್ರಮ

0
19

ಅರ್ಹ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ವ್ಯವಸ್ಥಾಪಕರ ಹುದ್ದೆಗಳಿಗೆ ಬೆಳೆಯಲು ಈ ಔಪಚಾರಿಕ ಕಾರ್ಯಕ್ರಮ ಸಹಾಯ ಮಾಡುತ್ತದೆ

ಭಾರತದ ಪ್ರಮುಖ ಬೇಡಿಕೆ-ಆಧಾರಿತ ವಿತರಣ ಸೌಲಭ್ಯವಾಗಿರುವ ಸ್ವಿಗ್ಗಿ (Swiggy), ತನ್ನ ಡೆಲಿವರಿ ಎಕ್ಸಿಕ್ಯೂಟಿವ್‌ಗಳಿಗೆ ನಿಶ್ಚಿತ ಸಂಬಳ ಮತ್ತು ಹೆಚ್ಚುವರಿ ಪ್ರಯೋಜನಗಳೊಂದಿಗೆ ಪೂರ್ಣಕಾಲಿಕ, ವ್ಯವಸ್ಥಾಪಕ ಮಟ್ಟದ ಉದ್ಯೋಗಗಳಿಗೆ ಪರಿವರ್ತನೆಗೊಳ್ಳಲು ಈ ಉದ್ಯಮದಲ್ಲೇ ಇಂತಹ ಮೊದಲ ಉಪಕ್ರಮವಾಗಿ ವೇಗವರ್ಧಕ ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಇಂದು ಘೋಷಿಸಿದೆ. “ಸ್ಟೆಪ್-ಅಹೆಡ್” (ಒಂದು ಹೆಜ್ಜೆ ಮುಂದೆ) ಎಂದು ಹೆಸರಿಸಲಾದ ಈ ಕಾರ್ಯಕ್ರಮವು, ಪ್ರಸ್ತುತ ಹೊಂದಾಣಿಕೆಯ ಸಮಯದಲ್ಲಿ ಸ್ವಿಗ್ಗಿಯೊಂದಿಗೆ ಕೆಲಸ ಮಾಡುತ್ತಿದ್ದರೂ ಮೀಸಲಾದ, ವ್ಯವಸ್ಥಾಪಕರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು ಬಯಸುತ್ತಿರುವ ಡೆಲಿವರಿ ಎಕ್ಸಿಕ್ಯೂಟಿವ್‌ಗಳಿಗೆ ಅವಕಾಶ ನೀಡುವ ಗುರಿಯನ್ನು ಹೊಂದಿದೆ.

Contact Your\'s Advertisement; 9902492681

ಫ್ಲೀಟ್ ಮ್ಯಾನೇಜರ್ ಹುದ್ದೆಗೆ ಅರ್ಹರಾಗಲು, ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಪದವೀಧರರಾಗಿರಬೇಕು. ಸಂವಹನ ಕೌಶಲ ಮತ್ತು ಪ್ರಾಥಮಿಕ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು ಮತ್ತು ಕೆಲವು ವರ್ಷಗಳಿಂದ ಸ್ವಿಗ್ಗಿ ಸಂಸ್ಥೆಯೊಂದಿಗೆ ಡೆಲಿವರಿ ಮಾಡುತ್ತಿರಬೇಕು.

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಡೆಲಿವರಿ ಎಕ್ಸಿಕ್ಯೂಟಿವ್‌ಗಳ ಫ್ಲೀಟ್ ನಿರ್ವಹಿಸುವ ಜತೆಗೆ ಲಾಗಿನ್ ಅವರ್ಸ್, ರದ್ದತಿಗಳು, ಸಂದೇಹ ನಿವಾರಣೆ ಮತ್ತು ಪ್ರಶ್ನೆಗಳಿಗೆ ಉತ್ತರ ನೀಡುವುದು, ಡೆಲಿವರಿ ಎಕ್ಸಿಕ್ಯೂಟಿವ್‌ಗಳಿಗಾಗಿ ವಿಶೇಷ ಯೋಜನೆಗಳಲ್ಲಿ ಕೆಲಸ ಮಾಡುವಂತಹ ಮೆಟ್ರಿಕ್‌ಗಳನ್ನು ನಿರ್ವಹಿಸುವ ವಿಭಿನ್ನ ಜವಾಬ್ದಾರಿಗಳನ್ನು ಫ್ಲೀಟ್ ವ್ಯವಸ್ಥಾಪಕರು ಹೊಂದಿರುತ್ತಾರೆ. ವಿತರಣೆಯಲ್ಲಿ ಸಾಕಷ್ಟು ಅನುಭವ ಹೊಂದಿರುವುದರಿಂದ, ವಾಸ್ತವದಲ್ಲಿ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚೆನ್ನಾಗಿ ತಿಳಿದಿರುವುದರಿಂದ, ಅನುಭವಿ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಸಹಜವಾಗಿಯೇ ಇದಕ್ಕೆ ಹೊಂದಿಕೊಳ್ಳುತ್ತಾರೆ.

ಹಲವು ವರ್ಷಗಳಿಂದ, ಅನೇಕ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಫ್ಲೀಟ್ ಮ್ಯಾನೇಜರ್‌ಗಳಾಗಿ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ. ‘ಸ್ಟೆಪ್ ಅಹೆಡ್’ ಮೂಲಕ ಸ್ವಿಗ್ಗಿಯು ಈ ಪ್ರಕ್ರಿಯೆಯನ್ನು ಔಪಚಾರಿಕಗೊಳಿಸುತ್ತಿದೆ; ತನ್ನ ಡೆಲಿವರಿ ಎಕ್ಸಿಕ್ಯೂಟಿವ್‌ಗಳಿಗೆ ಫ್ಲೀಟ್ ಮ್ಯಾನೇಜರ್ ನೇಮಕಾತಿಗಳಲ್ಲಿ ಕನಿಷ್ಠ 20% ಆದ್ಯತೆ ನೀಡಲು ಉದ್ದೇಶಿಸಿದೆ. ಅರ್ಹತಾ ಮಾನದಂಡವಾಗಿ ಅನುಭವವನ್ನು ಸುಮಾರು ಎರಡು ವರ್ಷಗಳಿಗೆ ತಗ್ಗಿಸಲೂ ಸ್ವಿಗ್ಗಿ ಪರಿಗಣಿಸುತ್ತಿದೆ.

ಇದನ್ನೂ ಓದಿ: ಶರಣರ ತಾಣವಾದ ಹಾವೇರಿ: ಹುಕ್ಕೇರಿಮಠವು ಬೆಳೆದುಬಂದ ದಾರಿ

“ಡೆಲಿವರಿ ಎಕ್ಸಿಕ್ಯೂಟಿವ್‌ಗಳೇ ನಮ್ಮ ಕಾರ್ಯಾಚರಣೆಗಳ ಬೆನ್ನೆಲುಬು ಎಂದು ಸ್ಥಿರವಾಗಿ ಪರಿಭಾವಿಸುತ್ತದೆ; ದೇಶಾದ್ಯಂತ 2.7 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರಿಗೆ ಆದಾಯದ ಅವಕಾಶವನ್ನು ಸಕ್ರಿಯಗೊಳಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಉದ್ಯೋಗ ಮತ್ತು ಶಿಕ್ಷಣದ ಬಿಡುವಿನ ಅವಧಿಯನ್ನು ಹೆಚ್ಚುವರಿ ಆದಾಯದ ಮೂಲವೆಂದು ಹಲವರು ಸ್ವಿಗ್ಗಿಯ ಈ ಅವಕಾಶವನ್ನು ಪರಿಗಣಿಸಿದ್ದರೂ, ಇದನ್ನೂ ಮೀರಿ ಬಯಸುವ ಕೆಲವರಿದ್ದಾರೆ ಎಂದು ನಾವು ಅರಿತುಕೊಳ್ಳುತ್ತೇವೆ. ತಮ್ಮ ಕಾಲರ್ ಅನ್ನು ನೀಲಿಯಿಂದ ಬಿಳಿ ಬಣ್ಣಕ್ಕೆ ಬದಲಿಸಲು ಮತ್ತು ವ್ಯವಸ್ಥಾಪಕ ಹುದ್ದೆಗಳನ್ನು ನಿಭಾಯಿಸಲು ಆಸಕ್ತಿ ಹೊಂದಿರುವವರಿಗೆ ಒಂದು ಅನನ್ಯ ಅವಕಾಶವನ್ನು ಸ್ವಿಗ್ಗಿ ಸೃಷ್ಟಿಸುತ್ತಿದೆ” ಎಂದು ಸ್ವಿಗ್ಗಿ ಕಾರ್ಯಾಚರಣೆಗಳ ವಿಭಾಗದ ಉಪಾಧ್ಯಕ್ಷ ಮಿಹಿರ್ ರಾಜೇಶ್ ಶಾ ಹೇಳಿದ್ದಾರೆ

ಸ್ವಿಗ್ಗಿ ಪ್ರಸ್ತುತ ದೇಶಾದ್ಯಂತ 2.7 ಲಕ್ಷಕ್ಕೂ ಹೆಚ್ಚು ವಿತರಣಾ ಪಾಲುದಾರರನ್ನು ಹೊಂದಿದೆ. ಅಪಘಾತ ವಿಮೆ ಮತ್ತು ವೈದ್ಯಕೀಯ ರಕ್ಷಣೆ, ವೈಯಕ್ತಿಕ ಸಾಲಗಳು, ಕಾನೂನು ನೆರವು, ಕೋವಿಡ್, ತುರ್ತು ಸ್ಥಿತಿ, ಅಪಘಾತ ಅಥವಾ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ಆದಾಯದ ಬೆಂಬಲ, ಸ್ಪಂದನ ರಜೆಗಳು, ಋತುಚಕ್ರದ ರಜೆ, ಮಾತೃತ್ವ ವಿಮೆ ಮುಂತಾದ ಪ್ರಯೋಜನಗಳನ್ನು ಅವರು ಪಡೆಯುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here