ಭಕ್ತಿ ಮತ್ತು ಆಧ್ಯಾತ್ಮ ಮಾರ್ಗದಿಂದ ಉನ್ನತ ಜೀವನ: ರಂಭಾಪುರಿ ಜಗದ್ಗುರುಗಳು

0
9

ಕಲಬುರಗಿ: ಶಾಂತಿ ಸಹಬಾಳ್ವೆ ನೆಮ್ಮದಿಯ ಬದುಕಿಗೆ ಭಕ್ತಿ ಮತ್ತು ಆಧ್ಮಾತ್ಯದ ಮಾರ್ಗವೇ ಉನ್ನತ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರುಗಳಾದ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ನಗರದ ಐವಾನ್ ಶಾಹಿ ಪ್ರದೇಶದಲ್ಲಿರುವ ‘ಓಂ ಆಧ್ಯಾತ್ಮ ಕೇಂದ್ರ’ವನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಧರ್ಮದ ತಳಹದಿಯಲ್ಲಿ ಸಂಸ್ಕಾರವನ್ನು, ಆಧ್ಯಾತ್ಮದ ತಳಹದಿಯಲ್ಲಿ ನೆಮ್ಮದಿಯ ಜೀವನ ಕಂಡುಕೊಳ್ಳುವಂತಾಗಲು, ಈ ಕೇಂದ್ರದ ಸದುಪಯೋಗವಾಗಲಿ ಎಂದು ಶುಭಹಾರೈಸಿದರು.

Contact Your\'s Advertisement; 9902492681

ಇದನ್ನೂ ಓದಿ: ಲಸಿಕಾಕರಣ ಯಶಸ್ವೀಗೆ ಶ್ರಮಿಸಿದ ಕಾರ್ಯಕರ್ತರಿಗೆ ಪ್ರಮಾಣ ಪತ್ರ ವಿತರಣೆ

ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಮತ್ತು ವಿವಿಧ ಪೂಜಾ ಕಾರ್ಯಗಳ ಜೊತೆಗೆ ಆಧ್ಯಾತ್ಮ ಕೇಂದ್ರದ ಮೂಲಕ ನಾಡಿನ ಜನರ ಬದುಕನ್ನು ಹಸನುಗೊಳಿಸುವಂತ ಕಾರ್ಯಕ್ಕೆ ಮುಂದಾಗಿರುವ ಡಾ.ಬಸವರಾಜ ಗುರೂಜಿ ಅವರಿಗೆ ಸಹಕಾರ ನೀಡುವಂತೆ ಸಂದೇಶ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಉದ್ಯಮಿ, ಶರಣ ಜೀವಿ ಶಿವಶರಣಪ್ಪ ಸೀರಿ ಅವರು, ಮನುಷ್ಯ ಜನ್ಮ ದೊಡ್ಡದು. ಅದನ್ನು ಸಾಕಾರಗೊಳಿಸುವಲ್ಲಿ ಧರ್ಮ ಗುರುಗಳ ಆಶೀರ್ವಾದ ಅಗತ್ಯವಾಗಿದೆ. ರಂಭಾಪುರಿ ಜಗದ್ಗುರುಗಳವರ ಕೃಪೆಗೆ ಪಾತ್ರರಾದವರು ಉನ್ನತ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ, ರೇವಣಸಿದ್ದೇಶ್ವರ ಜ್ಯೋತಿಷ್ಯ ಕೇಂದ್ರ ಹಾಗೂ ಓಂ ಆಧ್ಯಾತ್ಮ ಕೇಂದ್ರವನ್ನು ರಂಭಾಪುರಿ ಜಗದ್ಗುರುಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಲಬುರಗಿ ಗ್ರಾಮೀಣ ಶಾಸಕರಾದ ಬಸವರಾಜ ಮತ್ತಿಮುಡು ಅವರು ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿದರು.

ಇದನ್ನೂ ಓದಿ: ರಸ್ತೆ ಅಪಘಾತ: ಕಾಂಗ್ರೆಸ್ ಬ್ಲಾಕ್ ಮುಖಂಡ ಸಾವು

ವೈದ್ಯ ದಂಪತಿಗಳಾದ ಡಾ.ಬಾಬುರಾವ ಬನಾಳೆ, ಡಾ.ಶಕುಂತಲಾ ಬನಾಳೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್, ಅಭಿಷೇಕ ನಿಗ್ಗುಡಗಿ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮವನ್ನು ಸಾಹಿತಿ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ನಿರೂಪಿಸಿದರು.

ಡಾ.ಕೈಲಾಶ ಬನಾಳೆ, ಶಶಿಕಲಾ ಸೀರಿ, ಅಕ್ಕನಾಗಮ್ಮ, ನಾಗರತ್ನ, ಶಿವಯೋಗಿ ಮಠಪತಿ, ಮಲ್ಲಿಕಾರ್ಜುನ ಪಸಾರ ಕಲಗುರ್ತಿ, ವಿಜಯಶಂಕರ ಹೊಸಪೇಟ, ಜಗನ್ನಾಥ ಮತ್ತಿಮುಡು, ಬಸವರಾಜ ಬಟಗೇರಿ, ಸಿದ್ದಾರೂಢ, ಪ್ರಶಾಂತ ತಡಕಲ್, ಚಿತ್ರಶೇಖರ ಪಸಾರ, ಸಿದ್ದಯ್ಯ ಸ್ವಾಮಿ, ಮಂಜುನಾಥ ಗುಂಡಗುರ್ತಿ, ಮುರಳೀಧರ ಕೊಡದೂರ, ಬಸವರಾಜ ಖಾನಾಪುರ, ಬಸವರಾಜ ಮರತೂರ, ಸೂಗೂರೇಶ್ವರ ಗದ್ವಾಲ್ ಇತರರು ಭಾಗವಹಿಸಿದ್ದರು.

ಇದನ್ನೂ ಓದಿ: ನಿರುಗುಡಿ ಗ್ರಾಮಕ್ಕೆ ವಕ್ಕರಿಸಿದ ಬಿರುಗಾಳಿಗೆ ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here