ಕಲಬುರಗಿ : ಸರ್ವ ಸಮಾಜದ ಏಳಿಗೆಗಾಗಿ ಹೋರಾಟ ಮಾಡಿದ ಏಕೈಕ ನಾಯಕರು ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಒಬ್ಬರೇ ಎಂದು ಶಾಸಕ ಎಂ. ವೈ. ಪಾಟೀಲ ಹೇಳಿದರು.
ಅಫಜಲಪುರ ಮತಕ್ಷೇತ್ರದ ಫರಹತಾಬಾದ ಗ್ರಾಮದ ಶ್ರೀ ಶರಣಬಸವೇಶ್ವರ ದೇವಾಲಯ ಆವರಣದಲ್ಲಿ ದಲಿತ ಸಂಘಟನೆ ವಲಯ ಒಕ್ಕೂಟದ ವತಿಯಿಂದ ಹಮ್ಮಿಕೊಂಡ 131 ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾವೆಲ್ಲರೂ ಸ್ವತಂತ್ರವಾಗಿ ಐಶಾರಾಮಿ ಜೀವನ ಮಾಡುತಿದ್ದೇವೆ ಎಂದರೆ ಅದಕ್ಕೆಲ್ಲಾ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುಂಥ ಶ್ರೇಷ್ಠ ಧರ್ಮ ಗ್ರಂಥ ಎಂದು ಕರಯುವ ನಮ್ಮ ದೇಶದ ಸಂವಿಧಾನವೇ ಕಾರಣ ಎಂದು ಶಾಸಕ ಎಂ. ವೈ. ಪಾಟೀಲ ತಿಳಿಸಿದರು.
ಇದನ್ನೂ ಓದಿ: ರಸ್ತೆ ಅಪಘಾತ: ಕಾಂಗ್ರೆಸ್ ಬ್ಲಾಕ್ ಮುಖಂಡ ಸಾವು
ಉಪನ್ಯಾಸಕರಾಗಿ ಅಗಮಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರರಾದ ನಿಖಿತರಾಜ ಮೌರ್ಯ ಅವರು ಮಾತನಾಡಿ, ಪ್ರತಿಯೊಬ್ಬರ ಮನೆಯಲ್ಲಿ ತಮ್ಮ ಮಕ್ಕಳಿಗೆ ಸಂವಿಧಾನ ಹಾಗೂ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ತಿಳಿಸಿದಾಗ ಮಾತ್ರ ಸಂವಿಧಾನ ಅಂದರೆ ಏನು ಅಂತ ಮುಂದಿನ ಪೀಳಿಗೆಗೆ ಅರ್ಥ ಆಗುತ್ತದೆ ಎಂದು ಬಂದಿದ್ದ ಮಹಿಳೆಯರಿಗೆ ಕಿವಿ ಮಾತು ಹೇಳಿದರು.
ಜೆಡಿಎಸ್ ರಾಜ್ಯ ವೀಕ್ಷಕರಾದ ನಜ್ಮಾ ನಜೀರ್ ಮಾತನಾಡಿ, ನಾವೆಲ್ಲರೂ ಉಸಿರಾಡಲು ಸಾದ್ಯವಾಗಿದೆ ಎಂದರೆ ಅದಕ್ಕೆಲ್ಲಾ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಬರೆದ ಸಂವಿಧಾನವೇ ಕಾರಣ ಎಂದು ಹೇಳಿದರು.
ಇದನ್ನೂ ಓದಿ: ನಿರುಗುಡಿ ಗ್ರಾಮಕ್ಕೆ ವಕ್ಕರಿಸಿದ ಬಿರುಗಾಳಿಗೆ ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಈ ಸಂದರ್ಭದಲ್ಲಿ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖನ್ನಾ, ಫರಹತಾಬಾದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುರೇಶ್ ತಿಬಶೆಟ್ಟಿ, ಮಾಜಿ ಜಿ.ಪಂ. ಅದ್ಯಕ್ಷ ಸಾಯಬಣ್ಣಾ ನೀಲಪ್ಪಗೋಳ, ಮಾಜಿ ಜಿ.ಪಂ.ಸದಸ್ಯರಾದ ಸಿದ್ಧಾರ್ಥ ಬಸರಿಗಿಡ, ಮುಖಂಡರಾದ ಅರ್ಜುನ ಭದ್ರೆ, ಮರೆಪ್ಪ ಹಳ್ಳಿ, ಬಾಷಾ ಪಟೇಲ ಹಸರಗುಂಡಗಿ, ಹುಣಚಿರಾಯ ಸೀತನೂರ, ಖಾಜಾ ಹುಸೇನ್ ಮುಲ್ಲಾ, ರಮೇಶ ನಾಟೀಕಾರ, ನಾಗೇಂದ್ರ ನಿಂಬರ್ಗಿ, ಶಿವಕುಮಾರ್ ಶರ್ಮಾ, ಬಸವರಾಜ ದೊಡ್ಡಮನಿ(ನದಿಸಿನ್ನೂರ) ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.