ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

0
62

ಬೆಂಗಳೂರು: ನಿನ್ನೆ ಸಂಜೆ ನನ್ನ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ನೋಟೀಸ್ ತಲುಪಿಸಿದ್ದು, ಅದರಲ್ಲಿ ‘ತಾವು ದಿನಾಂಕ 23-04-2022ರಂದು ಪತ್ರಿಕಾಗೋಷ್ಠಿ ನಡೆಸಿ 3-10-2021ರಂದು ನಡೆದ 541 ಸಿವಿಲ್ ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮ್ಮ ಬಳಿ ಸಾಕ್ಷ್ಯವಿರುವುದಾಗಿ ಮಾಹಿತಿ ನೀಡಿದ್ದು, ಈ ಪ್ರಕರಣ ಬಹಳ ಸೂಕ್ಷ್ಮ ಹಾಗೂ ಗಂಭೀರ ಪ್ರಕರಣವಾಗಿದ್ದು, ಲಭ್ಯವಿರುವ ಎಲ್ಲ ಮಾಹಿತಿ ತ್ವರಿತಗತಿಯಲ್ಲಿ ಸಂಗ್ರಹಿಸುವ ಅಗತ್ಯವಿರುವುದರಿಂದ ತಮ್ಮ ಬಳಿ ಇರುವ ಸಾಕ್ಷಿ ಹಾಗೂ ದಾಖಲೆ ಪರಿಶೀಲಿಸಿ ತನಿಖೆ ಕೈಗೊಳ್ಳುವುದು ಅತಿ ಅವಶ್ಯವಾಗಿದ್ದು, ತನಿಖಾಧಿಕಾರಿಗಳು ದಾಖಲೆ ಸಂಗ್ರಹಿಸಲು ಸೂಚಿಸಿದ್ದು, ತಾವು ಇಂದು 11.30ಕ್ಕೆ ಹಾಜರಾಗುವಂತೆ’ ತಿಳಿಸಿದ್ದಾರೆ.

ಈ ನೋಟೀಸ್ ನಿಂದ ಈ ಸರ್ಕಾರ ಹಾಗೂ ಗೃಹ ಇಲಾಖೆಯ ಕಾರ್ಯವೈಕರಿ, ಅಸಮರ್ಥತೆಗೆ ಸಾಕ್ಷಿಯಾಗಿದೆ. ಹೀಗಾಗಿ ಸರ್ಕಾರ ಹಾಗೂ ತನಿಖಾಧಿಕಾರಿಗಳು ನಾನು ಇದುವರೆಗೂ ಈ ವಿಚಾರವಾಗಿ ನಡೆಸಿರುವ ಪತ್ರಿಕಾಗೋಷ್ಠಿಯನ್ನು ಕಣ್ಣು ತೆರೆದು, ಕಿವಿಗೊಟ್ಟಿ ನೋಡಬಕು ಎಂದು ಹೇಳಲು ಬಯಸುತ್ತೇನೆ. ನಾನು ಯಾವುದೇ ಪತ್ರಿಕಾಗೋಷ್ಠಿಯಲ್ಲಿ ನಾನು ತನಿಖೆ ಮಾಡಿ, ಸಾರ್ವಜನಿಕ ವಲಯಕ್ಕೆ ಹೊರತುಪಡಿಸಿ ನನ್ನ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿಕೊಂಡಿಲ್ಲ. ನಾನು ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಸಾಕ್ಷ್ಯಾಧಾರಗಳನ್ನಷ್ಟೇ ಮಾಧ್ಯಮಗಳ ಮುಂದಿಟ್ಟಿದ್ದೇನೆ.

Contact Your\'s Advertisement; 9902492681

ಸಾರ್ವಜನಿಕ ವಲಯಗಳಲ್ಲಿ ಇರುವ ಮಾಹಿತಿ ಅವರ ಬಳಿ ಇಲ್ಲ ಎಂದು ಹೇಳುತ್ತಿರುವುದು ಬಹಳ ಆಶ್ಚರ್ಯವಾಗುತ್ತಿದೆ. ಜ.1ರಂದು ಅಭ್ಯರ್ಥಿಗಳು ಗೃಹ ಸಚಿವರನ್ನು ಭೇಟಿ ಮಾಡಿರುವ ಮಾಹಿತಿಯನ್ನು ಸಚಿವರೇ ಟ್ವೀಟ್ ಮಾಡಿದ್ದಾರೆ. ಜ.25ರಂದು ಕೆಲವು ಅಭ್ಯರ್ಥಿಗಳು ಪೊಲೀಸ್ ಮಹಾನಿರ್ದೇಶಕರಿಗೆ ಕೊಟ್ಟಿರುವ ಮನವಿ ಪತ್ರದ ಸ್ವೀಕೃತಿ ಪ್ರತಿ. ಜ.22ರಂದು ಗೃಹ ಸಚಿವರು ಶಿವಮೊಗ್ಗದಲ್ಲಿ ಈ ಪರೀಕ್ಷೆ ಪಾಸ್ ಮಾಡಲಾಗದವರು ಅಸೂಯೆಯಿಂದ ಅಕ್ರಮ ನಡೆದಿರುವ ಆರೋಪ ಮಾಡಿದ್ದಾರೆ ಎಂದು ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತ: ಕಾಂಗ್ರೆಸ್ ಬ್ಲಾಕ್ ಮುಖಂಡ ಸಾವು

ಜ.29ರಂದು ಆರ್ಟಿಕಲ್ 371 ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ವರದಿ ಬಂದಿತ್ತು. ಫೆ.7ರಂದು ನೇಮಕಾತಿಯನ್ನು ಗೃಹ ಇಲಾಖೆಯೇ ತಡೆ ಹಿಡಿದಿದೆ. ಇನ್ನು 3-2-2022ರಲ್ಲಿ ಸಚಿವ ಪ್ರಭು ಚೌಹಾಣ್ ಅವರು ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುತ್ತಾರೆ.

ಫೆ.17ರಂದು ಗೃಹ ಸಚಿವರು ಈ ನೇಮಕದ ಅಕ್ರಮ ವಿಚಾರವಾಗಿ ಮೇಲ್ಮನೆಯಲ್ಲಿ ಅರವಿಂದ ಅರಳಿ ಅವರ ಪ್ರಶ್ನೆಗೆ ಕೊಟ್ಟ ಉತ್ತರ 10-3-2022ರಂದು ಸುಶೀಲ್ ನಮೋಶಿ ಅವರಿಗೆ ಹಾಗೂ ಎಶ್ ರವಿ ಅವರ ಪ್ರಶ್ನೆಗಳಿಗೆ ಗೃಹ ಸಚಿವರು ಮೇಲ್ಮನೆಯಲ್ಲಿ ಭಿನ್ನ ಉತ್ತರ ಕೊಟ್ಟಿದ್ದಾರೆ. ಮಾರ್ಚ್ 24ರಂದು ಯು.ಬಿ ವೆಂಕಟೇಶ್ ಅವರ ಪ್ರಶ್ನೆಗೆ ಈ ನೇಮಕಾತಿ ಸುಗಮವಾಗಿ ಸಾಗುತ್ತಿದೆ ಎಂದು ಗೃಹ ಸಚಿವರು ಉತ್ತರ ಕೊಟ್ಟಿದ್ದೀರಿ. ಏ.9ರಂದು ಚೈಕ್ ಪೋಲೀಸ್ ಠಾಣೆಯಲ್ಲಿ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿದ್ದರು.

ಇವಿಷ್ಟು ನಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟ ದಾಖಲೆಗಳು. ಇದ್ಯಾವುದೂ ಸರ್ಕಾರದ ಬಳಿ ಇಲ್ಲವೇ? ಸಂಭಾವ್ಯ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿ ಇನ್ನು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಓಡಾಡುತ್ತಿರುವ ಮಾಹಿತಿ ಇಲಾಖೆ ಬಳಿ ಇಲ್ಲವೇ? ಎಬಿವಿಪಿ ಕಾರ್ಯಕರ್ತ ಅರುಣ್ ಅಂತಿಮ ಪಟ್ಟಿಯಲ್ಲಿ ಹೆಸರು ಬಂದಿರುವ ಮಾಹಿತಿ ನಮಗೆ ಲಭ್ಯವಾಗಿದ್ದು, ನಿಮಗೆ ಲಭ್ಯವಾಗಿಲ್ಲವೇ?ನನಗೆ ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಈ ಎಲ್ಲ ದಾಖಲೆಗಳು, ಪರೀಕ್ಷೆಯ ಒಎಂಆರ್ ಪತ್ರಿಕೆಗಳು ಲಭ್ಯವಾಗುತ್ತಿದ್ದು, ನಿಮಗೆ ಲಭ್ಯವಾಗಿಲ್ಲವೇ? ಈ ಪ್ರಕರಣದಲ್ಲಿ ದಿವ್ಯಾ ಹಾಗರಗಿ ಅವರ ಹೆಸರು ಕೇಳಿಬಂತು, ನಂತರ ಮಾಹಂತೇಶ್ ಪಾಟೀಲ್, ಆರ್.ಡಿ ಪಾಟೀಲ್ ಬಂಧನವಾದರು. ನಾವು ಬಿಡುಗಡೆ ಮಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿತ್ತು, ಅಲ್ಲದೇ ನಾವು ಬಿಡುಗಡೆಗೂ ಮುನ್ನ ಅಂದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಆ ಬಗ್ಗೆ ವರದಿ ಬಂದಿತ್ತು. ಆಮೂಲಕ ಆ ವಿಚಾರ ಸಾರ್ವಜನಿಕ ವಲಯದಲ್ಲಿತ್ತು. ನಾನು ಈ ಆಡಿಯೋವನ್ನು ರಹಸ್ಯ ಕಾರ್ಯಾಚರಣೆ ಮೂಲಕ ಮಾಡಿಲ್ಲವಲ್ಲ.

ಇದನ್ನೂ ಓದಿ: ಲಸಿಕಾಕರಣ ಯಶಸ್ವೀಗೆ ಶ್ರಮಿಸಿದ ಕಾರ್ಯಕರ್ತರಿಗೆ ಪ್ರಮಾಣ ಪತ್ರ ವಿತರಣೆ

ಆ ಆಡಿಯೋದಲ್ಲಿ ಒಬ್ಬ ಅಭ್ಯರ್ಥಿ ನಾವು ಇದರಲ್ಲಿ ಸಿಕ್ಕಿಕೊಳ್ಳುವುದಿಲ್ಲವಲ್ಲವೇ ಎಂದು ಕೇಳಿದಾಗ, ಮಧ್ಯವರ್ತಿ, ಇದರಲ್ಲಿ ಮೇಲಿಂದ ಕೆಳಗಿನವರೆಗೂ ಎಲ್ಲ ಪ್ರಭಾವಿವ್ಯಕ್ತಿಗಳಿದ್ದು, ಸಿಕ್ಕಿಬೀಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. 545 ನೇಮಕಾತಿಯಲ್ಲಿ ಪರೀಕ್ಷೆ ನಡೆಸುವವರು ಭಾಗಿಯಾಗಿದ್ದಾರೆ ಎಂಬ ಮಾತುಗಳಿವೆ.

ಇದೆಲ್ಲವೂ ರಾಜ್ಯ ಗುರ್ತಚರ ಇಲಾಖೆ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ. ಈ ಹಿಂದೆ ಗುಪ್ತಚರ ಇಲಾಖೆಗೆ ತನ್ನದೇ ಆದ ಮೂಲ, ಸೂತ್ರಗಳಿರುತ್ತಿದ್ದವು. ಆದರೆ ಈಗ ಪತ್ರಿಕೆ ವರದಿ, ಮಾಧ್ಯಮ ವರದಿ ನೋಡಿ ಸರ್ಕಾರಕ್ಕೆ ಮಾಹಿತಿ ನೀಡುತ್ತಿವೆ. ಇವರಿಗೆ ಸಾಮಾನ್ಯ ಪ್ರಜ್ಞೆಯೂ ಇಲ್ಲವಾಗಿದೆ.

ಆಡಿಯೋದಲ್ಲಿ ಶ್ರೀಶೈಲ ಬಿರಾದಾರ್ ಎಂಬ ಅಭ್ಯರ್ಥಿ ಮಧ್ಯವರ್ತಿ ಜತೆ ಮಾತನಾಡಿದ್ದಾರೆ ಎಂಬ ಮಾಹಿತಿ ಸರ್ಕಾರದ ಬಳಿ ಇಲ್ಲವೇ? ಇವರು ಕಣ್ಣಮುಂದೆ ಇರುವ ಸಾಕ್ಷಿಗಳನ್ನು ನೋಡಲು ತಯಾರಿಲ್ಲ. ಹೀಗಾಗಿ ನಾನು ಕಾಲಾನುಕ್ರಮವಾಗಿ ಸರ್ಕಾರಿ ದಾಖಲೆ, ಸಚಿವರ ಹೇಳಿಕೆ, ಅಧಿಕಾರಿಗಳ ಹೇಳಿಕೆಯನ್ನು ಜನರ ಮುಂದೆ ಇಟ್ಟಿದ್ದೇನೆ.

ಇದನ್ನೂ ಓದಿ: ಲಸಿಕಾಕರಣ ಯಶಸ್ವೀಗೆ ಶ್ರಮಿಸಿದ ಕಾರ್ಯಕರ್ತರಿಗೆ ಪ್ರಮಾಣ ಪತ್ರ ವಿತರಣೆ

ಆದರೂ ನನ್ನಿಂದ ಸಾಕ್ಷಿ ಕೇಳುವುದಾದರೆ, ನೀವೇನು ಕತ್ತೆ ಕಾಯುತ್ತಿದ್ದೀರಾ? ಗೃಹ ಇಲಾಖೆ ಏನು ಮಾಡುತ್ತಿದೆ? ಈ ಆಡಿಯೋ ಬಹಿರಂಗವಾಗಿ ಮೂರ್ನಾಲ್ಕು ದಿನಗಳಾದರೂ ಎಫ್ಐಆರ್ ಯಾಕೆ ದಾಖಲಾಗಿಲ್ಲ? ಇದಕ್ಕೆ 3 ದಿನ ಕಾಲಾವಕಾಶ ಬೇಕಾ? ಇದರಿಂದ ಈ ಅಕ್ರಮದಲ್ಲಿ ಗೃಹ ಇಲಾಖೆ, ಗೃಹ ಸಚಿವರು ಶಾಮೀಲಾಗಿದ್ದಾರೆ ಎಂದು ಭಾವಿಸಬಹುದೇ? ನಾನು ಈ ಪ್ರಕರಣದಲ್ಲಿ ಸಾಕ್ಷಿಯೇ? ಅಥವಾ ಆರೋಪಿಯೇ? ಯಾವ ಕಾರಣಕ್ಕೆ ತನಿಖೆ ಮಾಡಲು ನನಗೆ ನೊಟೀಸ್ ನೀಡಲಾಗಿದೆ? ಈ ಪ್ರಕರಣದ ಭಾಗವಾಗಿರುವವರಿಗೆ ಯಾಕೆ ನೊಟೀಸ್ ನೀಡುತ್ತಿಲ್ಲ? ಈ ನೇಮಕಾತಿ ಪ್ರಕ್ರಿಯೆಯ ಕಾರ್ಯಕಾರಿ ಮುಖ್ಯಸ್ಥರು ಗೃಹ ಸಚಿವರಾಗಿರುತ್ತಾರೆ ಹೀಗಾಗಿ ಆಗಿನ ಗೃಹ ಸಚಿವರಿಗೆ ಯಾಕೆ ನೊಟೀಸ್ ಯಾಕಿಲ್ಲ? ಎಡಿಜಿಪಿ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲಾಗುತ್ತಿದೆ? ಅವರನ್ನು ಬೇರೆ ಜವಾಬ್ದಾರಿ ನೀಡಿ ಪಾರದರ್ಶಕ ತನಿಖೆ ನಡೆಸಿ, ಅವರಿಗೆ ಕ್ಲೀನ್ ಚಿಟ್ ಸಿಕ್ಕರೆ ಅವರನ್ನು ಮತ್ತೆ ಇದೇ ಹುದ್ದಗೆ ತಂದು ಕೂರಿಸಿ ನಮ್ಮ ಅಭ್ಯಂತರವಿಲ್ಲ.

ಇನ್ನು ಈಗಿನ ಗೃಹ ಸಚಿವರ ವಿಚಾರಣೆ ಯಾಕೆ ನಡೆಯುತ್ತಿಲ್ಲ? ಈ ಪ್ರಕರಣದಲ್ಲಿ ಎಷ್ಟು ಅಧಿಕಾರಿಗಳಿಗೆ ನೀವು ನೊಟೀಸ್ ಜಾರಿ ಮಾಡಿದ್ದೀರಿ? ಇವರಿಗೆ ನೊಟೀಸ್ ನೀಡುವ ಬದಲು, ಸಾರ್ವಜನಿಕ ವಲಯದಲ್ಲಿ ಮಾಹಿತಿ ಸಂಗ್ರಹಿಸಿ ಚರ್ಚೆಗೆ ತಂದವರಿಗೆ ನೊಟೀಸ್ ನೀಡುತ್ತೀರಾ?ಈ ಹಗರಣದ ನಂತರ ಕೆಲ ದಿನಗಳ ಹಿಂದೆ ಗೃಹ ಸಚಿವರು ಆರೋಪಿ ದಿವ್ಯಾ ಹಾಗರಗಿ ಅವರ ಮನೆಗೆ ಹೋಗಿ ಸನ್ಮಾನ ಮಾಡಿಸಿಕೊಂಡು, ಉಪಹಾರ ಸೇವಿಸಿ, ಆರತಿ ಮಾಡಿಸಿಕೊಂಡು ಬಂದಿದ್ದಾರೆ. ಅವರಿಗೆ ನೊಟೀಸ್ ಯಾಕಿಲ್ಲ? ಆರೋಪಿಯು ಎಲ್ಲ ಬಿಜೆಪಿ ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಅವರು ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ, ರಾಜ್ಯ ಪರಿಷತ್ ಕೌನ್ಸಿಲ್ ಸದಸ್ಯರು, ದಿಶಾ ಸಮಿತಿ ನಾಮನಿರ್ದೇಶಿತರು ಅವರು ಬಿಜೆಪಿಯವರಲ್ಲವಂತೆ.

ಇದನ್ನೂ ಓದಿ: ಶಾಸಕಿ ಕನೀಜ್ ಫಾತೀಮಾ ಅವರಿಂದ ಕಲಬುರಗಿಯಲ್ಲಿ ಸೌಹಾರ್ದ ಇಫ್ತೆಯಾರ್ ಕೂಟ

ಇವರ ಜ್ಞಾನಜ್ಯೋತಿ ಸಂಸ್ಥೆ ಪರೀಕ್ಷೆ ನಡೆಸಲು ಯೋಗ್ಯವಾದ ಕೇಂದ್ರವಲ್ಲ ಎಂದು ಬರೆದುಕೊಟ್ಟ ನಂತರ ಕಲ್ಬುರ್ಗಿಯ ಬಿಜೆಪಿ ಸಂಸದರು ಈ ಸಂಸ್ಥೆಯನ್ನು ಪರೀಕ್ಷೆ ಕೇಂದ್ರವಾಗಿ ಮಾಡಬೇಕು ಎಂದು ಪತ್ರ ಬರಂದಿದ್ದಾರಂತಲ್ಲ. ಆ ಪತ್ರ ಇಲ್ಲವೇ? ಅವರಿಗೆ ಯಾಕೆ ನೊಟೀಸ್ ಜಾರಿ ಮಾಡಿಲ್ಲ? ಪ್ರಿಯಾಂಕ್ ಖರ್ಗೆ ಅವರನ್ನು ತನಿಖೆಗೆ ಒಳಪಡಿಸಿದರೆ ಎಲ್ಲ ತಿಳಿಯುತ್ತದೆ ಎಂದು ಸಚಿವ ಸುನೀಲ್ ಕುಮಾರ್ ಅವರು ನಿನ್ನೆ ಹೇಳಿದ್ದಾರೆ. ಅವರು ಸಾಮಾನ್ಯ ಪ್ರಜ್ಞ ಉಪಯೋಗಿಸಲಿ. ನೀವು ನಿಮ್ಮ ಸಿಎಂ, ಗೃಹ ಮಂತ್ರಿಗಳನ್ನು ತನಿಖೆಗೆ ಒಳಪಡಿಸಿ ಎಲ್ಲವೂ ಬಹಿರಂಗವಾಗುತ್ತದೆ. ಈ ಪ್ರಕರಣದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾರೇ ಇರಲಿ, ಎಲ್ಲರನ್ನು ಒದ್ದು ಒಳಗೆ ಹಾಕಿ. ರಾಜ್ಯದ ಯುವಕರ ಭವಿಷ್ಯದ ಜತೆ ಚೆಲ್ಲಾಟವಾಡುವವರನ್ನು ಜೈಲಿಗೆ ಹಾಕಿ.

ನಿಮ್ಮ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಿಂತ ಹೆಚ್ಚು ಪ್ರಭಾವಶಾಲಿಯೇ? ನಾನು ಪ್ರಭಾವಿಯಾಗಿದ್ದರೆ, ಅದನ್ನು ಹೇಳಿ. ನನ್ನ ವಿರುದ್ಧ ದಾಖಲೆ ಇದ್ದರೆ ಬಂಧಿಸಿ. ದಿವ್ಯಾ ಅವರಾಗಲಿ, ಆರ್.ಡಿ ಪಾಟೀಲ್ ಅವರೆಲ್ಲ ಚಿಕ್ಕ ಮೀನುಗಳು, ಇವರು ಹಣ ಪಡೆದು ಪರೀಕ್ಷಾ ಕೇಂದ್ರ ನಿಗದಿ ಪಡಿಸುತ್ತಾರೆ. ಆದರೆ ಈ ಪರೀಕ್ಷಾ ಕೇಂದ್ರಕ್ಕೆ ಅನುಮತಿ ನೀಡುವುದು ಬೆಂಗಳೂರಿನಲ್ಲಿರುವ ಅಧಿಕಾರಿಗಳು ಹಾಗೂ ಮಂತ್ರಿಗಳು.

ಇಲ್ಲಿ ಸಂಗ್ರಹಿಸಲಾಗ ಹಣ ಎಲ್ಲಿಂದ ಎಲ್ಲೆಲ್ಲಿಗೆ ಹರಿದಾಡಿದೆ ಎಂದು ಪತ್ತೆ ಹಚ್ಚಲು ಇವರಿಂದ ಆಗುತ್ತಿಲ್ಲ. ಇದನ್ನು ಮಾಡಿದರೆ, ಈ ಅವ್ಯವಹಾರ ಕಲಬುರ್ಗಿ ದಾಟಿ ವಿಧಾನಸೌಧ ಮೆಟ್ಟಿಲು, ಮಂತ್ರಿಗಳ ಮನೆ, ಅಧಿಕಾರಿಗಳ ಕಚೇರಿಗೆ ಹೋಗಬೇಕಾಗುತ್ತದೆ. ಎಡಿಜಿಪಿ ಕಚೇರಿ ದಾಳಿ ಮಾಡಿದ್ದು ಯಾಕೆ? ನಿನ್ನೆ ರೇಣುಕಾಚಾರ್ಯ ಅವರು ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನವರು ಕಿವಿಗೆ ಲಾಲ್ ಬಾಗ್ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿರುವುದನ್ನು ಸದನದಲ್ಲಿ ಒಪ್ಪಿಕೊಂಡಿದ್ದು, ಅಂತಹವರಿಂದ ನಾವು ಪಾಠ ಕಲಿಯಬೇಕಾದ ದುರಂತ ಬಂದಿದೆ.

ಇವರು ಜನರಿಗೆ ಒಂದು ಕಡೆ ಲಾಲ್ ಬಾಗ, ಮತ್ತೊಂದುಕಡೆ ಕಬ್ಬನ್ ಪಾರ್ಕ್ ಇಟ್ಟಿದ್ದಾರೆ.  ಇವರು ಯುವಕರ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಕುಟುಂಬದ ಸದಸ್ಯರು ನಕರಿ ಜಾತಿ ಪ್ರಮಾಣ ಪತ್ರ ಪಡೆದು ಎಷ್ಟು ಯುವಕರ ಭವಿಷ್ಯ ಹಾಳು ಮಾಡಿದ್ದೀರ. ಇದರ ಲೆಕ್ಕ ಯಾರು ಕೊಡುತ್ತಾರೆ? ಇನ್ನು ಅವರು ದಯಮಾಡಿ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡದಿರುವುದು ಉತ್ತ. ಇದು ನನ್ನ ವೈಯಕ್ತಿಕ ಸಲಹೆ. ಅವರು ಇದಕ್ಕಾಗಿ ನೇಮಿಸಿರುವವರು ಕುಡಿದ ಅಮಲಿನಲ್ಲಿ ಈ ರೀತಿ ಬರೆಯುತ್ತಾರೆ ಎಂದು ಕಾಣುತ್ತದೆ.

ಇದನ್ನೂ ಓದಿ: ನಿರುಗುಡಿ ಗ್ರಾಮಕ್ಕೆ ವಕ್ಕರಿಸಿದ ಬಿರುಗಾಳಿಗೆ ೬೦ಕ್ಕೂ ಹೆಚ್ಚು ಮನೆಗಳಿಗೆ ಹಾನಿ

ಬಿಜೆಪಿಯಲ್ಲಿ ಸಾಮಾನ್ಯ ಪ್ರಜ್ಞೆ ಇಲ್ಲವೆಂಬುದು ಸ್ಪಷ್ಟಾವಾಗಿ ತಿಳಿಯುತ್ತಿದೆ. ಅವರದೇ ಸರ್ಕಾರ, ಅವರದೇ ಅಧಿಕಾರಿಗಳು ಆದರೂ ತನಿಖೆ ಮಾಡಲು ವಿರೋಧ ಪಕ್ಷದವರನ್ನು ಕರೆಯುತ್ತಾರೆ. ಅಂದರೆ ಯಾವ ಮಟ್ಟಿಗೆ ಇವರು ಸಮರ್ಥರಿರಬಹುದು. ಇನ್ನು ಕಟೀಲ್ ಹಾಗೂ ಮಾನ್ಯ ಮುಖ್ಯಮಂತ್ರಿಗಳಿಗೆ ಒಂದು ಮನವಿ ಮಾಡುತ್ತೇನೆ ಅವರು ಯತ್ನಾಳ್ ಅವರ ಸಲಹೆ ಪಡೆಯಲಿ. ಅವರು ಈ ಗೃಹ ಸಚಿವರು ಸರಿ ಇಲ್ಲ, ಸಮರ್ಥ ಗೃಹ ಸಚಿವರಿಗೆ ಜಾಹೀರಾತು ನೀಡಿ ಎಂದು ಹೇಳಿದ್ದಾರೆ. ಅವರ ಸಲಹೆ ಸ್ವೀಕರಿಸಿ.

ಇತ್ತೀಚೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಅವರು ಸರ್ಕಾರಕ್ಕೆ ಗಂಡಸ್ಥನದ ಸವಾಲು ಹಾಕಿದ್ದಾರೆ. ಆದರೂ ನೀವು ಸುಮ್ಮನೆ ಕೂತಿದ್ದೀರಿ. ಇದೆನಾ ಸರ್ಕಾರ ನಡೆಸುವ ರೀತಿ. ಗೃಹ ಸಚಿವರು ನನಗೆ ಯಾರ ಪ್ರಮಾಣ ಪತ್ರ ಬೇಡ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರಾಗಲಿ, ಡಿ.ಕೆ. ಶಿವಕುಮಾರ್ ಅವರಾಗಲಿ ನಿಮಗೆ ಪ್ರಮಾಣಪತ್ರ ನೀಡುತ್ತಿಲ್ಲ, ನಿಮ್ಮ ಪಕ್ಷದ ಶಾಸಕರು, ನಾಯಕರು, ಅದಿಕಾರಿಗಳು ಪರೀಕ್ಷೆ ಬರೆದ ಅಭ್ಯರ್ಥಿಗಳು ಪ್ರಮಾಣಪತ್ರ ನೀಡಿದ್ದಾರೆ.

ಆಡಿಯೋ ಬಿಡುಗಡೆ ಆದ ನಂತರ ವೈಯಕ್ತಿಕ ದಾಳಿ ನಡೆಯುತ್ತಿದೆ. ನನ್ನ ಟ್ವಿಟ್ಟರ್ ಖಾತೆ ಹ್ಯಾಕ್ ಆಗುತ್ತದೆ, ಬೆದರಿಕೆ ಕರೆಗಳು ಬರುತ್ತವೆ. ಸಿಐಡಿ ನೊಟೀಸ್ ಜಾರಿಯಾಗುತ್ತದೆ. ಹ್ಯಾಕ್ ಬಗ್ಗೆ ಸೈಬರ್ ಅಪರಾಧ ವಿಭಾಗಕ್ಕೆ ದೂರು ನೀಡಿದ್ದು, ಅವರೇ ಹೇಳಬೇಕು. ಈ ಎಲ್ಲದಕ್ಕೂ ಇರುವ ಲಿಂಕ್ ಏನು? ನಾವು ಸರ್ಕಾರದ ವೈಫಲ್ಯ ಎತ್ತಿ ಹಿಡಿಯಬಾರದೆ? ನಿನ್ನೆ ಬಂದ ವಿಡಿಯೋಗೂ ನಾವೆ ಕಾರಣವೇ? ಆರಂಭದಲ್ಲಿ ಇದು ಪಿಎಶ್ ಐ ಎಂದು ಭಾವಿಸಿದೆವು, ನಂತರ ಅದು ಎಫ್ ಡಿಎ ಇರಬಹುದು ಎಂದರು, ನಂತರ ಕೆಲವರು ಪಶುವೈದ್ಯ ನೇಮಕಾತಿಯದ್ದು ಎಂದರು. ಅಂತಿಮವಾಗಿ ಅದು ಪಿಡಬ್ಲ್ಯೂಡಿ ಕಿರಿಯ ಇಂಜಿನಿಯರ್ ನೇಮಕದ್ದಾಗಿದೆ.

ಇದನ್ನೂ ಓದಿ: ಸೇಡಂನಲ್ಲಿ ಜೆಡಿಎಸ್ ಪಕ್ಷದ ಜನತಾ ಜಲಧಾರೆ ರಥ ಯಾತ್ರೆಗೆ ಚಾಲನೆ

ಈ ಎಲ್ಲ ಬೆಳವಣಿಗೆ ಈ ಸರ್ಕಾರ ಯುವಕಕರ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ. ಪ್ರಾಮಾಣಿಕ ಯುವಕರಿಗೆ ರಾಜ್ಯ ಸರ್ಕಾರದಲ್ಲಿ ಉದ್ಯೋಗ ಸಿಗುವುದಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಇವರು ಯಾವುದೇ ನೇಮಕಾತಿ ಮಾಡಿದರೂ ಹಣವಿರುವವರು ಮಾತ್ರ ಆಯ್ಕೆಯಾಗಬಹುದು. ಹಣ ಬಿಸಾಕಿ ತಮಾಷೆ ನೋಡಿ ಎಂಬ ಸಂದೇಶ ಸಾರುತ್ತಿದ್ದಾರೆ.

ಹಣ ಕೊಟ್ಟು ಹುದ್ದೆಗೆ ಬಂದವರು ತಾವು ಹಾಕಿದ ಬಂಡವಾಳ ವಾಪಸ್ ಪಡೆಯಲು ಜನರ ಜೇಬಿಗೆ ಕೈಹಾಕುತ್ತಾರೆ. ಆಗ ಉತ್ತಮ ಆಡಳಿತ ನೀಡಲು ಹೇಗೆ ಸಾಧ್ಯ? ಸಾರ್ವಜನಿಕರಿಗೆ ಸರ್ಕಾರದ ಯೋಜನೆ ತಲುಪುವುದು ಹೇಗೆ? ಇನ್ನು ನೊಟೀಸ್ ವಿಚಾರವಾಗಿ ಹೇಳುವುದಾದರೆ, ನಾನು ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ. ಜನರ ಸಮಸ್ಯೆ ಎತ್ತಿ ಹಿಡಿಯಲು ಜನ ನನ್ನನ್ನು ಆಯ್ಕೆ ಮಾಡಿದ್ದಾರೆ ಹೊರತು, ನೀವು ಹಾಕಿದ ತಾಳಕ್ಕೆ ಕುಣಿಯಲು ಅಲ್ಲ. ತನಿಖೆ ಮಾಡಿ ಎಂದರೆ ಕುಣಿಯಲಾಗದವರು ನೆಲ ಡೊಂಕು ಎಂಬಂತೆ ನಮಗೆ ನೊಟೀಸ್ ನೀಡುತ್ತೀರಾ? ಕಾಂಗ್ರೆಸ್ ವಕ್ತಾರನಾಗಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ನಾವು ಏನು ಮಾಡಬಾರದೆ? ಇವರಿಗೆ ಹೆದರಿ ಇವರು ಹೇಳಿದಂತೆ ಕೇಳಬೇಕಾ? ಜನ ನಮ್ಮ ಬಳಿ ಬಂದು ತಮ್ಮ ಅಹವಾಲು ಹೇಳಿಕೊಳ್ಳುತ್ತಾರೆ. ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನನ್ನ ಕರ್ತವ್ಯ. ಇದನ್ನು ನಿರ್ಧರಿಸಲು ನಿವ್ಯಾರು? ಸಂವಿಧಾನದಲ್ಲಿ ನಮ್ಮ ಜವಾಬ್ದಾರಿ ಸ್ಪಷ್ಟವಾಗಿದೆ.

ನಿಮ್ಮ ತನಿಖೆ ಪ್ರಕರಣ ಮುಚ್ಚಿಹಾಕುವಂತೆ ನಡೆಯುತ್ತಿದೆಯೇ ಹೊರತು, ಯುವಕರಿಗೆ ನ್ಯಾಯ ಒದಗಿಸುವಂತಿಲ್ಲ. ನಿಮಗೆ ವಿಚಾರಣೆ ಮಾಡುವ ಯೋಗ್ಯತೆ ಇಲ್ಲವಾದರೆ ನಾನು ಏನು ಮಾಡಲು ಸಾಧ್ಯವಿಲ್ಲ. ನಾನು ವಕೀಲರ ಜತೆ ಮಾತನಾಡಿದ್ದು, ನಾನು ವಿಚಾರಣೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ತಿಳಿಸಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿ ನಿಂತು ಬೇರೆಯವರಿಗೆ ಮಾದರಿಯಾಗಿ ನಿಲ್ಲಲು, ನಾನು ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಮುಂದಿಟ್ಟಿರುವ ವಿಚಾರ ಹಾಗೂ ದಾಖಲೆಗಳನ್ನು ಲಿಖಿತ ರೂಪದಲ್ಲಿ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ವೇಳೆಗೆ ಅಧಿಕಾರಿಗಳಿಗೆ ವಕೀಲರ ಮೂಲಕ ಸಲ್ಲಿಸುತ್ತೇನೆ.

ಇದನ್ನೂ ಓದಿ: ಹಿರಿಯರನ್ನು ಗೌರವಿಸಿ, ಸಂಸ್ಕಾರಯುತ ಸಮಾಜ ನಿರ್ಮಿಸಿ: ಸಂಜೀವಕುಮಾರ ಶೆಟ್ಟಿ

ನೀವು ತನಿಖೆ ಮೇಲೆ ಗಮನಹರಿಸಿ. ದಿವ್ಯಾಹಾಗರಗಿ ಅವರ ಬಂಧನ ಈವರೆಗೂ ಆಗಿಲ್ಲ ಯಾಕೆ? ಈ ಪ್ರಕರಣದಲ್ಲಿ ವಿಷಯ ಗಮನ ಬೇರೆಡೆ ಸೆಳಎಯಲು ನಮಗೆ ನೊಟೀಸ್ ನೀಡುತ್ತಿರುವುದೇಕೆ? ಇಲ್ಲಿ ಮುಖ್ಯವಾದ ವಿಚಾರ ದಿವ್ಯಾ ಹಾಗರಗಿ ಎಲ್ಲಿ? ಅವರು ಯಾಕೆ ಬಂಧನವಾಗಿಲ್ಲ? ಅವರನ್ನು ನೀವೇ ರಕ್ಷಿಸುತ್ತಿದ್ದೀರಾ? ಎಲ್ಲರನ್ನು ಬಂಧಿಸುತ್ತಿದ್ದು, ನಿಮ್ಮ ಕಾರ್ಯಕರ್ತರನ್ನು ಹಿಡಿಯುತ್ತಿಲ್ಲ ಯಾಕೆ? ಗೃಹ ಸಚಿವರೇ, ಮುಖ್ಯಮಂತ್ರಿಗಳೇ ಇದಕ್ಕೆ ಉತ್ತರಿಸಿ.

ಈ ಬಗ್ಗೆ ತನಿಖೆ ಮಾಡುವ ಬದಲು ನಮಗೆ ನೊಟೀಸ್ ಕೊಟ್ಟದೆ ತನಿಖೆ ಮುಂದುವರಿಯುವುದಿಲ್ಲ. ನಿಮ್ಮ ಹುಡುಗಾಟದಿಂದ ರಾಜ್ಯದ 57 ಸಾವಿರ ಯುವಕರ ಭವಿಷ್ಯ ಹಾಳಾಗುತ್ತಿದೆ. ಹೀಗಾಗಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸರಿಯಾಗಿ ಮಾಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here