ಸ್ವಾತಂತ್ರ್ಯದ‌ ಜೊತೆಗೆ ಸಾಮಾಜಿಕ‌ ಸಮಾನತೆಗಾಗಿ ಅಂಬೇಡ್ಕರ ಹೋರಾಟ: ಪ್ರಿಯಾಂಕ್ ಖರ್ಗೆ

0
33

ಕಲಬುರಗಿ: ಸ್ವಾತಂತ್ರ್ಯ ಹೋರಾಟಕ್ಕಾಗಿ ಹಲವಾರು ನಾಯಕರು ಹೋರಾಟ ಮಾಡಿ ತ್ಯಾಗ ಮಾಡಿದ್ದಾರೆ‌ ಆದರೆ ಸ್ವಾತಂತ್ರ್ಯ ದ ಜೊತೆಗೆ ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದವರು ಅಂಬೇಡ್ಕರ್ ಮಾತ್ರ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೇಳಿದರು.

ಚಿಂಚೋಳಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಬಾಬಾಸಾಹೇಬ ಅಂಬೇಡ್ಕರ ಅವರ 131 ನೆಯ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಿಂದ ಅಪರೂಪ ಯಶಸ್ವಿ ಶಸ್ತ್ರಚಿಕಿತ್ಸೆ

ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಅಂಬೇಡ್ಕರ ಅವರ ದೂರದೃಷ್ಠಿ ಹಾಗೂ ಆರ್ಥಿಕ ಚಿಂತನೆಯಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾಗಿದೆ. ಕೋಲಂಬಿಯಾ ಯೂನಿವರ್ಸಿಟಿ ಯಲ್ಲಿ‌ ಅಂಬೇಡ್ಕರ್ ಅವರು 29 ವಿವಿಧ ಕೋರ್ಸ್ ಗಳನ್ನು ಕಲಿತಿದ್ದಾರೆ. ಆರ್ಥಶಾಸ್ತ್ರಕ್ಕೆ‌ ಅವರ‌ ನೀಡಿ‌ದ ಕೊಡುಗೆಗೆ ಲಂಡನ್‌ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅವರ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಭಾರತದ ಶ್ರೇಷ್ಠ ಆರ್ಥಿಕ ತಜ್ಞ ಅಮರ್ಥ್ಯ‌ಸೇನ್ ಅವರು ಅಂಬೇಡ್ಕರ ಕುರಿತು ” ಅಂಬೇಡ್ಕರ್ ಅವರು ನನ್ನ ಆರ್ಥಶಾಸ್ತ್ರದ ಪಿತಾಮಹ ” ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿರುವುದು ಹೆಮ್ಮೆಯ‌ ವಿಚಾರ. ವಿದೇಶಿಯರು ಅಂಬೇಡ್ಕರ ಅವರ ಬಗ್ಗೆ ತಿಳಿದುಕೊಂಡಿದ್ದಾರೆ. ಅವರ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಆದರೆ, ಸಂವಿಧಾನದ ಅಡಿಯಲ್ಲೇ ರಚಿಸಲಾಗಿರುವ ಕಾನೂನು ಕಾಪಾಡಬೇಕಿದ್ದ‌ ನ್ಯಾಯಾಧೀಶರೊಬ್ಬರು ಅಂಬೇಡ್ಕರ ಅವರ ಫೋಟೋ ತೆಗೆಸುತ್ತಾರೆ ಎಂದರೆ ಅದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಅಂಬೇಡ್ಕರ ಅವರ ರಚಿಸಿರುವ ಸಂವಿಧಾನ ದೇಶದ ಪ್ರತಿಯೊಬ್ಬರಿಗೂ ಸಮಾನ‌ಹಕ್ಕು ನೀಡಿದೆ. ಹಲವಾರು ದೇಶಗಳ ಸಂವಿಧಾನ ಅಧ್ಯಯನ ಮಾಡಿ ರಚನೆ ಮಾಡಿ ಸುಮಾರು 2 ವರ್ಷಗಳ ಕಾಲ ಸುದೀರ್ಘ ಚರ್ಚೆ ನಡೆದು ನಂತರ ಅಂಗೀಕಾರ ಮಾಡಲಾಯಿತು. ಹಾಗಾಗಿ ಭಾರತದ ಸಂವಿಧಾನ ವಿಶ್ವದ ಅತಿದೊಡ್ಡ ಸಂವಿಧಾನವಿದೆ. ವಿಷಾದದ‌ ಸಂಗತಿ ಎಂದರೆ‌ ಕೆಲವರು ಸಂವಿಧಾನ ಕೇವಲ ದಲಿತರಿಗೆ ಮಾತ್ರ ಹಕ್ಕು‌ನೀಡಿದೆ ಎನ್ನುವಂತೆ ಭ್ರಮಿಸಿದ್ದಾರೆ‌ ಜೊತೆಗೆ ಅಂಬೇಡ್ಕರ ಅವರನ್ನು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿದ್ದಾರೆ ಇದು ಸರಿಯಲ್ಲ ಎಂದರು.

ಇದನ್ನೂ ಓದಿ: ಬುದ್ಧ, ಬಸವ, ಅಂಬೇಡ್ಕರ್ ತತ್ವ ಪಾಲನೆಗೆ ಪ್ರಿಯಾಂಕ್ ಖರ್ಗೆ ಕರೆ

ಸಂವಿಧಾನ ಉಳಿದರೆ ಮಾತ್ರ ದೇಶ ಉಳಿಯುತ್ತದೆ ಎಂದು ಒತ್ತಿ ಹೇಳಿದ ಶಾಸಕರು, ಕೆಲವರು ಸಂವಿಧಾನ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದಾರೆ ಆದರೆ ಅದು ಅಸಾಧ್ಯ ಎಂದರು. ಇತ್ತೀಚಿಗೆ ಕೆಲವರು ದೇಶಪ್ರೇಮಿ ಹಾಗೂ‌ ದೇಶದ್ರೋಹಿ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಅದರೆ‌ ಅಂಬೇಡ್ಕರ ಅವರು ಈ ದೇಶದ ಆರ್ಥಿಕತೆಗೆ ಸಮಾನತೆಗೆ ಶಾಂತಿಗೆ ಭಂಗ ತರುವವರೇ ದೇಶದ್ರೋಹಿಗಳು ಎಂದು ಹೇಳಿದ್ದಾರೆ.

ಮುಸಲ್ಮಾನರು ಸಂವಿಧಾನದ ಅಡಿಯಲ್ಲಿ ಬರುವ ಈ ದೇಶದ ನಾಗರಿಕರು ಎಂದು ಖರ್ಗೆ, ಮುಸಲ್ಮಾನರಿಂದ ಮಾವಿನ ಕಾಯಿ ಖರೀದಿ ಮಾಡಬೇಡಿ. ಹಲಾಲ್ ಕಟ್ ಮಾಡಿರುವ ಮಾಂಸ ತಿನ್ನಬೇಡಿ ಎಂದು ಕೆಲವರು ಹೇಳುತ್ತಾರೆ ಆದರೆ ಈ ದೇಶದ ನಿರುದ್ಯೋಗದ ಬಗ್ಗೆ ಮತ್ತು ಪೆಟ್ರೋಲಿಯಂ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ‌ ಬಗ್ಗೆ ಮಾತನಾಡಲ್ಲ ಎಂದು ಕುಟುಕಿದರು.

ಇದನ್ನೂ ಓದಿ: ಶಾಸಕ ಅವಿನಾಶ್ ಜಾಧವ್ ಅವರಿಂದ ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಚೇಕ್ ವಿತರಣೆ

ಎಸ್ ಸಿ ಪಿ / ಟಿಎಸ್ ಪಿ ಅಡಿಯಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ‌ 24,000 ಕೋಟಿ ಮೀಸಲಿಡಲಾಗಿತ್ತು. ಬಂಜಾರ ಸಮುದಾಯದ ಅಭಿವೃದ್ದಿಗೆ ರೂ 6600 ಕೋಟಿ ಖರ್ಚು ಮಾಡಲಾಗಿದೆ. ತಾಂಡಾ ಅಭಿವೃದ್ದಿ ನಿಗಮಕ್ಕೆ ಸಾಕಷ್ಟು‌ ಅನುದಾನ ನೀಡಲಾಗಿತ್ತು. ಆದರೆ, ಈಗಿನ ಸರ್ಕಾರದ ಬಜೆಟ್ ನಂತೆ ರೂ‌ 29,000 ಕೋಟಿ ಮೀಸಲಿಡಬೇಕಿತ್ತು ಆದರೆ‌ ಎಷ್ಟು‌ಕೋಟಿ ಮೀಸಲಿಡಲಾಗಿದೆ ? ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರ ಬಿಡಿ, ಬಿಜೆಪಿ ಶಾಸಕರ‌ ಕ್ಷೇತ್ರಗಳಾದ ಕಲಬುರಗಿ ಗ್ರಾಮೀಣ ಹಾಗೂ ಚಿಂಚೋಳಿ ಕ್ಷೇತ್ರ ಗಳಿಗೆ ಎಷ್ಟು ಅನುದಾನ‌ ನೀಡಲಾಗಿದೆ ಎಂದು ಸರ್ಕಾರವೇ ಹೇಳಬೇಕು ಎಂದರು.

ಸಿದ್ದರಾಮ ಶರಣರು ಬೆಲ್ದಾಳ, ಶಾಸಕರಾದ ಅವಿನಾಶ ಜಾಧವ,‌ ಸುಭಾಷ ರಾಠೋಡ, ಜಗದೇವ ಗುತ್ತೇದಾರ, ಗೋಪಾಲ ಕಟ್ಟಿಮನಿ, ಸಂಜೀವ ಯಾಕಾಪುರ ಸೇರಿದಂತೆ ಮತ್ತಿತರಿದ್ದರು.

ಇದನ್ನೂ ಓದಿ: ಸಿಐಡಿ ನೋಟಿಸಿಗೆ ಶಾಸಕ ಪ್ರಿಯಾಂಕ್ ಖರ್ಗೆ ನೀಡಿರುವ ಉತ್ತರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here