ಈಶ್ವರ ಬನಶಂಕರಿ ಉತ್ಸವ ಮೂರ್ತಿ ಮೆರವಣಿಗೆ ಶಿವಮೂರ್ತಿ ಶ್ರೀ ಚಾಲನೆ

0
21

ಸುರಪುರ: ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿರುವ ಈಶ್ವರ ಬನಶಂಕರಿ ದೇವಸ್ಥಾನದ ದಶಮಾನೋತ್ಸವ ಹಾಗೂ ಈಶ್ವರ ಬನಶಂಕರಿ ಉತ್ಸವ ಬೆಳ್ಳಿ ಮೂರ್ತಿಗಳ ಮೆರವಣಿಗೆಗೆ ನಗರದ ಹನುಮಾನ ದೇವಸ್ಥಾನದ ಬಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

ಭಾನುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ,ಈಶ್ವರ ಬನಶಂಕರಿ ಸಕಲ ಸದ್ಭಕ್ತರು ಇಂದು ಅದ್ಧೂರಿಯಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ.ತಮ್ಮೆಲ್ಲರಿಗೂ ಈಶ್ವರ ಬನಶಂಕರಿ ತಾಯಿ ಸಕಲವೂ ಕರುಣಿಸಲಿ ಎಂದು ಆಶೀರ್ವದಿಸಿದರು.

Contact Your\'s Advertisement; 9902492681

ಇದನ್ನೂ ಓದಿ: ಎಐಟಿಯುಸಿ ವಿಶ್ವ ಕಾರ್ಮಿಕರ ದಿನಾಚರಣೆ:ಮಾಜಿ ಶಾಸಕ ಆರ್.ವಿ.ಎನ್ ಉದ್ಘಾಟನೆ

ಈ ಸಂದರ್ಭದಲ್ಲಿ ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಆನಂದ ಮಹಾಸ್ವಾಮೀಜಿ,ಬನಶಂಕರಿ ದೇವಸ್ಥಾನದ ಅರ್ಚಕ ಮಂಜುನಾಥ ಸ್ವಾಮೀಜಿ ಹಾಗೂ ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ:ಸುರೇಶ ಸಜ್ಜನ್,ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ ನಾಯಕ,ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಸಜ್ಜನ್,ಮಲ್ಲಿಕಾರ್ಜುನ ಕಡೆಚೂರ,ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ,ಮಲ್ಲಿಕಾರ್ಜುನ ಮಿಠ್ಠಾ,ವಿನೋದ ಆವಂಟಿ,ಶೇಷಪ್ಪ ಸಜ್ಜನ್,ಸೋಮರಾಯ ಕಡೆಚೂರ,ಸತ್ಚಂದ್ರ ಪಾಪಯ್ಯ ಜೋಷಿ ಸೇರಿದಂತೆ ಅನೇಕರಿದ್ದರು.

ನಂತರ ಸುಮಂಗಲೆಯರ ಒಂದು ನೂರ ಒಂದು ಕುಂಭ ಕಳಸಗಳೊಂದಿಗೆ ಪುರವಂತರ ಮಹಾಸೇವಾದೊಂದಿಗೆ ಮೆರವಣಿಗೆಯನ್ನು ಆರಂಭಿಸಿ ಆವಂಟಿ ಓಣಿಯ ಮೂಲಕ ಮರಗಮ್ಮ ದೇವಸ್ಥಾನದ ಮಾರ್ಗವಾಗಿ ಹಳೆ ಎಡಿಬಿ ಬ್ಯಾಂಕ್ ಮಾರ್ಗವಾಗಿ ಈಶ್ವರ ಬನಶಂಕರಿ ದೇವಸ್ಥಾನದ ವರೆಗೆ ಭವ್ಯವಾದ ಮೆರವಣಿಗೆ ನಡೆಯಿತು.ಈ ಸಂದರ್ಭದಲ್ಲಿ ಪುಟಾಣಿ ಮಕ್ಕಳಿಂದ ಛದ್ಮ ವೇಷದ ಗಣೇಶ,ಪಾರ್ವತಿ ಹಾಗೂ ಬಸವಣ್ಣ ಮತ್ತು ದೇವರ ದಾಸಿಮಯ್ಯ ಸೇರಿದಂತೆ ವಿವಿಧ ಮಹಾತ್ಮರ ವೇಷ ಧರಿಸಿದ್ದ ಮಕ್ಕಳು ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು.

ಇದನ್ನೂ ಓದಿ: ರಂಗಂಪೇಟ : ಹಿಂದುಳಿದ ವರ್ಗಗಳ ಮುಖಂಡರ ಸಭೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here