ಕಲಬುರಗಿ: ನಗರದ ಎಸ್ ಎಮ್ ಪಂಡಿತ ರಂಗಮಂದಿರದಲ್ಲಿ ಗುಲಬರ್ಗಾ ಡ್ಯಾನ್ಸ್ ಸಂಘದ ವತಿಯಿಂದ ಜನಪದ ಉತ್ಸವ ಕಾರ್ಯಕ್ರಮಕ್ಕೆ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ.ಈರಣ್ಣ ಹಿರಾಪೂರ, ಡಾ.ರೇಣುಪ್ರಸಾದ ಚಿಕಮಠ, ಪಿಎಸ್‌ಐ ಶಾಂತಬಾಯಿ, ಕಲ್ಯಾಣ ಕರ್ನಾಟಕ ರಾಜ್ಯಧ್ಯಕ್ಷ ದತ್ತು ಹೈಯಾಳಕರ್, ಸಂಘದ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಯೋಜಕ ಅಕ್ಷಯ (ಯಂಕಪ್ಪ), ಜನಪದ ಕಲಾವಿದೆ ಜ್ಯೋತಿ ಅಕ್ಷಯ, ಕ್ರೇಜಿ ಆರ್ಟ್ ತಂಡದವರಾದ ಸೂರಜ ಲೋನಾರ, ನಂದಿತಾ ಲೋನಾರ, ಡಾ.ಸುಮಾ ಕವಲ್ದಾರ ಹಾಗೂ ಮಕ್ಕಳು ಇದ್ದರು. ನಂತರ ಕ್ರೇಜಿ ಆರ್ಟ್ ತಂಡದವರಿಂದ ಜನಪದ ನೃತ್ಯ, ಚಿತ್ರಕಲಾ ಪ್ರದರ್ಶನ, ಚಿಕ್ಕ ಮಕ್ಕಳ ಫ್ಯಾಶನ ಶೋ ಹಾಗೂ ನೃತ್ಯ ಪ್ರದರ್ಶನ ಮಾಡಿದರು.