ಕಲಬುರಗಿ: ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ

1
21

ಪತ್ರಕರ್ತರು ಮತ್ತು ಪೆÇಲೀಸರ ಕೆಲಸ ಒಂದೆ ಯಾಗಿರುತ್ತದೆ. ಇಬ್ಬರಿಗೂ ಸಮಯದ ನಿಗದಿ ಇರುವುದಿಲ್ಲ. ಪತ್ರಕರ್ತರಿಗೆ ಅಗತ್ಯ ಸೌಲಭ್ಯ ಸಿಗಬೇಕಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಸಂಘ ಪ್ರಯತ್ನಿಸಬೇಕು. ಡಾ. ವೈ.ಎಸ್. ರವಿಕುಮಾರ, ನಗರ ಪೊಲೀಸ್ ಆಯುಕ್ತರು.

ಪತ್ರಕರ್ತರು ಹಾಗೂ ಪತ್ರಕರ್ತರ ಸಂಘಕ್ಕೆ ಜಿಲ್ಲಾಡಳತದಿಂದ ಅಗತ್ಯ ಸಹಾಯ, ಸಹಕಾರ ನೀಡಲು ಬದ್ಧ, ಪತ್ರಕರ್ತರ ಕುಟುಂಬಕ್ಕೆ ಗುಂಪು ಆರೋಗ್ಯ ವಿಮೆ ಮತ್ತಿತರ ಸೌಲಭ್ಯ ಒದಗಿಸಿಕೊಡುವಲ್ಲಿ ಪ್ರಯತ್ನಿಸುವೆ. ಯಶವಂತ ಗುರುಕರ್, ಜಿಲ್ಲಾಧಿಕಾರಿ. 

Contact Your\'s Advertisement; 9902492681

ಕಲಬುರಗಿ: ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾದಿಕಾರಿ ಯಶ್ವಂತ ಗುರುಕರ ಹೇಳಿದರು.
ನಗರದ ಹೆಚ್‍ಕೆಸಿಸಿಐ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಪದಗ್ರಹಣ, ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹಾಗೂ ಮತದಾರ ಪತ್ರಕರ್ತರಿಗೆ ಕೃತಜ್ಞತೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕೆಗಳು ನಿಖರ ಮತ್ತು ಸತ್ಯ ಸಂಗತಿಗಳ ಸುದ್ದಿ ಪ್ರಸಾರ ಮಾಡಬೇಕು ಎಂದರು.

ಇದನ್ನೂ ಓದಿ: ಬೈಕಗೆ ಹಿಟಾಚಿ ಡಿಕ್ಕಿ ಎಫ್.ಐ.ಆರ್ ದಾಖಲಿಸದಿರುವುದಕ್ಕೆ ಆಕ್ರೋಶ

ತಪ್ಪು ಮಾಹಿತಿ ನೀಡಬಾರದು. ಜನರು ಪತ್ರಿಕೆಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ತಪ್ಪು ಮಾಹಿತಿ ನೀಡಿದರೆ ಅದೇ ಸರಿ ಎಂದು ಭಾವಿಸುತ್ತಾರೆ. ಜನರನ್ನು ಹಾದಿ ತಪ್ಪಿಸುವಂಥ ಕೆಲಸ ಪತ್ರಕರ್ತರು ಮಾಡಬಾರದು. ಜನರಿಗೆ ಉಪಯುಕ್ತವಾಗುವ ಮಾಹಿತಿ ಪ್ರಕಟಿಸಬೇಕು ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಕಾರ್ಯನಿರತ ಪತ್ರಕರ್ತರು ಈ ಸಂಘದಲ್ಲಿನಿರಬೇಕು. ಕಾರ್ಯ ಮರೆತ ಪತ್ರಕರ್ತರಿಗೆ ಸಂಘದಲ್ಲಿ ಅವಕಾಶ ಇರುವುದಿಲ್ಲ. ಕ್ರಿಯಾಶಿಲ ಪತ್ರಕರ್ತರು ಸಂಘದಲ್ಲಿದ್ದರೆ ಸಂಘದ ಬೆಳವಣಿಯಾಗಲು ಸಾಧ್ಯ ಎಂದರು. ಸಮಾಜ ನಮಗೆ ಗೌರವ ಕೊಡುವಂತ ವ್ಯಕ್ತಿತ್ವ ನಮ್ಮದಾಗಬೇಕು. ವೃತ್ತಿಗೆ ಕಪ್ಪು ಚುಕ್ಕಿ ತರುವಂಥ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದ ಅವರು, ಸಂಘದಿಂದ ಪತ್ರಕರ್ತರಿಗೆ ಸೌಲಭ್ಯ ಮಾಡಿಕೊಡಲು ಪ್ರಯತ್ನಿಸುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: ಕೇಂದ್ರದ ನಿರ್ಲಕ್ಷ್ಯದಿಂದ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ

ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ, ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಮಾಧ್ಯಮ ಅಕಾಡೆಮಿ ಸದಸ್ಯ ದೇವೀಂದ್ರಪ್ಪ ಕಪನೂರ, ಜಿಲ್ಲಾ ಸಮಿತಿಯ ಖಜಾಂಚಿ ಅಶೋಕ ಕಪನೂರ, ವಾರ್ತಾ ಮತ್ತು ಪ್ರಸಾರ ಇಲಾಖೆ ಹಿರಿಯ ಉಪನಿರ್ದೇಶಕ ಜೆ.ಬಿ. ಸಿದ್ದೇಶ್ವರಪ್ಪ ವೇದಿಕೆ ಮೇಲಿದ್ದರು.

ಸಂಯುಕ್ತ ಕರ್ಣಾಟಕ ಪತ್ರಿಕೆ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ, ಆಕಾಶವಾಣಿಯ ಅಧಿಕಾರಿ ಸದಾನಂದ ಪೆರ್ಲ, ಶಂಕರ ಕೋಡ್ಲಾ, ಶೇಷಮೂರ್ತಿ ಅವಧಾನಿ, ಸದಾನಂದ ಜೋಶಿ, ಸುಭಾಷ ಬಣಗಾರ, ಮನೋಜಕುಮಾರ ಗುದ್ದಿ, ಅಜಿಜುಲ್ಲಾ ಸರಮಸ್ತ, ಶರಣು ಜಿಡಗಾ, ಸತೀಶ ಜೇವರ್ಗಿ, ಪ್ರಶಾಂತ ನಿಂಬಾಳ ಸೇರಿದಂತೆ ಹಿರಿಯ-ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಶಿವರಂಜನ್ ಸತ್ಯಂಪೇಟೆ ಸ್ವಾಗತಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ಕಾರ್ಯಕ್ರಮ ನಿರೂಪಿಸಿದರು. ಚೇತನ ಬಿ. ಕೋಬಾಳ ಸಂಗಡಿಗರಿಂದ ಪ್ರಾರ್ಥನೆ ಗೀತೆ ಹಾಡಿದರು. ಅರುಣ ಕದಂ ವಂದಿಸಿದರು.

ಇದನ್ನೂ ಓದಿ: ಗುತ್ತಿಗೆ ಪದ್ಧತಿ ಕೈಬಿಟ್ಟು, ಪೌರ ಕಾರ್ಮಿಕರ ಖಾಯಂ ನೇಮಕಾತಿ ಮಾಡಬೇಕು:ಹೆಚ್.ಹನುಮಂತಪ್ಪ

ಪದಗ್ರಹಣ ಸ್ವೀಕರಿಸಿದವರು: ಬಾಬುರಾವ ಯಡ್ರಾಮಿ (ಜಿಲ್ಲಾಧ್ಯಕ್ಷ), ದೇವಿಂದ್ರಪ್ಪ ಆವಂಟಿ, ಸುರೇಶ ಬಡಿಗೇರ್, ರಾಮಕೃಷ್ಣ ಬಡಶೇಷಿ (ಉಪಾಧ್ಯಕ್ಷರು), ಸಂಗಮನಾಥ ರೇವತಗಾಂವ್ (ಪ್ರಧಾನ ಕಾರ್ಯದರ್ಶಿ), ಅಶೋಕ ಕಪನೂರ (ಖಜಾಂಚಿ), ವೀರೇಂದ್ರಕುಮಾರ ಕೊಲ್ಲೂರ್, ಅರುಣ ಕದಂ, ಮಲ್ಲಿಕಾರ್ಜುನ ಜೋಗ್ (ಕಾರ್ಯದರ್ಶಿ), ಡಾ. ಶಿವರಂಜನ್ ಸತ್ಯಂಪೇಟೆ (ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ), ಜಯತೀರ್ಥ ಪಾಟೀಲ್, ಭೀಮಾಶಂಕರ ಫಿರೋಜಾಬಾದ್, ಚಂದ್ರಶೇಖರ ಕವಲಗಾ, ಅನಿಲ ಸ್ವಾಮಿ, ಬಿ.ವಿ. ಚಕ್ರವರ್ತಿ, ವಿಜೇಂದ್ರ ಕೋಡ್ಲಾ, ಶಿವಕುಮಾರ ನಿಡಗುಂದಾ, ಸಂತೋಷ ನಾಡಗಿರಿ, ಮಹ್ಮದ್ ಮುಕ್ತರೋದ್ದಿನ್, ರವೀಂದ್ರ ವಕೀಲ್, ಆವಿನಾಶ ದೊಡ್ಮನಿ, ವಾಸು ಚವ್ಹಾಣ, ರಾಜು ಕೋಷ್ಠಿ, ಬಾಬುರಾವ ಕೋಬಾಳ, ವೀರೇಶ ಚಿನಗುಡಿ (ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here