ಕಲಬುರಗಿ ಜಿಲ್ಲಾ ಪಂಚಾಯತಿಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗನಾಥ ಉಡಗಿ (ನರೇಗಾ) ನಿರ್ವಾಹಕ ಸಿಬ್ಬಂದಿ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವತೆ ದಲಿತ ಜನ ಜಾಗೃತಿ ವೇದಿಕೆಯ ವತಿಯಿಂದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲಾ ಪಂಚಾಯತ್ ಕಛೇರಿಯಲ್ಲಿ (ನರೇಗಾ) ನಿರ್ವಾಹಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾಗನಾಥ ಉಡಗಿ ಇವನೊಬ್ಬ ಭ್ರಷ್ಟ ಅಧಿಕಾರಿಯಾಗಿದ್ದು, ಇವನು ೨೦೨೧-೨೨ನೇ ಸಾಲಿನಲ್ಲಿ ಹೆಚ್ಚುವರಿ ಕ್ರೀಯಾ ಯೋಜನೆ ಅನುಮೋದನೆ ಸಲುವಾಗಿ ಸಾರ್ವಜನಿಕರಿಂದ ಮನಬಂದಂತೆ ಹಣದ ಬೇಡಿಕೆ ಇಟ್ಟು, ಕೆಲವು ಜನರಲ್ಲಿ ಹಣ ಪಡೆದಿರುತ್ತಾನೆ.
ಆದಕಾರಣ ಸದರಿ ಅಧಿಕಾರಿ ಕೆಲವು ಗ್ರಾಮ ಪಂಚಾಯತಿಯ ಕಾಮಗಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆ ಕೊಡುಸುತ್ತೇನೆಂದು ಹಣ ಪಡೆದಿರುತ್ತಾನೆ. ಈ ಅಧಿಕಾರಿ ಬೇರೆ ಇಲಾಖೆಯ ಮುಂಬಡ್ತಿ ಆದರೂ ಇವರು ಇದೇ ನರೇಗಾ ನಿರ್ವಾಹಕ ಸಿಬ್ಬಂದಿಯಾಗಿಯೇ ಕಾರ್ಯನಿರ್ವಾಹಿಸುತ್ತಿರುವುದು ಏಕೆ? ಇದಕ್ಕೆ ಕಾರಣ ಸದರಿ ಇದರಲ್ಲಿ ಭ್ರಷ್ಟಚಾರದ ಪರಮಾವಧಿಯನ್ನು ಮೀರಿ ಹಣವನ್ನು ಜೇಬಿಗೆ ಹಾಕಿಕೊಂಡು ಸಾರ್ವಜನಿಕರ ಹಣವ ಹಗಲು ಲೂಟಿ ಮಾಡುತ್ತಿದ್ದು, ಸದರಿ ಹಣ ನೀಡಿದವರು ಸಹಿತ ಸಾಕ್ಷಿ ಸಮೇತ ಹೇಳಲು ಬಯಸುತ್ತಾರೆ.
ಇದನ್ನೂ ಓದಿ: ಮಂಗಿಹಾಳ ಗ್ರಾಮದಲ್ಲಿ ಸಿಡಿಲಿಗೆ ವ್ಯಕ್ತಿ ಬಲಿ
ಸದರಿ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರದ ತನಿಖೆ ಮಾಡಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಒಂದು ವೇಳೆ ಸದರಿ ನಮ್ಮ ಮನವಿಗೆ ಸ್ಪಂಧಿಸದೇ , ವಿಳಂಬ ನೀತಿ ಅನುಸರಿಸಿದರೇ, ಸದರಿ ವಿಷಯದ ಕುರಿತು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ದಲಿತ ಜನ ಜಾಗೃತಿ ವೇದಿಕೆಯ ವಿದ್ಯಾರ್ಥಿ ಒಕ್ಕೂಟ ಜಿಲ್ಲಾಧ್ಯಕ್ಷ ಶಿವರಾಜಕುಮಾರ ಜಾಪೂರ, ಮಾಳು ಕಾರಗುಂಡ, ರವಿ ಎಸ್.ಹೋಸಮನಿ ಇದ್ದರು.
ಇದನ್ನೂ ಓದಿ: ಕೂಡಲಗಿ ಗ್ರಾಮದಲ್ಲಿ ಪಂಪ್ ಹೌಸ್‌ಗೆ ಬೆಂಕಿ ವಸ್ತುಗಳು ಭಸ್ಮ