ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆಗ್ರಹ

0
213

ಕಲಬುರಗಿ: ಕಲ್ಯಾಣ ಕರ್ನಾಟಕದ ಅವಿಮುಕ್ತ ಕ್ಷೇತ್ರವಾದ ಜಿಲ್ಲೆಯ ಕಾಳಗಿ ತಾಲೂಕಿನ ರೇವಗ್ಗಿ (ರಟಕಲ್) ಶ್ರೀ ರೇವಣಸಿದ್ದೇಶ್ವರ ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಕೂಡಲೇ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಲಿಂಗಯ್ಯ ಮಠಪತಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದಕ್ಷಿಣ ಭಾರತದಾದ್ಯಂತ ಲಕ್ಷಾಂತರ ಭಕ್ತ ಸಮುದಾಯವನ್ನು ಹೊಂದಿರುವ ಪ್ರಾಚೀನವಾದ ಇತಿಹಾಸವಿರುವ ಸರ್ವ ಧರ್ಮಗಳ ಜನತೆಯ ಶೃದ್ಧೆ ಮತ್ತು ಭಕ್ತಿಯ ತಾಣವಾಗಿರುವ ಪ್ರತಿ ತಿಂಗಳು ಅಮವಾಸ್ಯೆ ದಿನ ಹತ್ತಾರು ಸಾವಿರ ಭಕ್ತರು ಹಬ್ಬ-ಹರಿದಿನಗಳಲ್ಲಿ, ಜಾತ್ರಾ ಉತ್ಸವಗಳಲ್ಲಿ ಲಕ್ಷಾಂತರ ಜನ ಭಾಗವಹಿಸುವ ಹಾಗೂ ಕಲಬುರಗಿ ಜಿಲ್ಲೆಯ ಮುಜರಾಯಿ ಇಲಾಖೆಯಲ್ಲಿ ಅತ್ಯಂತ ಗರಿಷ್ಠ ಆದಾಯ ಹೊಂದಿರುವ ಎ ಗ್ರೇಡ್ ವ್ಯಾಪ್ತಿಯಲ್ಲಿ ಬರುವ ಈ ದೇವಾಲಯವು ಇಲ್ಲಿಯವರೆಗೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಸುಸಜ್ಜಿತವಾದಂತಹ ಕೋಣೆಗಳು, ಶುದ್ಧವಾದ ಕುಡಿಯುವ ನೀರು, ಬೀದಿ ದೀಪಗಳು ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು ಇದರಿಂದ ಭಕ್ತಾದಿಗಳು ತೊಂದರೆಪಡುವಂತಾಗಿದೆ.

Contact Your\'s Advertisement; 9902492681

ಪ್ರತಿ ವರ್ಷ ೬೦-೭೦ ಲಕ್ಷ ರೂಪಾಯಿ ಆದಾಯ ಹೊಂದಿರುವ ಈ ದೇವಾಲಯದ ಸಮಗ್ರ ಅಭಿವೃದ್ಧಿ ಕೈಗೊಳ್ಳುವುದು ಅತ್ಯಗತ್ಯವಾಗಿದ್ದು ವಿಶೇಷವಾಗಿ ದೇವಾಲಯದ ಬೆಟ್ಟದ ಪರಿಸರವು ಅತ್ಯಂತ ಮನಮೋಹಕವಾಗಿರುವುದರಿಂದ ಪ್ರವಾಸಿ ತಾಣ ಸಹ ಮಾಡಬಹುದಾಗಿದ್ದು ಇದರಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಇದರ ಕುರಿತು ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಗಮನಹರಿಸುವಂತೆ ಕೋರಿ ಮುಂದಿನ ನಿಯೋಗದ ಮೂಲಕ ತೆರಳಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಮುಜರಾಯಿ ಇಲಾಖೆ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಮಠಪತಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here