ಪಂಚರತ್ನ ಕಾರ್ಯಕ್ರಮದ ಪ್ರಚಾರಕ್ಕೆ 123 ವಾಹನಗಳನ್ನು ಖರೀದಿಸಿದ ಜೆಡಿಎಸ್

0
15
  • ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹಸ್ತಾಂತರ ಮಾಡಿದ ಅರವಿಂದ್ ಮೋಟಾರ್ಸ್ ಅಧಿಕಾರಿಗಳು

ಬೆಂಗಳೂರು: ಜನತಾ ಜಲಧಾರೆ ಭಾರೀ ಯಶಸ್ಸು ಕಂಡ ನಂತರ ಜೆಡಿಎಸ್ ಪಕ್ಷದ ಮಹತ್ವಾಕಾಂಕ್ಷೆಯ ‘ಪಂಚರತ್ನ ಕಾರ್ಯಕ್ರಮ’ ಗಳ ಪ್ರಚಾರಕ್ಕೆ ರಾಜ್ಯಾದ್ಯಂತ 123 ಎಲ್ ಇಡಿ ವಾಹನಗಳು ಸಂಚಾರ ಮಾಡಲಿವೆ.

ಖರೀದಿ ಮಾಡಿರುವ 123 ಎಲ್ ಇಡಿ ವಾಹನಗಳನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಶವಂತಪುರದಲ್ಲಿರುವ ಅರವಿಂದ ಮೋಟಾರ್ಸ್ ಕಂಪನಿಯ ಅಧಿಕಾರಿಗಳು ಇಂದು ಹಸ್ತಾಂತರ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಂಪನಿಯ ಸೇಲ್ಸ್ ಜನರಲ್ ಮ್ಯಾನೇಜರ್ ವಿಜಯ್ ಕುಮಾರ್, ಸೀನಿಯರ್ ಮ್ಯಾನೇಜರ್ ಮಂಜುನಾಥ್, ಟಾಟಾ ಮೋಟರ್ಸ್ ನ ಶ್ರೀಧರ್ ಕಟ್ಟಿ, ಶಾಸಕ ಮಂಜುನಾಥ್, ವಿಧಾನಪರಿಷತ್ ಸದಸ್ಯ ಬೋಜೇಗೌಡ ಮತ್ತಿತರರು ಇದ್ದರು.

ಇದನ್ನೂ ಓದಿ: ಪಂಚರತ್ನ ಯೋಜನೆಗಳ ಬಗ್ಗೆ ಮಾತನಾಡಿದ ಬಿಜೆಪಿ ಮೇಲೆ ಪ್ರಹಾರ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ

ಇದೇ ವೇಳೆ ಪಂಚರತ್ನ ಯೋಜನೆಗಳ ಪ್ರಚಾರಕ್ಕೆ ಖರೀದಿಸಿರುವ 123 ಟಾಟಾ ಏಸ್ ವಾಹನಗಳಿಗೆ ಯಶವಂತಪುರದ ಬಳಿ ಕುಮಾರಸ್ವಾಮಿ ಅವರು ಪೂಜೆ ಸಲ್ಲಿಸಿದರು. ವಾಹನಗಳಿಗೆ ಎಲ್‌ಇಡಿ ಅಳವಡಿಕೆ ನಂತರ ಸಂಚಾರ ಆರಂಭವಾಗಲಿದ್ದು, 180 ಕ್ಷೇತ್ರಗಳಲ್ಲಿ ಸಂಚರಿಸಲಿರುವ 123 ಎಲ್‌ಇಡಿ ವಾಹನಗಳು ಪಂಚರತ್ನ ಯೋಜನೆಗಳ ಕಿರುಚಿತ್ರಗಳ ಪ್ರದರ್ಶನ ಮಾಡಲಿವೆ.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, 2023 ರ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕ್ರಮಗಳು ಹಾಗೂ ಪಂಚರತ್ನ ಯೋಜನೆಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ 123 ವಾಹನಗಳನ್ನು ಖರೀದಿ ಮಾಡಿದ್ದೇವೆ ಎಂದು ಹೇಳಿದರು.

ಏನಿದು ಪಂಚರತ್ನ: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಪಂಚರತ್ನ ಕಾರ್ಯಕ್ರಮಗಳನ್ನು ರೂಪಿಸಿದೆ.

ಆರೋಗ್ಯ, ಕೃಷಿ, ನೀರಾವರಿ, ಉದ್ಯೋಗ ಹಾಗೂ ಮಹಿಳಾ – ಯುವ ಸಬಲೀಕರಣ; ಇವೇ ಪಂಚರತ್ನ ಕಾರ್ಯಕ್ರಮಗಳು. ಎಲ್ ಇಡಿ ವಾಹನಗಳ ಮೂಲಕ ಈ ಐದು ಕಾರ್ಯಕ್ರಮಗಳ ಮಾಹಿತಿಯನ್ನು ಜನತೆಗೆ ಕೊಡಲಾಗುವುದು ಎಂದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಇದನ್ನೂ ಓದಿ: ಇ-ತ್ಯಾಜ್ಯ ನಿರ್ವಹಣೆ ಮತ್ತು ಪುನರ್‌ಬಳಕೆಗೆ ಜನಸಾಮಾನ್ಯರಲ್ಲಿ ಪ್ರೋತ್ಸಾಹ ಅಗತ್ಯ: ನ್ಯಾಯಮೂರ್ತಿ ಸುಭಾಷ್‌ ಅಡಿ

ಬಿಜೆಪಿಗೆ ಟಾಂಗ್ ಕೊಟ್ಟ ಮಾಜಿ ಸಿಎಂ: ಈ ವಾಹನಗಳಿಗೆ ಮುಂದಿನ 40 ದಿನಗಳ ಕಾಲ ಎಲ್‌ಇಡಿ ಸ್ಕ್ರೀನ್ ಅಳವಡಿಸುತ್ತೇವೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರದ ವಾಹನಗಳು ಸಂಚರಿಸಲಿವೆ ಎಂದರು. ರಾಜ್ಯಾದ್ಯಂತ 180 ಕ್ಷೇತ್ರಗಳಲ್ಲಿ ಜನತಾ ಜಲಧಾರೆ ಯಾತ್ರೆ ಯಶಸ್ವಿಯಾಗಿ ನಡೆದಿದೆ. ಕೆಲ ಬಿಜೆಪಿ, ಕಾಂಗ್ರೆಸ್ ನ ನಾಯಕರು ವ್ಯಂಗ್ಯ ಮಾಡುತ್ತಿದ್ದಾರೆ. ಗ್ರಾಫಿಕ್ಸ್ ನಲ್ಲಿ ಜನರನ್ನು ಸೃಷ್ಟಿಸಿದ್ರಾ ಅಂತಾ ಕೇಳಿದ್ದಾರಂತೆ. ಅವರಿಂದ ಪ್ರಮಾಣಪತ್ರ ನಮಗೆ ಬೇಕಿಲ್ಲ ಎಂದು ತಿರುಗೇಟು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here