Monday, July 15, 2024
ಮನೆಬಿಸಿ ಬಿಸಿ ಸುದ್ದಿರೈತ ನಾಯಕರ ಮೇಲಿನ ಹಲ್ಲೆಗೆ ಖೋಬ್ರೆ ಖಂಡನೆ

ರೈತ ನಾಯಕರ ಮೇಲಿನ ಹಲ್ಲೆಗೆ ಖೋಬ್ರೆ ಖಂಡನೆ

ಆಳಂದ: ರೈತ ನಾಯಕ ರಾಕೇಶ ಟಿಕಾಯತ್ ಮತ್ತು ಇತರ ರೈತ ನಾಯಕರ ಮೇಲೆ ಬೆಂಗಳೂರಿನಲ್ಲಿ ಕಿಡಿಗೇಡಿಗಳು ನಡೆಸಿದ ದಾಳಿಯನ್ನು ಹಾಗೂ ಅವರ ಮೇಲೆ ಮಸಿಬಳಿದಿರುವುದನ್ನು ಅಮಾನವೀಯ ಕೃತ್ಯವಾಗಿದೆ ಎಂದು ಅಖಿಲ ಭಾರತ ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ರುದ್ರವಾಡಿ ಅವರು ಇಂದಿಲ್ಲಿ ಖಂಡಿಸಿದರು.

ಈ ಕುರಿತು ಹೇಳಿಕೆ ನೀಡಿರುವ ಅವರು, ರಾಕೇಶ ಟಿಕಾಯತ ಇತರನ್ನು ಬೆಂಗಳೂರಿನ ಗಾಂಧಿಭನದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಏಕಾಏಕಿ ವೇದಿಕೆಗೆ ನುಗ್ಗಿ ರಾಕೇಶ ಅವರ ಮೇಲೆ ಹಲ್ಲೆ ಮಾಡಿ ಮಸಿ ಬಳಿಯಲಾಗಿದೆ. ಈ ದಾಳಿಯು ವ್ಯಕ್ತಿಗಳ ಮೇಲೆ ನಡೆಸಿದಲ್ಲ. ಬದಲಿಗೆ ಭಾರತದ ಹೋರಾಟಗಳ ಮೇಲೆ ನಡೆಸಿದ ದಾಳಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗುಜರಾತ್ ಮಾದರಿಯಲ್ಲಿ ಕರ್ನಾಟಕವನ್ನು ಕೋಮುದಂಗೆಗೆ ಪ್ರಯೋಗಾಲಯವಾಗಿ ಮಾಡುತ್ತಿದೆ. ಇಂಥ ಫ್ಯಾಸಿಸ್ಟ್ ನಡೆಗಳ ಹಿಂದೆ ಕಾಣದ ಕೈಗಳ ಹಿಡನ್ ಅಜೆಂಡಾ ಅಡಗಿದೆ. ದಿನ ನಿತ್ಯ ರಾಜ್ಯವು ಇಂಥ ವಿಧ್ವಂಸಕ ಕೃತ್ಯದಿಂದ ನರಳುತ್ತಿದೆ. ಸರ್ಕಾರ ಮಾತರ ಕೈಕಟ್ಟಿಕೊಂಡು ಕುಳಿತು ಮೌನ ಸಮ್ಮತಿ ಕೊಡುತ್ತಿದೆ ಎಂದು ಆರೋಪಿಸಿದರು.

ಇಂಥ ಅರಾಜಕತೆ ಸೃಷ್ಟಗೆ ಸರ್ಕಾರ ಹೊಣೆಯಾಗಿದೆ. ಸರ್ಕಾರ ನಡೆಸುವ ಯಾವ ಯೋಗ್ಯತೆಯೂ ಇಲ್ಲವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಜನ ಚಳವಳಿಗಳು ಸರ್ಕಾರಗಳಿಗೆ ಪಾಠಕಲಿಸುತ್ತವೆ ಎಂದು ಅವರು ಎಚ್ಚರಿಸಿದರು. ಕೂಡಲೇ ಧಾಳಿಕೋರರ ಮೇಲೆ ಶಿಕ್ಷೆಯಾಗುವ ದಿಕ್ಕಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular