ಚಿತ್ರಕಲಾ ಪಧವಿದರ ಶಿಕ್ಷಕರು ಬಾಲರಾಜ್ ಗುತ್ತೇದಾರ ನೇತೃತ್ವದಲ್ಲಿ ದೇವೆಗೌಡರು, ಹೆಚ್.ಡಿ.ಕೆ ಭೇಟಿ

0
319

ಸೇಡಂ: ಮೋರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಬಿ.ಎಫ್.ಎ/ ಬಿ.ವಿ.ಎ ಪದವಿಧರ ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂದಿಸಿದAತೆ “ ಅಂತಿಮ ಆಯ್ಕೆ ಪಟ್ಟಿ”ಯನ್ನು ಜರೂರಾಗಿ ಪ್ರಕಟಿಸುವ ಮೂಲಕ ಬಿ.ಎಫ್.ಎ/ ಬಿ.ವಿ.ಎ ಪದವಿದರ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಕೊಡಿಸಿಕೊಡಲು ಸರ್ಕಾರಕ್ಕೆ ಒತ್ತಾಯಿಸಬೇಕೆಂದು ಪದವಿಧರ ದೃಶ್ಯಕಲಾವಿದರ ಸಂಘದ ಪದಾಧಿಕಾರಿಗಳು ಸೇಡಂ ಮತಕ್ಷತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಾಲರಾಜ್ ಗುತ್ತೇದಾರ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬೆಂಗಳೂರಿನ ನಿವಾಸದಲ್ಲಿ ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗ ಸಂಸ್ಥೆಯಾದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಮೋರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2016ರಲ್ಲಿ ಚಿತ್ರಕಲಾ ಶಿಕ್ಷಕರ ಪದವಿದರರಿಗೆ 230 ಹುದ್ದೆಗಳಿಗೆ ಅರ್ಜಿಗಳನ್ನು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಕರೆಯಲಾಗಿತ್ತು. ಅರ್ಜಿಗಳನ್ನು ಸ್ವಿಕರಿಸಿದ ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ದಾಖಲೆಗಳನ್ನು ಪರಿಶೀಲಿಸಿದ ನಂತರ ದಿನಾಂಕ 27-10-2021 ರಂದು ಚಿತ್ರಕಲಾ ಶಿಕ್ಷಕರು ಪದವೀದರ 230 ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿರುವುದು ತಮಗೆ ತಿಳಿದ ವಿಷಯ ತದ ನಂತರ 8 ತಿಂಗಳು ಗತಿಸಿದರು. ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ವಿಳಂಬವಾಗಿದೆ. ಆದ ಕಾರಣ ಅಂತಿಮ ಆಯ್ಕೆ ಪಟ್ಟಿಯನ್ನು ಅತೀ ತುರ್ತಾಗಿ ಪ್ರಕಟಿಸಲು ತಾವು ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಮನವಿ ಮಾಡಿದ್ದರು.

Contact Your\'s Advertisement; 9902492681

ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಅನೀಲಕುಮಾರ, ಜಿತೇಂದ್ರ ಸಿಂಗ, ಶ್ರೀಕಾಂತ, ಭವಾನಿಸಿಂಗ, ಶರಣಪ್ಪ, ಮಹೇಶ, ವಿನೋದರಾಜ್ , ಚೆಲೂವಾ, ಸುಚಿತ್ರ ಲಿಂಗದಳ್ಳಿ ವಿನೋದ ಎಸ್.ಜೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here