ಕಲಬುರಗಿ: ಚಾರ್ತುಮಾಸ ಆಚರಿಸಲು ಆಗಮಿಸಿರುವ ಪುಷ್ಪಗಿರಿ ಪ್ರಣಿತ ವಾತ್ಸಲ್ಯ ದಿವಾಕರ ಪರಮಪೂಜ್ಯ ಮುನಿ ಶ್ರೀ ೧೦೦೮ ಗಣ ಚಾರ್ಯ ಶ್ರೀ ಪುಷ್ಪದಂತಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ಕರ್ನಾಟಕದ ಗೌರವಾನ್ವಿತ ಕ್ರಾಂತಿಕಾರಿ ಸಂತ ಧರ್ಮ ಪ್ರಭಾವಕ ಪರಮಪೂಜ್ಯ ಯುವ ಸಂತ ಮುನಿ ಶ್ರೀ ೧೦೮ ಪ್ರಸಂಗ ಸಾಗರ್ ಮಹಾರಾಜರು ನಗರಕ್ಕೆ ಆಗಮಿಸಿದಕ್ಕೆ ಪ್ರವೇಶ ಮಾಡಿದ ಗುರುಗಳನ್ನು ಅದ್ದುರಿಯಾಗಿ ಬರಮಾಡಿಕೋಂಡ ಜೈನ್ ಸಮಾಜದ ಪ್ರಮುಖರು ಸರ್ದಾರ ವಲ್ಲಬಬಾಯಿ ಪಟೇಲ ಚೌಕದಿಂದ ಸೇಡಂ ರಸ್ತೆಯಲ್ಲಿರುವ ಹರಿಹಂತ ನಗರದ ಜೈನ ಮಂದಿರದವರೆಗೆ ಮಹಿಳೆಯರಿಂದ ಕುಂಭ, ಡೊಳ್ಳು, ಮುಖಾಂತರ ಬ್ರಹತ್ ಮೇರವಣಿಗೆ ಮುಖಾಂತರ ತೆರಳಿದರು.
ಈ ಸಂದರ್ಭದಲ್ಲಿ ಜೈನ್ ಸಮಾಜದ ಯುವ ಮುಖಂಡರಾದ ಕಿರಣಕುಮಾರ ಪಂಡಿತ್, ಸುರೇಶ ತಂಗ, ಸುಶಿಲ ಕೋಠಾರಿ, ವಜ್ರಕುಮಾರ ಪಾಟೀಲ, ರಾಜೇಂದ್ರ ಕುಣಚಗಿ, ಅಜೀತ್ ಕಾಸರ್, ರಾಹುಲ ಆಳಂದಕರ್, ಶಾಂತು ಕಚಿನಕೋಟಿ ಹಾಗೂ ಲಿಂಗರಾಜ ತಾರಫೈಲ್, ಎಂ ಎಸ್ ಪಾಟೀಲ್ ನರಿಬೋಳ, ಅನಿಲ ಬಸ್ಮೆ ಮತ್ತು ಸಮಸ್ತ ಜೈನ್ ಸಮಾಜದ ಹಿರಿಯರು, ಕಿರಿಯರು ಇದ್ದರು. ನಂತರ ೧೦೮ ಮಹಿಳೆಯರಿಂದ ಪಾದ ಪೂಜೆ ನೇರವೇರಿತು.