Tuesday, July 16, 2024
ಮನೆಬಿಸಿ ಬಿಸಿ ಸುದ್ದಿಜಿಟಿಜಿಟಿ ಮಳೆ: ಮಸೀದಿಗಳಲ್ಲೇ ಈದ್ ನಮಾಜ್

ಜಿಟಿಜಿಟಿ ಮಳೆ: ಮಸೀದಿಗಳಲ್ಲೇ ಈದ್ ನಮಾಜ್

ವಾಡಿ: ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆಯಬೇಕಿದ್ದ ಬಕ್ರೀದ್ ಹಬ್ಬದ ಸಾಮೂಹಿಕ ನಮಾಜ್, ಜಿಟಿಜಿಟಿ ಮಳೆಯ ಆತಂಕದಿಂದಾಗಿ ಮುಸ್ಲಿಂ ಬಂದುಗಳ ಪ್ರಾರ್ಥನೆ ಮಸೀದಿಗಳಿಗೆ ಸೀಮಿತಗೊಂಡಿತು. ಕಳೆದ ನಾಲ್ಕು ದಿನಗಳಿಂದ ಬಿಡದೇ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮುಸ್ಲಿಂ ಮುಖಂಡರು ಈ ನಿರ್ಧಾರ ಕೈಗೊಂಡು ನಗರದ ಐದಾರು ಮಸೀದಿಗಳಲ್ಲಿ ಎರಡೆರಡು ತಂಡಗಳಂತೆ ನಮಾಜ್‌ಗೆ ಅವಕಾಶ ಮಾಡಿಕೊಟ್ಟರು.

ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಬೆಳಗ್ಗೆ ೮:೦೦ ಗಂಟೆಗೆ ಮತ್ತು ೯:೦೦ ಗಂಟೆಗೆ ಎರಡು ಪ್ರತ್ಯೇಕ ಸಮಯಗಳಲ್ಲಿ ಮಸೀದಿಯ ಮೌಲ್ವಿ ಅಬ್ದುಲ್ ಬಾಕಿ ಖಾಲೀದ್ ಅವರು ಇಸ್ಮಾಂ ಧರ್ಮ ಸಂಸ್ಕೃತಿಯ ಬಕ್ರೀದ್ ಹಬ್ಬದ ಮಹತ್ವವನ್ನು ತಿಳಿಸಿದರು. ಅಲ್ಹಾನನ್ನು ಪ್ರಾರ್ಥಿಸುವ ಮೂಲಕ ಜನಾಂಗದ ಸುರಕ್ಷತೆಗಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ: ಜೈನ್ ಸಮಾಜದ ವತಿಯಿಂದ ಬ್ರಹತ್ ಮೇರವಣಿಗೆ

ಓ ದೇವರೆ ಮುಸ್ಲಿಂ ಮಹಿಳೆಯರನ್ನು ಮತ್ತು ಮಕ್ಕಳನ್ನು ಕಾಪಾಡು. ನಮಾಜ್ ಮಾಡಲು ಮಸೀದಿಗಳು ಸದಾ ಮುಕ್ತವಾಗಿರುವಂತೆ ನೀಡಿಕೊಳ್ಳು. ಮುಸ್ಲೀಮರಿಗೆ ಎದುರಾಗುವ ಎಲ್ಲಾ ಸಂಕಷ್ಟಗಳನ್ನು ದೂರ ಮಾಡು. ಮುಸ್ಲೀಮರು ಅಷ್ಟೇಯಲ್ಲ ಎಲ್ಲಾ ಧರ್ಮದ ಜನರ ಸುಃಖ ಸಂತೋಷವನ್ನು ಕಾಪಾಡು. ಯಾರಿಂದಲೂ ಯಾರಿಗೂ ಕೇಡಾಗದಿರಲಿ. ಮಾನವರೆಲ್ಲರೂ ಸಹಬಾಳ್ವೆಯಿಂದ ಸೌಹಾರ್ಧತೆಯಿಂದ ಇರುವಂತೆ ಹರಿಸು ಎಂದು ದೇವರಲ್ಲಿ ಬಹಿರಂಗ ಪ್ರಾರ್ಥನೆ ಸಲ್ಲಿಸಿದರು.

ನಮಾಜ್ ಕೈಗೊಂಡು ಮಸೀದಿಗಳಿಂದ ಹೊರ ಬಂದ ಮುಸ್ಲಿಂ ಬಂದುಗಳು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ದಿನ ಮುಸ್ಲೀಮರ ಮನೆಗಳಲ್ಲಿ ಮಾಂಸದೂಟ ವಿಶೇಷವಾಗಿತ್ತು. ಹಬ್ಬದ ಸುರ್ಕುರ್ಮಾ ಖಾದ್ಯವನ್ನು ಸರ್ವರಿಗೂ ಹಂಚಿ ಸೌಹಾರ್ಧತೆ ಮೆರೆದರು.

ಇದನ್ನೂ ಓದಿ: ಕಲಬುರಗಿಯಲ್ಲಿ ಪತ್ರಕರ್ತ ಸಾಹಿತಿಗಳ ಸಮಾವೇಶ 12ಕ್ಕೆ

RELATED ARTICLES

3 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular