ಕಾವ್ಯಗಳಲ್ಲಿ ಸಾಮಾಜಿಕ ತುಡಿತ ಇರಲಿ: ಧನ್ನಿ

1
58

ಕಲಬುರಗಿ : ನಮ್ಮ ಸಮಾಜದ ಆಗು ಹೋಗುಗಳ ಮೇಲೆ ಪ್ರಭಾವ ಬೀರುವಂತ ಕಾವ್ಯಗಳು ರಚಿಸಬೇಕು. ಅದರಲ್ಲಿ ಸಾಮಾಜಿಕ ತುಡಿತಗಳಿರಬೇಕು ಎಂದು ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರು ಯುವ ಬರಹಗಾರರಿಗೆ ಸಲಹೆ ನೀಡಿದರು.

ಇಂದು ಕರ್ನಾಟಕ ರಾಜ್ಯ ಬರಹಗಾರರ ಬಳಗ ರಾಜ್ಯ ಘಟಕ ಹೂವಿನ ಹಡಗಲಿಯ ಜಿಲ್ಲಾ ಘಟಕ ಕಲಬುರಗಿ ಇದರ ಆಶ್ರಯದಲ್ಲಿ ಆಯೋಜಿಸಿದ ಆನ್ ಲೈನ್ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಬದುಕು ಕಟ್ಟಿ ಕೊಳ್ಳಬೇಕಾದರೆ ಅರಮನೆ ಅಲ್ಲ. ಗುಡಿಸಲೊಂದೆ ಸಾಕು. ಆ ಗುಡಿಸಲೊಳಗೆ ಅರಳಿದ ಕಾವ್ಯ ಇಡೀ ಸಾಮಾಜಿಕ ಪರಿವರ್ತನೆಗೆ ನಾಂದಿಯಾಗುತ್ತದೆ. ಅಂಥ ಶಕ್ತಿ ಕಾವ್ಯಕ್ಕಿದೆ. ಈ ದಿಸೆಯಲ್ಲಿ ಸೃಜನಶೀಲ ಬರಹ ಸೃಷ್ಠಿಸಲು ಯುವ ಬರಹಗಾರರು ಮುಂದಾಗಬೇಕು ಎಂದು ಹಿತವಚನ ಹೇಳಿದರು.

ಇದನ್ನೂ ಓದಿ: ಜಿಟಿಜಿಟಿ ಮಳೆ: ಮಸೀದಿಗಳಲ್ಲೇ ಈದ್ ನಮಾಜ್

ಜೇವರ್ಗಿ ಪಿಯು ಕಾಳೇಜಿನ ಪ್ರಾಚಾರ್ಯ ಡಾ. ಡಿ ಬಿ ಬಡಿಗೇರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಯುವ ಬರಹಗಾರರು ಗಟ್ಟಿ ಸಾಹಿತ್ಯ ರಚಿಸಬೇಕು. ಅಂದಾಗಲೇ ಕಾವ್ಯಕ್ಕೆ ಸೊಬಗು ಹೆಚ್ಚುತ್ತದೆ ಮತ್ತು ಪರಿಣಾಮಕಾರಿ ಸಾಹಿತ್ಯವಾಗುತ್ತದೆ ಎಂದರು.

ಬಳಗದ ಜಿಲ್ಲಾಧ್ಯಕ್ಷ ಮಹಾಂತೇಶ ಎನ್ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೆರೆಯ ಮಹಾರಾಷ್ಟ್ರದ ಅಕ್ಕಲಕೋಟದ ಕವಿ ಅಶೋಕ ಡವಳಗಿ ಅವರು ’ಪರೋಪಕಾರಿ ಗುಣ’ ಕವನ ನಿರೂಪಿಸಿದರು. ಹಾಗೂ ರೇಣುಕಾ ಎನ್ ’ಹಂಗಿನ ಅರಮನೆಗಿಂತ ಗುಡಿಸಲೇ ಸಾಕು’ ಎಂಬ ಕವನದ ಸಾಲುಗಳು ಅರ್ಥಪೂರ್ಣವಾಗಿದ್ದವು. ವಿಜಯಲಕ್ಷ್ಮೀ ಗುತ್ತೇದಾರ, ಅಶ್ವೀನಿ ಪಾಟೀಲ, ಅನುಸೂಯಾ ನಾಗನಳ್ಳಿ, ಶಿವಪುತ್ರ ಹಾಗರಗಿ, ಸಂಗಮ್ಮ ದಮ್ಮುರಕರ ಮತ್ತಿತರರು ಕವನ ವಾಚನ ಮಾಡಿದರು. ಶಿವಲೀಲಾ ಕಲಗುರಕಿ ಪ್ರಾರ್ಥನೆ, ಗಂಗಮ್ಮ ನಾಲವಾರಕರ ಸ್ವಾಗತಿಸಿದರು.

ಇದನ್ನೂ ಓದಿ: ಜೈನ್ ಸಮಾಜದ ವತಿಯಿಂದ ಬ್ರಹತ್ ಮೇರವಣಿಗೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here