- ಕೆ.ಶಿವು.ಲಕ್ಕಣ್ಣವರ
ಮೊದಲು ದೇವನೂರು ಮಹಾದೇವ ಅವರ ಬಗೆಗೆ ಒಂದಿಷ್ಟು ಪರಿಚಯ ನೋಡೋಣ. ನಂತರದಲ್ಲಿ ಅವರು ಬರೆದ ಇತ್ತೀಚಿನ ಪುಸ್ತಕವಾದ ‘ಆರ್.ಎಸ್.ಎಸ್. ಆಳ ಮತ್ತು ಅಗಲ’ ಪುಸ್ತಕದ ಬಗೆಗೆ ನೋಡೋಣ.
ದೇವನೂರು ಹುಟ್ಟಿದ್ದು 1948ರಲ್ಲಿ, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ. ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಕೆಲಕಾಲ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿದರು. ಅಲ್ಲಿಂದ ವ್ಯವಸಾಯದಲ್ಲಿ ತೊಡಗಿದರು.
ಇವರ ‘ಒಡಲಾಳ ‘ ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ 1984 ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿತು. 1991 ರಲ್ಲಿ ಇವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯೂ ನೀಡಿತು.
ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ದೇವನೂರ ಮಹಾದೇವ 1989 ರಲ್ಲಿ ಅಮೆರಿಕಾದಲ್ಲಿ ನಡೆದ ‘ಇಂಟರ್‌ನ್ಯಾಶನಲ್ ರೈಟಿಂಗ್ ಪ್ರೋಗ್ರಾಂ’ನಲ್ಲಿ ಭಾಗವಹಿಸಿದ್ದರು.
ಕೆಲ ವರ್ಷದ ಹಿಂದೆ ದೇವನೂರು ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಸಹ ಲಭಿಸಿತು. ಇವರ ಕೃತಿಗಳು ‘ದ್ಯಾವನೂರು’, ‘ಒಡಲಾಳ’ ಮತ್ತು ‘ಕುಸುಮಬಾಲೆ’. ಮುಂತಾದವು.
ದೇವನೂರ ಮಹಾದೇವರ ಬಾಲ್ಯ: ದೇವನೂರು ಮಹಾದೇವ ಇವರು ಮೈಸೂರು ಜಿಲ್ಲೆಯನಂಜನಗೂಡು ತಾಲೂಕಿನ ದೇವನೂರಿನವರು. ಇವರ ಜನನವು ೧೯೪೮ ರಲ್ಲಿ ಆಯಿತು. ತಂದೆ ಸಿ.ನಂಜಯ್ಯ (ಪೋಲಿಸ್ ಕಾನ್ಸ್ ಟೇಬಲ್), ತಾಯಿ ನಂಜಮ್ಮ. ನಂಜನಗೂಡು, ಹುಣಸೂರು ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಆ ಬಳಿಕ ವ್ಯವಸಾಯದಲ್ಲಿ ತೊಡಗಿ ಮೈಸೂರಿನಲ್ಲಿ ನೆಲೆಸಿದರು.
ಪತ್ನಿಯಾಗಿ ಕೆ.ಸುಮಿತ್ರಬಾಯಿ ಅವರು ಬಂದರು. ಈ ದೇವನೂರು ಮಹಾದೇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಅವರು ಉಜ್ವಲ ಮತ್ತು ಮಿತಾ ಅಂತ. ಫೋರ್ಡ ಫೌಂಡೇಶನ್ಕೊಡ ಮಾಡಿದ ಸಂಶೋಧನವೇತನವನ್ನು, ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು, ಹಾಸನದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನೂ ದೇವನೂರು ಮಹಾದೇವ ಅವರು ಪಡೆದವರು.
- ದೇವನೂರು ಮಹಾದೇವ ಅವರ ಸಾಹಿತ್ಯ ಕೃತಿಗಳು ಹೀಗಿವೆ —
- ಅವರ ಕಥಾ ಸಂಕಲನಗಳು ಹೀಗಿವೆ —
- ೧ ‘ದ್ಯಾವನೂರು’ ಎಂಬ ಕಿರು ಕಾದಂಬರಿ
- ೨ ‘ಒಡಲಾಳ’ ಎಂಬ ಕಾದಂಬರಿ
- ೩ ಕುಸುಮಬಾಲೆ ಎಂಬ ಬಿಡಿ ಬರಹಗಳು
- ೪ ‘ಎದೆಗೆ ಬಿದ್ದ ಅಕ್ಷರ’ ಎಂಬ ವಯಸ್ಕರ ಶಿಕ್ಷಣ ಕೃತಿ
- ೫ ನೋಡು ಮತ್ತು ಕೂಡು ಎಂಬ ಅನುವಾದ ಕೃತಿ
- ೬ ‘ಗಾಂಧಿ ಮತ್ತು ಮಾವೋ’ ಎಂಬ ಕೃತಿ
- # ಕುಸುಮ ಬಾಲೆ ಇವರು ಬರೆದ ಕಾದಂಬರಿಯೂ. —
ಸ್ಥಳೀಯ ಭಾಷೆಯಲ್ಲಿ ಬರೆದ ೭೫ ಪುಟಗಳ ಈ ಕೃತಿಯನ್ನು “ಕನ್ನಡಕ್ಕೆ ಭಾಷಾಂತರಿಸಬೇಕೆಂದು”, ಮತ್ತೊಬ್ಬ ಸಾಹಿತಿ ಚಂದ್ರಶೇಖರ ಪಾಟೀಲ ಹಾಸ್ಯ ಮಾಡಿದ್ದರು.
ಅಷ್ಟರ ಮಟ್ಟಿಗೆ ಮೈಸೂರಿನ ಹಳ್ಳಿ ನುಡಿಗಟ್ಟುಗಳು ಆ ಕೃತಿಯಲ್ಲಿದ್ದವು.
- ದೇವನೂರು ಮಹಾದೇವರ ಸಾಹಿತ್ಯ ಕುರಿತ ಇತರೆ ಕೃತಿಗಳು ಹೀಗಿವೆ.
ಅವರ ಬರಹಗಳ ಬಗ್ಗೆ ವಿಮರ್ಶೆ ಹಾಗೂ ಅನಿಸಿಕೆಗಳನ್ನೊಳಗೊಂಡ ‘ಯಾರ ಜಪ್ತಿಗೂ ಸಿಗದ ನವಿಲು’ ಎಂಬ ಕೃತಿಯನ್ನು ಅಭಿನವ ಪ್ರಕಾಶನ ಹೊರತಂದಿದೆ. ದೇವನೂರು ಮಹಾದೇವರ ಕಥೆಗಳು, ಕಾದಂಬರಿಗಳು – ಉದಯಕುಮಾರ ಹುಬ್ಬು. ದೇವನೂರು ಮಹಾದೇವ – ಎನ್.ಪಿ.ಶಂಕರನಾರಾಯಣರಾವ್ ಹೊರ ತಂದಿದ್ದಾರೆ.
- ಪತ್ರಿಕೋದ್ಯಮ ಮತ್ತು ನಿರ್ವಹಿಸಿರುವ ಜವಾಬ್ದಾರಿಗಳು.
ದೇವನೂರು ಮಹಾದೇವ ಅವರು ಕೆಲಕಾಲ ‘ನರಬಂಡಾಯ’ ಹೆಸರಿನ ಪತ್ರಿಕೆ ನಡೆಸಿದರು. ಬಳಿಕ ಅದಕ್ಕೆ ‘ಪಂಚಮ’ ಎಂದು ಹೆಸರಿಟ್ಟರು. ಅಧ್ಯಕ್ಷರಾಗಿ ಜೆ.ಪಿ.ಸ್ವಾಗತ ಸಮಿತಿ ಮತ್ತು ಸರ್ವೋದಯ ಕರ್ನಾಟಕ ಪಕ್ಷ ಸಂಚಾಲಕರು ಇದ್ದರು. ದಲಿತ ಸಂಘರ್ಷ ಸಮಿತಿ ಸದಸ್ಯರು ‘ಅಂಬೇಡ್ಕರ್ ಸಾಹಿತ್ಯ’ ಎಂಬ ಅನುವಾದ ಮಂಡಲಿ, ಕನ್ನಡ ಕಾವಲು ಸಮಿತಿ ಅಧ್ಯಾಪಕರು ಮೈಸೂರಿನ ಭಾರತೀಯ ಭಾಷಾ ಸಂಸ್ಥೆ ಸಂದರ್ಶನ ಪ್ರಾಧ್ಯಪಕರಿದ್ದರು.
- # ದೇವನೂರು ಮಹಾದೇವ ಅವರ ಸಾಮಾಜಿಕತೆಯೂ. —
- ದೇವನೂರು ಮಹಾದೇವ ಅವರು ‘ಕರ್ನಾಟಕ ದಲಿತ ಸಂಘರ್ಷ ಸಮಿತಿ’ಯ ಸ್ಥಾಪಕರಲ್ಲಿ ಒಬ್ಬರು. ಇವರು ಪ್ರಸ್ತುತವಾಗಿ ‘ಕರ್ನಾಟಕ ಸರ್ವೋದಯ’ ಪಕ್ಷದ ಅಧ್ಯಕ್ಷರಾಗಿದ್ದಾರೆ.
- ದೇವನೂರು ಮಹಾದೇವ ಅವರಿಗೆ ಸಂದ ಗೌರವ, ಪುರಸ್ಕಾರವೂ. —
- ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,
೧೯೯೧ ರಲ್ಲಿ ‘ಕುಸುಮಬಾಲೆ’ ಕೃತಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅಲ್ಲಮಪ್ರಭು ಪ್ರಶಸ್ತಿ — ೨೦೧೩ ಬೋಧಿವೃಕ್ಷ ಪ್ತಶಸ್ತಿ. ೨೦೧೩ ರಲ್ಲಿ ವಿ,ಎಂ.ಇನಾಂದಾರ್ ಪ್ರಶಸ್ತಿಯು ಎದೆಗೆ ಬಿದ್ದ ಅಕ್ಷರ ಕೃತಿಗೆ ಇವರ ಒಡಲಾಳ ಕೃತಿಗೆ ಲಭಿಸಿದೆ. ಅಲ್ಲದೇ ಕಲ್ಕತ್ತಾದ ಭಾರತೀಯ ಭಾಷಾ ಪರಿಷತ್ ೧೯೮೪ ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿದೆ.
೨೦೧೧ ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರಿ ಪ್ರಶಸ್ತಿಯನ್ನು ಕೊಟ್ಟೂ ಗೌರವಿಸಿದೆ, ಗೌರವ ಡಾಕ್ಟರೇಟ್, ಮೈಸೂರು ವಿಶ್ವವಿದ್ಯಾನಿಲಯ. ಇದಲ್ಲದೇ ಅಮೇರಿಕಾದಲ್ಲಿ ನಡೆದ ‘ಇಂಟರನ್ಯಾಷನಲ್ ರೈಟಿಂಗ್ ಪ್ರೋಗ್ರಾಮ’ದಲ್ಲೂ ಭಾಗವಹಿಸಿದ್ದರು ದೇವನೂರು ಮಹಾದೇವ ಅವರು.
# ಇಷ್ಟೆಲ್ಲಾ ದೇವನೂರು ಮಹಾದೇವರ ಪರಿಚಯವು ಏಕೆಂದರೆ ಅವರು ಇತ್ತೀಗಷ್ಟೇ ಬರೆದ ‘ಆರ್.ಎಸ್.ಎಸ್. ಆಳ ಮತ್ತು ಅಗಲ’ ಹೊಸ ಕೃತಿಯು ಈಗ ಭಾರಿ ಚರ್ಚಿತ ಕೃತಿಯಾಗಿದೆ. ಈ ಕೃತಿಯ ಬಗೆಗೆ ಸಾಕಷ್ಟು ಪರ ಮತ್ತು ವಿರೋಧಗಳು ಕಾಣುತ್ತಿವೆ. ಅದಕ್ಕಾಗಿಯೇ ಈ ಕೃತಿಯನ್ನು ಒಮ್ಮೆ ನಾವೂ ನೋಡೋಣ ಎಂದು ಈ ಬರಹ ಬರೆದೆನು.
ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’
ಇಂದು, ವರ್ತಮಾನದಲ್ಲಿ ಆರ್‌ಎಸ್‌ಎಸ್ ಸಂತಾನಗಳಲ್ಲಿ ಒಂದಾದ ಬಿಜೆಪಿಯು ಕೇಂದ್ರದಲ್ಲೂ, ಕೆಲವು ರಾಜ್ಯಗಳಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಮ್ಮ ಕರ್ನಾಟಕದಲ್ಲೂ ಅಂತು ಇಂತು ಎಂತೊ ಒಟ್ಟಿನಲ್ಲಿ ಅಧಿಕಾರ ಹಿಡಿದಿದೆ. 1975ರ ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಆಡಳಿತವನ್ನು ವಿರೋಧಿಸುವ ಜಯ ಪ್ರಕಾಶ್ ನಾರಾಯಣ್ ಅವರ ನೇತೃತ್ವದ ಆಂದೋಲನದೊಳಗೆ ಜನಸಂಘ (ಬಿಜೆಪಿ) ನುಸುಳಿಕೊಂಡಿತು. ಅಂದಿನಿಂದ ಅದರ ಜಾಯಮಾನ ಬೇರೆಯೇ ಆಗಿಬಿಟ್ಟಿತು.
ಸಮಾಜದಿಂದ ನಿರಾಕರಣೆಗೆ ಒಳಗಾಗಿದ್ದ ಬಿಜೆಪಿಯು ಸಮಾಜದಲ್ಲಿ ಒಪ್ಪಿತವಾಗತೊಡಗಿತು. ಆ ಸಮಯದಲ್ಲಿ ನೂತನವಾಗಿ ರೂಪಿತವಾಗುವ ಜನತಾ ಪಕ್ಷದಲ್ಲಿ ಸೇರ್ಪಡೆಯಾಗುವ ಮೊದಲು, ಜಯಪ್ರಕಾಶ್ ನಾರಾಯಣ್ ಅವರಿಗೆ ಅಂದಿನ ಆರ್‌ಎಸ್‌ಎಸ್ ಮುಖ್ಯಸ್ಥರೂ ಒಪ್ಪಿಗೆ ನೀಡಿ ಇಂದಿನ ಬಿಜೆಪಿಯಾಗಿರುವ ಅಂದಿನ ಜನಸಂಘವು, ತಾನು ದ್ವಿಸದಸ್ಯತ್ವ ತೊರೆಯುವುದಾಗಿ ವಚನ ನೀಡಿದ್ದವು.
ಈ ಮಾತು ಕೊಟ್ಟವರಲ್ಲಿ ಎ.ಬಿ.ವಾಜಪೇಯಿ, ಎಲ್.ಕೆ.ಅದ್ವಾನಿಯವರೂ ಜೊತೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾ ಸಾಹೇಬ ದೇವರಸ್ ಪ್ರಮುಖರು.
ಇವರು ಎತ್ತರದ ನಾಯಕರು ಎಂದು ವಿಶ್ವಾಸವಿಟ್ಟಿದ್ದ ಜೆಪಿಯವರು ಅವರ ಮಾತುಗಳನ್ನು ನಂಬಿದ್ದರು. ಆದರೆ ಆರ್‌ಎಸ್‌ಎಸ್ ಮೂಲದವರು ಜನತಾಪಕ್ಷವಾಗಿ ಎಲ್ಲರ ಜೊತೆಯಾದರೂ ಆರ್‌ಎಸ್‌ಎಸ್‌ನೊಡನೆ ತನ್ನ ದ್ವಿಸದಸ್ಯತ್ವ ತೊರೆದುಕೊಳ್ಳಲಿಲ್ಲ. ವಚನಭ್ರಷ್ಟವಾಯ್ತು. ಜೆಪಿಯವರನ್ನು ನಂಬಿಸಿ ದ್ರೋಹ ಮಾಡಿತು. ಜಯಪ್ರಕಾಶ್ ನಾರಾಯಣ್ ಅವರು ತಮ್ಮ ಇಳಿಗಾಲದಲ್ಲಿ ಆರ್‌ಎಸ್‌ಎಸ್ ಮೂಲದವರ ದ್ರೋಹವನ್ನು ನೆನಪಿಸಿಕೊಂಡು ’ನನಗೆ ವಿಶ್ವಾಸದ್ರೋಹ ಬಗೆದರು’ ಎನ್ನುತ್ತ ಪರಿತಪಿಸುತ್ತಾರೆ.
(1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣರನ್ನು ಚಂಡಿಗಢದಲ್ಲಿ ಗೃಹಬಂಧನದಲ್ಲಿಟ್ಟಿದ್ದಾಗ ಜೆಪಿಯವರನ್ನು ಗಮನಿಸುವ ಉಸ್ತುವಾರಿಯಾಗಿ ಅಲ್ಲಿನ ಜಿಲ್ಲಾಧಿಕಾರಿಗಳಾದ ಎಂ.ಜಿ.ದೇವಸಹಾಯಂ ಅವರನ್ನು ನೇಮಿಸಿರುತ್ತದೆ. ದಿನನಿತ್ಯದ ಒಡನಾಟದಲ್ಲಿ ಅವರು ಜೆಪಿಯವರ ಆತ್ಮೀಯರಾಗಿಬಿಡುತ್ತಾರೆ. ಬಿಡುಗಡೆಯಾದ ಮೇಲೂ ಅವರ ಒಡನಾಟ ಮುಂದುವರಿಯುತ್ತದೆ.
ಎಂ.ಜಿ.ದೇವಸಹಾಯಂ ಅವರು ಅಜಾಜ್ ಅಶ್ರಫ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮೇಲ್ಕಂಡ ಉಲ್ಲೇಖಿತ ಮಾತುಗಳು ಬರುತ್ತವೆ.
(ಇದು ನ್ಯೂಸ್‌ಕ್ಲಿಕ್ ಅಂತರ್‌ಜಾಲ ಪತ್ರಿಕೆಯಲ್ಲಿ 26 ಜೂನ್, 2019ರಂದು ಪ್ರಕಟವಾಗಿದೆ.)
ಅಲ್ಲಿಂದ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಘಪರಿವಾರದ ವಂಚನಾ ಪರ್ವ ದೇಶದ ಉದ್ದಗಲಕ್ಕೂ ವ್ಯಾಪಿಸುತ್ತದೆ. ಪಾಕಿಸ್ತಾನವನ್ನು ಶಾಶ್ವತ ಶತ್ರುರಾಷ್ಟ್ರವಾಗಿ ಬಿಂಬಿಸುತ್ತ ಇಲ್ಲಿ ಸಣ್ಣಪುಟ್ಟ ಗಲಾಟೆಗಳಾದರೂ ಅದಕ್ಕೆಲ್ಲಾ ಪಾಕಿಸ್ತಾನವೇ ಕಾರಣವೆಂದು ಪ್ರಚಾರ ಮಾಡುತ್ತಾ, ಪರಸ್ಪರ ಎತ್ತಿಕಟ್ಟುತ್ತಾ, ಸಮಾಜದಲ್ಲಿ ಭೀತಿ ವಾತಾವರಣ ಉಂಟುಮಾಡುತ್ತಾ, ಕೆಲವು ಸಲ ತಾವೇ ಗಲಾಟೆ ಮಾಡಿ ಅದನ್ನು ಮುಸ್ಲಿಮರ ಮೇಲೆ ಆರೋಪಿಸುತ್ತಾ, ಒಟ್ಟಿನಲ್ಲಿ ಎಲ್ಲರ ನೆಮ್ಮದಿ ಕೆಡಿಸಿ ಉಂಟಾದ ಗೊಂದಲ, ಅನುಮಾನ, ದ್ವೇಷದ ವಾತಾವರಣದಲ್ಲಿ ಬಿಜೆಪಿ ಅಧಿಕಾರಕ್ಕೂ ಬಂದುಬಿಟ್ಟಿತು.
ಈಗ, ನೂರಾರು ಪಂಥಗಳ, ನಾಕಾರು ಧರ್ಮಗಳ ವೈವಿಧ್ಯಮಯ ಸಮೃದ್ಧ ವಿಶಾಲ ಹಿಂದೂ ಧರ್ಮವೂ ಜಯಪ್ರಕಾಶ್ ನಾರಾಯಣ್‌ರಂತೆ ’ತಾನು ಮೋಸ ಹೋದೆ’ ಅಂತ ಪರಿತಪಿಸುವಂತಾಗಿದೆ.
ಬಿಜೆಪಿಯು ತಾನು ಅಧಿಕಾರಕ್ಕೆ ಬರುವ ಮೊದಲು, ಕೊಟ್ಟ ಮಾತುಗಳೆಷ್ಟು, ತೊಟ್ಟ ವೇಷಗಳೆಷ್ಟು? ಒಂದೇ? ಎರಡೆ? ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ತಂದು ಎಲ್ಲಾ ಭಾರತೀಯರ ಅಕೌಂಟ್‌ಗೆ 15 ಲಕ್ಷ ಹಾಕುತ್ತೇವೆ ಅಂದರು. ಸ್ವತಃ ಪ್ರಧಾನಿ ಮೋದಿಯವರೇ ಅಂದರು. ಯಾರಿಗೆ ಬಂತು? ಬಂದಿದ್ದರೆ ಎಲ್ಲಿಗೆ ಹೋಯಿತು? ಆಮೇಲೆ ಮೋದಿಯವರೇ ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆಂದರು. ಎಂದೂ ಇಲ್ಲದಷ್ಟು ನಿರುದ್ಯೋಗ ಹೆಚ್ಚಿಸಿಬಿಟ್ಟರು.
ಹೇಳುವವರು ಯಾರು? ಕೇಳುವವರು ಯಾರು? ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆಂದರು. ಇರುವ ಆದಾಯವನ್ನಾದರೂ ಉಳಿಯಗೊಡಿಸಲಿಲ್ಲ. ನೆಲಕಚ್ಚಿಸಿಬಿಟ್ಟರು. ಇವರು ಯಾವುದನ್ನೂ ಉಳಿಯಗೊಳಿಸುತ್ತಿಲ್ಲ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರುತ್ತ ಬದುಕುತ್ತಿದ್ದಾರೆ. ವಿದೇಶಿ ಸಾಲವನ್ನೂ ಎಂದೂ ಇಲ್ಲದಷ್ಟು ಹೆಚ್ಚು ಮಾಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ಇವರು ಮರಳಲ್ಲೆ ಮನೆಕಟ್ಟುತ್ತ ಬಣ್ಣದ ಮಾತುಗಳನ್ನು ಆಡುತ್ತ ಭಾರತವನ್ನು ಪಾಪರ್ ಮಾಡಿಬಿಡುತ್ತಾರೇನೊ ಅನ್ನಿಸಿಬಿಡುತ್ತದೆ.
ಇವರ ಆಳ್ವಿಕೆಯಲ್ಲಿ ನಿರುದ್ಯೋಗ ಹೆಚ್ಚಾದರೂ ಇವರಿಗೆ ಸಮಸ್ಯೆ ಅಲ್ಲ; ಬೆಲೆ ಏರಿಕೆ ಹೆಚ್ಚಾದರೂ ಇವರಿಗೆ ಸಮಸ್ಯೆ ಅಲ್ಲ. ಜನಸಮುದಾಯಗಳ ನಡುವೆ ದ್ವೇಷದ ಕಿಡಿ ಹಚ್ಚಿ ಅದರಲ್ಲಿ ಜನ ಕುದಿಯುವಂತೆ ಮಾಡಿ ಅವರ ಹೊಟ್ಟೆಗೆ ದ್ವೇಷದ ಆಹಾರ ನೀಡಿ ಮಲಗಿಸುತ್ತಿದೆ- ಹೀಗಿದೆ ಇವರ ಆಳ್ವಿಕೆ. ಬಿಜೆಪಿಗೆ ಮತ ನೀಡಿ ಅವರನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿದ ಮತದಾರರೂ ಇಂದು ಪರಿತಪಿಸಬೇಕಾಗಿದೆ.
ಇದಕ್ಕೆಲ್ಲಾ ಕಾರಣ, ಇಂದು ಭಾರತದಲ್ಲಿ ಪ್ರಜೆಗಳ ಪ್ರಭುತ್ವದ ಸ್ಥಿತಿಯು ಗತಿಗೆಟ್ಟಿದೆ. ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಯು ತನ್ನನ್ನು ಆಯ್ಕೆ ಮಾಡಿದ ಪ್ರಜೆಗಳ ಕಷ್ಟಸುಖಕ್ಕೆ ಹಿತಾಸಕ್ತಿಗೆ ನಿಷ್ಠನಾಗಿಲ್ಲ. ಇದಕ್ಕೆ ಕಾರಣ ಭಾರತದ ರಾಜಕೀಯ ಪಕ್ಷಗಳ ಚಹರೆ ನೋಡಿದರೆ, (೧) ಏಕವ್ಯಕ್ತಿ ನಿಯಂತ್ರಿತ ಪಕ್ಷ ರಾಜಕಾರಣ (೨) ಕುಟುಂಬ ನಿಯಂತ್ರಿತ ಪಕ್ಷ ರಾಜಕಾರಣ (೩) ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷ ರಾಜಕಾರಣ, ಈ ಮೂರು ಬಗೆಯ ಪಕ್ಷಗಳು ಭಾರತದಲ್ಲಿ ಒಂದಲ್ಲಾ ಒಂದು ಕಡೆ ಆಳ್ವಿಕೆ ನಡೆಸುತ್ತಿವೆ. ಈ ಮೂರೂ ಪ್ರಜಾಪ್ರಭುತ್ವಕ್ಕೆ ಮಾರಕವಾದವುಗಳು.
ದೇಶದ ಚುಕ್ಕಾಣಿಯನ್ನು ಮೂರನೆಯ ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷ ಬಿಜೆಪಿ ಹಿಡಿದಿದೆ. ಈ ಮೂರೂ ಪಕ್ಷಗಳಿಂದ ಆಯ್ಕೆಯಾದವರ ನಿಷ್ಠೆಯು ತನ್ನನ್ನು ಆಯ್ಕೆ ಮಾಡಿದ ಮತದಾರರ ಹಿತಕ್ಕಿಂತಲೂ ಹೆಚ್ಚಾಗಿ ತನ್ನ ಪಕ್ಷವನ್ನು ನಿಯಂತ್ರಿಸುವ ವ್ಯಕ್ತಿಗೆ/ಕುಟುಂಬಕ್ಕೆ ಇರುವಂತೆ, ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿಸುವ ಪಕ್ಷದ ಪ್ರಜಾಪ್ರತಿನಿಧಿಗಳ ನಿಷ್ಠೆ ಆ ಸಂವಿಧಾನೇತರ ಸಂಘಕ್ಕೇನೆ ಹೆಚ್ಚು ಇರುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಎಲ್ಲಕ್ಕಿಂತ ಹೆಚ್ಚು ಡೇಂಜರ್. ಇಂದು ಬಿಜೆಪಿಯ ಶಾಸಕ, ಸಂಸದ, ಸಚಿವರು ಅಥವಾ ಯಾವುದೇ ನಾಯಕನು ನಾ ಮುಂದು ತಾ ಮುಂದು ಎಂಬಂತೆ ತನ್ನ ಬಿಜೆಪಿಯ ರಾಜಕಾರಣವನ್ನು ನಿಯಂತ್ರಿಸುವ ಆರ್‌ಎಸ್‌ಎಸ್ ಮೆಚ್ಚಿಸಲು ಅಬ್ಬರಿಸುವುದಕ್ಕೆ ಇದಲ್ಲದೆ ಬೇರೆ ಕಾರಣ ಇರಲಾರದು.
ಇಲ್ಲಿ ಇನ್ನೊಂದು ಗಮನಿಸಬೇಕು. ಉದಾಹರಣೆಗೆ ಬಿಜೆಪಿಗೆ ಬಹುಮತ ತಂದು ಕೊಟ್ಟು ಪ್ರಧಾನಿಯಾದ ಮೋದಿಯವರು ಬಲಿಷ್ಠ ನಾಯಕರೆಂಬಂತೆ ಬಿಂಬಿತವಾಗುತ್ತಿದ್ದಾರೆ.
ಆದರೆ ಇವರು ಉತ್ಸವಮೂರ್ತಿ ಅಷ್ಟೆ. ಆದರೆ ಮೂಲ ದೇವರಾದ ಆರ್.ಎಸ್.ಎಸ್ ನಾಗಪುರದ ಗುಡಿಯಲ್ಲಿ ಕೂತಿರುತ್ತಿತ್ತು. ಉತ್ಸವಮೂರ್ತಿ ದೇಶದ ಉದ್ದಗಲಕ್ಕೂ ವಿಜೃಂಭಿಸುತ್ತಿರುತ್ತದೆ. ಜೈ ಜೈ ಅನ್ನಿಸಿಕೊಳ್ಳುತ್ತಿರುತ್ತದೆ. ಉತ್ಸವಮೂರ್ತಿಗೆ ಬೇಕಾದ ಸಾಮರ್ಥ್ಯ ಎಂದರೆ ಪ್ರದರ್ಶನ ನೀಡುವ ಕಲೆಗಾರಿಕೆ ಹಾಗೂ ತನ್ನ ಆಳ್ವಿಕೆಯಲ್ಲಿ ಸಮಸ್ಯೆಗಳು ಉಲ್ಬಣವಾಗಿ ನಿಯಂತ್ರಣ ತಪ್ಪುತ್ತಿರುವಾಗ, ಅದನ್ನು ಭಾವನಾತ್ಮಕವಾಗಿ ತಿರುಗಿಸಿ ಮರೆಮಾಚುವ ಚಾಣಾಕ್ಷತನ ಹಾಗೂ ಜನರನ್ನು ಮರುಳು ಮಾಡುವ ಮೋಡಿ ವಿದ್ಯೆ ಹಾಗೂ ಗರ್ಭಗುಡಿ ದೇವರಿಗೆ ಪರಮ ನಿಷ್ಠೆ. ಇದಿಷ್ಟೆ ಬೇಕಾಗಿರುವುದು.
ಇದಿಷ್ಟ ಅಲ್ಲವೇ ಇಂದು ಆಗುತ್ತಿರುವುದು? ಮತ್ತು ಇಂಥ ಕಡೆ ಪ್ರಜಾಪ್ರಭುತ್ವಕ್ಕೆ ಸಂಭವನೀಯ ಇನ್ನೊಂದು ದುರಂತವೆಂದರೆ, ಸಂವಿಧಾನೇತರ ಸಂಘ ನಿಯಂತ್ರಿತ ಪಕ್ಷದ ನಾಯಕತ್ವದ ಪಟ್ಟವು ಗರ್ಭಗುಡಿಯಲ್ಲಿರುವ ದೇವರು ಹೂ ಕೊಟ್ಟಂತೆ ನಿರ್ಧರಿಸಲ್ಪಡುತ್ತದೆ, ಎಲ್ಲವೂ ತೊಗಲುಗೊಂಬೆ ಆಟದಂತೆ! ಹಾಲಿ ನಾಟಕವಾಡುತ್ತಿರುವ ತೊಗಲುಗೊಂಬೆಗಿಂತಲೂ ಇನ್ನೊಂದು ಹೆಚ್ಚು ಬಣ್ಣದ, ಹೆಚ್ಚು ನಿಷ್ಠೆ ಅಥವಾ ರಾಜಕೀಯ ಬೇರಿಲ್ಲದ ಮತ್ತು ಕಡ್ಡಾಯವಾಗಿ ತಾಳಕ್ಕೆ ಕುಣಿಯುವ, ಹೆಚ್ಚು ಮರುಳು ಮಾಡುವ ಹೊಸ ತೊಗಲುಗೊಂಬೆ ಸಿಕ್ಕರೆ ಅದು ರಂಗಪ್ರವೇಶ ಮಾಡುತ್ತದೆ. ಅದು ನಾಯಕ ಆಗುತ್ತದೆ. ಮೊದಲು ನಾಯಕ ಆಟ ಆಡಿದ್ದು ಮೂಲೆಗೆ ಎಸೆಯಲ್ಪಡುತ್ತದೆ. ಪ್ರಜೆಗಳಿಂದ ಆಯ್ಕೆಯಾದವರ ಪರಿಸ್ಥಿತಿಯೆ ಹೀಗಾದರೆ? ಇದು ಘನಘೋರ. ಪ್ರಜಾಪ್ರಭುತ್ವಕ್ಕೆ ಇದೇ ಎಲ್ಲಕ್ಕಿಂತಲೂ ತುಂಬಾ ಅಪಾಯಕಾರಿ ಬೆಳವಣಿಗೆ.
ಇವೆಲ್ಲಾ ಕೂಡಿಕೊಂಡು ಜನಜೀವನ ಘನಘೋರವಾಗಿದೆ. ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷವಾದ ಬಿಜೆಪಿಯ ನೇತಾರ, ದೇಶದ ಪ್ರಧಾನಿಗೆ ಸಾಮರ್ಥ್ಯ ಇದ್ದಿದ್ದರೆ ನಿರುದ್ಯೋಗ ಕಮ್ಮಿ ಆಗುತ್ತಿತ್ತು. ಬೆಲೆ ಏರಿಕೆ ನಿಯಂತ್ರಣದಲ್ಲಿರುತ್ತಿತ್ತು. ಸಾರ್ವಜನಿಕ ಸಂಪತ್ತನ್ನು ಮಾರುತ್ತ ನಡೆಸುತ್ತಿರಲಿಲ್ಲ. ವಿದೇಶಿ ಸಾಲ ಹೆಚ್ಚು ಮಾಡುತ್ತಿರಲಿಲ್ಲ. ಭಾರತದ ಸ್ವಾಯತ್ತ ಸಂಸ್ಥೆಗಳ ಹಲ್ಲು, ಉಗುರು ಕಿತ್ತು ನಿಸ್ತೇಜಗೊಳಿಸುತ್ತಿರಲಿಲ್ಲ.
ಪ್ರಧಾನಿ ಮೋದಿ ದುನಿಯಾದಲ್ಲಿ ಕೊರೊನಾಕ್ಕೆ ಮೊದಲು 2020ರಲ್ಲಿ ಅಂಬಾನಿಯವರ ಒಟ್ಟು ಸಂಪತ್ತು 2.86 ಲಕ್ಷ ಕೋಟಿ ಇತ್ತು. ಕೇವಲ ಎರಡೇ ವರ್ಷಗಳಲ್ಲಿ (ಜೂನ್ 10, 2022) ಅದು 8,03 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ! ಹೀಗೆಯ ಅದಾನಿಯವರ ಒಟ್ಟು ಸಂಪತ್ತು ಕೊರೋನಾಕ್ಕೆ ಮೊದಲು 2020ರಲ್ಲಿ 65 ಸಾವಿರ ಕೋಟಿಗಳಷ್ಟು ಇತ್ತು, ಅಂದರೆ ಅಣ್ಣ ಅಂಬಾನಿಯ ಸಂಪತ್ತಿನ ಕಾಲುಭಾಗದಲ್ಲಿ ಕಾಲು ಭಾಗವೂ ಇರಲಿಲ್ಲ! ಹೀಗಿದ್ದ ಅದಾನಿಯವರ ಸಂಪತ್ತು ಕೇವಲ ಎರಡು ವರ್ಷಗಳಲ್ಲಿ (ಜೂನ್ 10, 2022) 7.80 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ.
(ಉಲ್ಲೇಖ: FORBES Magazine) ಒಂದೇ ಎರಡೆ? ಭಾರತವು ಭೀಕರ ಅಸಮಾನತೆ, ಅಸಮತೋಲನಗಳಿಂದ ಸೂತ್ರ ಕಿತ್ತ ಪಟದಂತೆ ಗೋತ ಹೊಡೆಯುತ್ತಾ ಹಾರಾಡುತ್ತಿದೆ. ಆದರೂ ಸಂಪತ್ತು ಉಳ್ಳವರಿಗೆ ಸರ್ಕಾರದ ಎಲ್ಲಾ ರಿಯಾಯಿತಿ, ತೆರಿಗೆಯಲ್ಲೂ ಕಡಿತ, ಅವರ ಹಿಂತಿರುಗಿಸದ ಸಹಸ್ರಾರು ಕೋಟಿ ಸಾಲವನ್ನು Write off ಮಾಡಿ, ಅಂದರೆ ಅದು ಮುಂದೊಂದು ದಿನ ಬರುತ್ತದೆಂದು ಅದರ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ಮತ್ತೆ ಅವರಿಗೆ ಸಾಲಕ್ಕೆ ಅವಕಾಶ ಕಲ್ಪಿಸುವುದೇ ಮುಂತಾದವಕ್ಕೆ ಮಾತ್ರ ಈ ಸರ್ಕಾರ ಇದೆಯೇನೋ ಅನಿಸುತ್ತದೆ. ಈ ಸರ್ಕಾರ ಯಾರಿಗಾಗಿ ಇದೆ? ಇಡೀ ಭಾರತದ ಜನತೆ ಈಗ ತಲೆ ಮೇಲೆ ಕೈ ಹೊತ್ತು ಚಿಂತಿಸಬೇಕಾಗಿದೆ.
ಆದರೆ ಶತಾಯಗತಾಯ ಏನೇ ಆಗಲಿ, ಪ್ರಜೆಗಳು ಸಮಸ್ಯೆಗಳಿಂದ ತತ್ತರಿಸುತ್ತಿರಲಿ, ಏನೇ ಬರಲಿ, ಅಥವಾ ಏನೇ ಆಗಲಿ, ದೇಶ ಧೂಳೀಪಟವಾದರೂ ಸರಿಯೇ, ಸಂವಿಧಾನೇತರ ಸಂಘ ನಿಯಂತ್ರಿತ ಪಕ್ಷ ಬಿಜೆಪಿಯು ದೇಶಪ್ರೇಮ ಜಪಿಸುತ್ತ ತರುತ್ತಿರುವ ಕಾನೂನುಗಳೊ ತಿದ್ದುಪಡಿಗಳೊ ಅದರಲ್ಲಿ ಮಾತ್ರ ಚಾತುರ್ವರ್ಣ ಪದ್ಧತಿ, ಮನುಧರ್ಮಶಾಸ್ತ್ರ ನುಸುಳುವಿಕೆ, ಭಾರತ ಸಂವಿಧಾನದ ಧ್ವಂಸ, ಇಸ್ಲಾಂ, ಕ್ರಿಶ್ಚಿಯನ್ ಅಸಹನೆ, ಜೊತೆಗೆ ಆರ್ಯನ್ ಶ್ರೇಷ್ಠತೆ ಇವು ಇದ್ದಿರಲೇಬೇಕು. ಇವು ಹುಡುಕಿದರೆ ಸಿಗುತ್ತಾ ಹೋಗುತ್ತವೆ. ಈಗಾಗಲೇ, ಕರ್ನಾಟಕದಲ್ಲಿ ತಂದಿರುವ ’ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಕಾಯ್ದೆ’ ಮೇಲ್ನೋಟಕ್ಕೆ ಇದು ಏನೋ ಒಂದು ಕಾಯ್ದೆ ಎಂಬಂತಿದೆ. ಇದರ ಹೊಟ್ಟೆ ಒಳಗೆ ಭಾರತ ಸಂವಿಧಾನದ ಧ್ವಂಸ ಹಾಗೂ ಮನುಧರ್ಮ ಶಾಸ್ತ್ರದ ಪ್ರತಿಷ್ಠಾಪನೆ ಇದೆ.
ಸಂವಿಧಾನದ ಪ್ರಕಾರ ಇರುವ ಸ್ವಾತಂತ್ರ್ಯದ ಬಗ್ಗೆ ನಾವೆಲ್ಲರೂ ಮಾತಾಡುತ್ತೇವೆ. ಆದರೆ ಆರ್‌ಎಸ್‌ಎಸ್‌ಗೆ ’ಸ್ವಾತಂತ್ರ್ಯ’ದ ಅರ್ಥವೇ ಬೇರೆ. ಆರ್‌ಎಸ್‌ಎಸ್‌ನ ಗುರೂಜಿ ಗೋಲ್ವಾಲ್ಕರ್ ಅವರು ’ನಮ್ಮ ರಾಷ್ಟ್ರೀಯ ಜೀವನ ಮೌಲ್ಯ’ವನ್ನು, ಎಂದರೆ ನಮ್ಮ ’ಧರ್ಮ’ ಮತ್ತು ’ಸಂಸ್ಕೃತಿ’ಯನ್ನು ರಕ್ಷಿಸಿ ಪ್ರಸಾರ ಮಾಡುವುದೇ ’ಸ್ವತಂತ್ರ’ತೆಯ ಅಸ್ತಿತ್ವಕ್ಕೆ ’ಮೂಲ ಸ್ಫೂರ್ತಿ’ ಎಂಬುದು ನಮ್ಮ ಚಾರಿತ್ರಿಕ ಸಂಪ್ರದಾಯದ ದೃಷ್ಟಿ’ ಎಂದು ತಮ್ಮ ’ಚಿಂತನಗಂಗಾ’ ಕೃತಿಯಲ್ಲಿ ಹೇಳುತ್ತಾರೆ. ಆರ್‌ಎಸ್‌ಎಸ್ ಸಂತಾನ ಬಿಜೆಪಿಗೆ ಅವರ ಗುರು ಗೋಲ್ವಾಲ್ಕರ್ ಅವರ ಮಾತೇ ಸಂವಿಧಾನವಾಗಿದೆ.
ಇದನ್ನೆಲ್ಲಾ ಹೇಳುವ ದೇವನೂರು ಮಹಾದೇವರ ‘ಆರ್.ಎಸ್.ಎಸ್.ಆಳ ಮತ್ತು ಅಗಲ’ ಕೃತಿಯು ಈಗ ಭಾರೀ ಚರ್ಚಿತ ಕೃತಿಯಾಗಿ ರೂಪು ಪಡೆದಿದೆ. ಹೀಗೆಂದು ಹೇಳುತ್ತಾ ಈ ಕೃತಿಯಾದ ‘ಆರ್.ಆರ್.ಎಸ್.ಆಳ ಮತ್ತು ಅಗಲ’ದ ಬಗೆಗೆ ಮಾತು ಮುಗಿಸುತ್ತೇನೆ.