ಎತ್ತಪೋತ ಜಲಪಾತಕ್ಕೆ ತಹಸೀಲ್ದಾರ ಭೇಟಿ ಪರಿಶೀಲನೆ

0
88

ನೀರಿನ ಪ್ರಮಾಣ : ತಾಲೂಕಿನಾದ್ಯಂತ ಬುಧವಾರದಂದು ಉತ್ತಮ ಮಳೆಯಾಗಿದ್ದು, ಚಿಂಚೋಳಿ ೩.೨ ಮಿ.ಮೀ, ಕುಂಚಾವರಂ ೬೦.೨ ಮಿ.ಮೀ, ನಿಡಗುಂದಾ ೧೫.೦ ಮಿ.ಮೀ, ಚಿಮ್ಮನಚೋಡ ೧೮.೨ ಮಿ.ಮೀ, ಐನಾಪೂರ ೬೦.೫ ಮಿ.ಮೀ, ಸುಲೇಪೇಟ ೧೦.೪ ಮಿ.ಮೀ ಮಳೆಯಾದ ವರದಿಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ವೀರಶೇಟ್ಟಿ ರಾಠೋಡ ತಿಳಿಸಿದರು.

ಚಿಂಚೋಳಿ: ತಾಲೂಕಿನ ಕುಂಚಾವರಂ ಭಾಗದ ಎತ್ತಪೋತ ಜಲಪಾತದ ನೀರಿನಲ್ಲಿ ಜನ ಕೊಚ್ಚಿಕೊಂಡು ಹೊಗಿದ್ದಾರೆ. ಎಂಬ ಸುಳ್ಳು ವಿಡಿಯೋ ವೈರಲ್ ಹಿನ್ನೆಲೆ ತಹಸೀಲ್ದಾರ ಅಂಜುಮ್ ತಬಾಸುಮ್ ಅವರು ಗುರುವಾರದಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Contact Your\'s Advertisement; 9902492681

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ ಹಬ್ಬಿದ್ದು, ಯಾರು ಭಯಪಡುವ ಅಗತ್ಯವಿಲ್ಲ. ತಾಲೂಕು ಆಡಳಿತವು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದು, ಈಗಾಗಲೇ ಮಳೆಯಿಂದ ಯಾವುದೇ ಹಾನಿ ಉಂಟಾಗದಂತೆ ಪ್ರತಿ ಕ್ಷಣ ಕ್ಷಣ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಜನತೆ ನದಿ, ಜಲಪಾತದ ಹತ್ತಿರ ಸುಳಿಯಬೇಡಿ ಎಂದು ಸಲಹೆ ನೀಡಿದರು.

ನಂತರ ನೆರೆಯ ತೆಲಂಗಾಣದ ಮೊಗಡಂಪಳ್ಳಿ ಪೋಲಿಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಎತ್ತಪೋತ ಜಲಪಾತದ ನೀರಿನ ಸಮೀಪ ಬಾರದಂತೆ ಕಟ್ಟೆಚ್ಚರ ವಹಿಸಬೇಕು. ಒರ್ವ ಪೋಲಿಸ್ ಸಿಬ್ಬಂದಿ ನಿಯೋಜನೆಗೊಂಡು ಎತ್ತಪೋತ ಜಲಪಾತದ ಸಮೀಪ ಯಾರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಡಿ. ಸುತ್ತಮುತ್ತಲು ಯಾವುದೇ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಪೋಲಿಸ್ ಸಿಬ್ಬಂದಿ ಜಂಗಯ್ಯ ಅವರಿಗೆ ತಿಳಿಸಿದರು.

ಈ ವೇಳೆ ಗ್ರೇಡ್-೨ ತಹಸೀಲ್ದಾರ ವೆಂಕಟೇಶ ದುಗ್ಗನ್, ಕಂದಾಯ ಸಿಬ್ಬಂದಿಗಳಾದ ರವಿಕುಮಾರ ಚಿಟ್ಟಾ, ಅಮೀರಬಾಬಾ, ತೆಲಂಗಾಣ ಪೋಲಿಸ್ ಸಿಬ್ಬಂದಿ ಜಗಯ್ಯ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here