ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡರ ಬಂಧನ

0
88

ಕಲಬುರಗಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಇಡಿ ವಿಚಾರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಡಾ ಅಜಯ್‌ಸಿಂಗ್, ಖನೀಜ್ ಫಾತೀಮಾ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಲಾಯಿತು.

ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಕೈಗೊಂಡ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ತಡೆದ ಪೋಲಿಸರು ನೂರಾರು ಜನ ಕೈ ಕಾರ್ಯಕರ್ತರನ್ನ ಬಂಧಿಸಿ ಕರೆದೊಯ್ದರು.

Contact Your\'s Advertisement; 9902492681

ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸೋನಿಯಾ ಗಾಂಧಿ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಉದ್ದೇಶದಿಂದ ಈ ರೀತಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ನ್ಯಾಯಾಂಗದ ಮೇಲೆ ದಬ್ಬಾಳಿಕೆ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಮನೀ ಲಾಡ್ರಿಂಗ್ ಆಗಿದೆ ಅಂತಿದ್ದಾರೆ, ನಯಾ ಪೈಸೆ ವರ್ಗಾವಣೆ ಆಗಿದೆಯಾ ಎಂದು ಪ್ರಶ್ನಿಸಿದ  ಅವರು, ಕೋಟ್ಯಾಂತರ ರೂಪಾಯಿ ಕೊಟ್ಟು ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಮಾಡಿದಿರಲ್ಲ ಅದರ ಬಗ್ಗೆ ಯಾಕೆ ಇಡಿ ತನಿಖೆ ಮಾಡ್ತಿಲ್ಲ? ಒಬ್ಬ ಬಿಜೆಪಿಯ ನಾಯಕ ಮೇಲೆ ಇಡಿ ತನಿಖೆ ಮಾಡಿದ್ದಿರಾ?. ರಾಹುಲ್ ಗಾಂಧಿಗೆ ವಿಚಾರಣೆ ಮಾಡಿದ್ದೀರಿ?, ಈಗ ಸೋನಿಯಾ ಗಾಂಧಿ ವಿಚಾರಣೆ ಮಾಡ್ತಿದ್ದಿರಾ ನಾವು ಯಾರಿಗೂ ಹೆದರಲ್ಲ, ಆತ್ಮಸ್ಥೈರ್ಯ ಕುಗ್ಗಿಸಲು ಇಡಿ ತನಿಖೆ ಮಾಡ್ತಿದ್ದಿರಾ ಅಷ್ಟೆ ವಿಪಕ್ಷಗಳ ಧ್ವನಿ ಹತ್ತಿಕ್ಕಲು ಈ ರೀತಿ ತನಿಖೆ ಮಾಡ್ತಿದ್ದಿರಾ.? ದ್ವೇಷದ ರಾಜಕಾರಣ ಮಾಡ್ತಿದ್ದಿರಿ, ಇದು ನಿಮಗೆ ತಿರುಗು ಬಾಣ ಆಗುತ್ತದೆ ಎಂದರು.

ಬೆಲೆ ಏರಿಕೆ ಮಾಡಿದ್ದಿರಿ, ಜನರಿಗೆ ಒಂದೊತ್ತು ಅನ್ನವೂ ಸೀಗುತ್ತಿಲ್ಲ. ಇದರಿಂದ ಜನರ ಅಟೆನ್ಷನ್ ಡೈವರ್ಟ್ ಮಾಡಲು ಇಡಿ ತನಿಖೆ ಮಾಡ್ತಿದ್ದಾರೆ. ಬಿಜೆಪಿಯ ದುರಾಡಳಿ ಮುಂದುವರೆದರೆ ಶ್ರೀಲಂಕಾ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ಬಿಜೆಪಿ ದುರಾಡಳಿತ, ದ್ವೇಷ ರಾಜಕಾರಣದ ವಿರುದ್ದ ಕಾಂಗ್ರೆಸ್ ದೇಶದಾದ್ಯಂತ ಹೋರಾಟ ಮಾಡುತ್ತಿದೆ ಎಂದು ಬಿಜೆಪಿ ಸರಕಾರದ ವಿರುದ್ದ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದರು.

ವಿಧಾನಸಭೆಯ ಮುಖ್ಯ ಸಚೇತಕ, ಶಾಸಕ ಅಜಯ ಸಿಂಗ್ ಮಾತನಾಡಿ, ಸೋನಿಯಾ ಗಾಂಧಿ ದೇಶಕ್ಕಾಗಿ ಪ್ರಧಾನಿ ಸ್ಥಾನ ತ್ಯಾಗ ಮಾಡಿ ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಆದರೆ, ಈಗ ಭ್ರಷ್ಟಾಚಾರ ಬಿಜೆಪಿ ಸರಕಾರ ಅವರಿಗೆ ಸುಳ್ಳು ಪ್ರಕರಣದಲ್ಲಿ ಇಡಿ ತನಿಖೆ ಹೆಸರಿನಲ್ಲಿ ನೋಟಿಸ್ ನೀಡಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಕ್ತ ಭಾತರ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ, ಅದು ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಅದನ್ನು ಬಿಜೆಪಿಯವರು ಒಪ್ಪಿಕೊಂಡಿದ್ದಾರೆ. ಅದಕ್ಕೆ ಕಾಂಗ್ರೆಸ್ ನಲ್ಲಿ ಸಿಎಂ ಯಾರ ಆಗತ್ತಾರೆ ಅಂತ ಅವರೇ ಚರ್ಚಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ಎಂ. ವೈ ಪಾಟೀಲ್, ಕನಿಜ ಫಾತಿಮಾ, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣಕುಮಾರ್ ಮೋದಿ, ಲಿಂಗರಾಜ್ ಕಣ್ಣಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here