ಸುರಪುರ:ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

1
13

ಸುರಪುರ: ಖತಿಜಾಬೇಗಂ ಎಮ್ ಜಮಾದಾರ ಹಾಗೂ ೧೯೯೪ರ ಗೆಳೆಯರ ಬಳಗದ ವತಿಯಿಂದ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುರಬರಗಲ್ಲಿ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಮಕ್ಕಳ ಬರವಣಿಗೆಗೆ ಬಳಸಲ್ಪಡುವ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಅನ್ವರ ಜಮಾದಾರ ಮಾತನಾಡಿ, ಸಮಾಜದಲ್ಲಿರುವ ಪ್ರತಿಯೊಬ್ಬರು ತಮಗೆ ಅನುಕೂಲವಾದಷ್ಟು ಸಮಾಜ ಸೇವೆ ಮಾಡುವುದು ತುಂಬಾ ಮುಖ್ಯವಾಗಿದೆ. ಅದರಲ್ಲೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಕಲಿಕೋಪಕರಣಗಳ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕಾರ್ಯಕ್ಕೆ ನಮ್ಮ ೧೯೯೪ರ ಗೆಳೆಯರ ಬಳಗವು ಕೂಡ ತುಂಬಾ ಸಹಾಯ ಮಾಡಿದೆ. ಕ್ರಮೇಣ ಈ ಕಾರ್ಯವು ಮುಂದಿನ ಇನ್ನುಳಿದ ಶಾಲೆಗಳಲ್ಲಿರುವ ಮಕ್ಕಳಿಗೂ ಸಹ ಹಂಚುತ್ತೇವೆ ಎಂದರು.

Contact Your\'s Advertisement; 9902492681

ಇದನ್ನೂ ಓದಿ: ನಾಳೆ ನಗರಕ್ಕೆ ಕೆಆರ್‌ಎಸ್ ಜನಚೈತನ್ಯ ಯಾತ್ರೆ: ಸೈಬಣ್ಣಾ ಜಮಾದಾರ

ಶಾಲೆಯ ಶಿಕ್ಷಕರಾದ ಬಸಯ್ಯ ಮಠಪತಿ ಮಾತನಾಡಿ, ಗೆಳೆಯರೆಲ್ಲರೂ ಸೇರಿ ಈ ಕಾರ್ಯ ಮಾಡಿರುವುದು ಅತ್ಯಂತ ಶ್ಲಾಘನೀಯವೆಂದು ಅಭಿಪ್ರಾಯಪಟ್ಟರು. ಮಕ್ಕಳಿಗೆ ಓದು ಬರೆಹಕ್ಕೆ ಮತ್ತಷ್ಟು ಪ್ರೋತ್ಸಾಹ ಕೊಟ್ಟಂತಾಯಿತು, ಖತಿಜಾಬೇಗಂ ಎಮ್ ಜಮಾದಾರ ಫೌಂಡೇಷನ ಹಾಗೂ ಗೆಳೆಯರ ಬಳಗ ಇನ್ನೂ ಹೆಚ್ಚಿನಮಟ್ಟದ ಸಮಾಜ ಸೇವೆ ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸೂಗುರೇಶ ಮಡ್ಡಿ, ಭಂಡಾರೆಪ್ಪ ನಾಟೇಕರ್, ಮೃತ್ಯುಂಜಯ ಹಿರೇಮಠ, ವೀರಯ್ಯಸ್ವಾಮಿ, ವಿನೋದಕುಮಾರ, ಎಸ್.ಡಿಎಮ್.ಸಿ ಅಧ್ಯಕ್ಷರಾದ ಮಲ್ಲಪ್ಪ ಪ್ರಧಾನಿ, ಚಂದಪ್ಪ ಪ್ರಧಾನಿ, ಮಲ್ಲಪ್ಪ ಸಂಗಟಿ, ದೇವಿಂದ್ರಪ್ಪ, ಮುಖ್ಯ ಗುರುಗಳಾದ ಮುಲ್ಕಚಾಂದ, ಶಿಕ್ಷಕರಾದ ಭೀಮಣ್ಣ ಸ್ವಾಗತಿಸಿದರು, ಅಮರಯ್ಯಸ್ವಾಮಿ ನಿರೂಪಿಸಿ ವಂದಿಸಿದರು.

ಇದನ್ನೂ ಓದಿ: ಬೀದರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 14 ಕೋಟಿ 65 ಲಕ್ಷ ಅನುದಾನ ಬಿಡುಗಡೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here