ರೌಡಿಶೀಟರ್ ಮಣಿಕಂಠರಾಠೋಡ್‍ಅವರನ್ನುಗಡಿಪಾರು ಮಾಡಿರುವ ಜಿಲ್ಲಾಡಳಿತದ ವಿರುದ್ಧ ಲೋಕಸಭಾ ಸದಸ್ಯಡಾ. ಉಮೇಶ ಜಾಧವ್, ಹಾಗೂ ಸಚಿವ ಪ್ರಭುಚವ್ಹಾಣ ನೇತೃತ್ವದಲ್ಲಿಗಡಿಪಾರುಆದೇಶ ವಾಪಸ್ ಪಡೆಯುವಂತೆ ಆಗ್ರಹಿಸಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ ನಡೆಖಂಡನೀಯ. -ಜಗದೇವಗುತ್ತೇದಾರ, ಅಧ್ಯಕ್ಷ, ಜಿಲ್ಲಾಕಾಂಗ್ರೆಸ್‍ಕಮೀಟಿ, ಕಲಬುರಗಿ.
ಕಲಬುರಗಿ: ದೇಶದಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ಸಾಧನೆ, ಬಿಜೆಪಿಯ ದುರಾಡಳಿತ ಹಾಗೂ ಭ್ರಷ್ಟಾಚಾರಕುರಿತು ಜನಜಾಗೃತಿ ಮೂಡಿಸಲು ಸೇಡಂ ಮತಕ್ಷೇತ್ರದಯಾನಾಗುಂದಿಯ ಮಾತಾಮಾಣಿಕೇಶ್ವರಿ ಸುಕ್ಷೇತ್ರದಿಂದ ಜು.29ರಿಂದ ಕಾಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.
ಯಾನಾಗುಂದಿಯಲ್ಲಿ ಬಹಿರಂಗ ಸಭೆ ನಡೆಸಿ ಅಲ್ಲಿಂದ ಬುರಗಪಲ್ಲಿ, ಇಟಕಾಲ್‍ನಲ್ಲಿ ವಾಸ್ತವ್ಯ ಹೂಡಲಾಗುವುದುಎಂದುಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊದಲ ಹಂತದ ಪಾದಯಾತ್ರೆಯಲ್ಲಿಜುಲೈ 29, 30,31, ಆಗಸ್ಟ್ 12 13, 17, 20, 21ರಂದು ಒಟ್ಟು 9 ದಿನಗಳ ಕಾಲ 37 ಹಳ್ಳಿಗಳನ್ನು ದಾಟಿ 108 ಕಿ.ಮೀ. ಪಾದಯಾತ್ರೆ ನಡೆಸಲಾಗುವುದುಎಂದುಅವರು ವಿವರಿಸಿದರು.
ಕಾಂಗ್ರೆಸ್ ಪಕ್ಷದರಾಜ್ಯಕಾರ್ಯಾಧ್ಯಕ್ಷಈಶ್ವರಖಂಡ್ರೆ, ಶಾಸಕರಾದ ಪ್ರಿಯಾಂಕ್‍ಖರ್ಗೆ, ಡಾ. ಅಜಯಸಿಂಗ್, ಎಂ.ವೈ. ಪಾಟೀಲ, ಖನೀಜ್ ಫಾತಿಮಾ, ಶರಣಬಸಪ್ಪಗೌಡದರ್ಶನಾಪುರ, ಮಾಜಿ ಶಾಸಕರು ಹಾಗೂ ಪಕ್ಷದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಮುಕಂಡರಾಜಗೋಪಾಲರೆಡ್ಡಿಇದ್ದರು.