ಶಹಾಬಾದ: ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಶಿಕ್ಷಕ ನಡೆಸಿದ ಹಲ್ಲೆಯನ್ನು ವಿವಿಧ ಸಂಘದವರು ತೀವ್ರವಾಗಿ ಖಂಡಿಸಿದ್ದಾರೆ.
ಚಿತ್ತಾಪುರ ತಾಲೂಕಿನ ದೇವಜಿ ನಾಯಕ್ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಲ್ಲಿನಾಥ ಅವರು ಕಲಬುರಗಿಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಸಿದ್ಧವೀರಯ್ಯ ರುದ್ನೂರ್ ಅವರ ಮನೆಗೆ ರಾತ್ರಿ ೮:೦೦ ಸುಮಾರಿಗೆ ಬಂದು ಬಕೆಟ್‌ನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ.
ಇದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಲೆಗೆ ಗಂಬೀರ ಗಾಯವಾಗಿ ರಕ್ತಸ್ರಾವವಾಗಿದೆ. ಅಲ್ಲದೇ ತಲೆಗೆ ಹೊಲಿಗೆ ಕೂಡ ಹಾಕಲಾಗಿದೆ. ಒಬ್ಬ ಶಿಕ್ಷಕನಾಗಿ ಇಂತಹ ಅನಾಗರಿಕ ವರ್ತನೆ ಮಾಡಿರುವುದು ಅತ್ಯಂತ ಖೇದಕರ ಸಂಗತಿ. ಈ ಹಲ್ಲೆಯಿಂದ ಶಿಕ್ಷಕರ ಘನತೆ ಗೌರವಗಳಿಗೆ ಧಕ್ಕೆ ತಂದಿದ್ದಲ್ಲದೆ,ಇಡೀ ಶಿಕ್ಷಕರ ಸಮುದಾಯ ತಲೆಸುವಂತಾಗಿದೆ.
ಶಿಕ್ಷಕ ವೃತ್ತಿಗೆ ಕಳಂಕ ತಂದಿದ್ದರಿಂದ ಇಂಥ ಘಟನೆಗಳು ಮರುಕಳಿಸದಂತೆ ತಪ್ಪಿತಸ್ಥ ಶಿಕ್ಷಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ಈರಣ್ಣ ಕೆಂಭಾವಿ,ಕಾರ್ಯದರ್ಶಿ ಸಂಜು ರಾಠೋಡ,ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದು ಬಾಳಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್,ಪ್ರಧಾನಕಾರ್ಯದರ್ಶಿ ಸಂತೋಷ ಸಲಗರ್, ದೈಹಿಕ್ ಶಿಕ್ಷಕರಾದ ಬನ್ನಪ್ಪ ಸೈದಾಪೂರ, ಚನ್ನಬಸಪ್ಪ ಕೊಲ್ಲೂರ್,ಪ್ರೌಢಶಾಲಾ ಶಿಕ್ಷರ ಸಂಘದ,ಬಡ್ತಿ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ಚಿನ್ನೂರ್, ಉಪಾಧ್ಯಯರ ಸಂಘ ಸೇರಿದಂತೆ ಅನುದಾನಿತ ಶಾಲಾ ಶಿಕ್ಷರ ಸಂಘದವರು ತೀವ್ರವಾಗಿ ಆಗ್ರಹಿಸಿದ್ದಾರೆ.