ಹರ್ ಘರ್ ತಿರಂಗ ಅಭಿಯಾನ ಯಶಸ್ವಿಗೊಳಿಸಲು ಸಿದ್ಧಲಿಂಗ ದೇವರು ಕರೆ.

0
76

ಕಲಬುರಗಿ: ದೇಶದ ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆಯನ್ನು ಪ್ರಚೋದಿಸಲು ಮತ್ತು ರಾಷ್ಟ್ರದ್ವಜದ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿಯೋಬ್ಬರೂ ಜಾತಿ ಮತ ಪಂಥದ ಬೇಧ ಮರೆತು ಹರ್ ಘರ್ ತಿರಂಗ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ರಾವೂರ ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಪೂಜ್ಯ ಸಿದ್ಧಲಿಂಗ ದೇವರು ಕರೆ ನೀಡಿದರು.

ರಾವೂರ ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು ಶಹಾಬಾದ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹರ್ ಘರ್ ತಿರಂಗಾ ಜಾಗೃತಿ ಅಭಿಯಾನವನ್ನು ಗ್ರಾಮಸ್ಥರಿಗೆ ರಾಷ್ಟ್ರದ್ವಜವನ್ನು ವಿತರಿಸುವ ಮೂಲಕ ಚಾಲನೆ ನೀಡಿದರು. ಭಾರತ ಸರ್ಕಾರವು ಈ ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಷ್ಟ ೧೩ ರಿಂದ ಅಗಷ್ಟ ೧೫ ರ ವರೆಗೆ ದೇಶದ ಪ್ರತಿ ಮನೆ ಮನೆಗಳ ಮೇಲೆ ದ್ವಜ ಹಾರಿಸುವ ಉಪಕ್ರಮ ಶ್ಲಾಘನೀಯವಾಗಿದೆ. ಪ್ರತಿಯೊಬ್ಬರಿಗೂ ರಾಷ್ಟ್ರದ ಬಗ್ಗೆ ಪ್ರೀತಿ, ದ್ವಜದ ಬಗ್ಗೆ ಗೌರವವಿರಬೇಕು. ಅದು ಇಲ್ಲದೆ ಇದ್ದರೆ ನಾವು ಹೇಗೆ ಭಾರತೀಯರಾಗುತ್ತೇವೆ ಎಂದು ಪ್ರಶ್ನಿಸಿದರು. ಜಾತಿ,ಮತ.ಪಂಥ, ಪಕ್ಷಗಳು ಏನೇ ಇರಲಿ. ಭಾರತೀಯತೆ ನಮ್ಮ ಉಸಿರಾಗಿರಲಿ ಎಂದು ಹೇಳಿದರು.

Contact Your\'s Advertisement; 9902492681

ಅಭಿಯಾನದ ಸಂಯೋಜಕ ಸಿದ್ಧಲಿಂಗ ಬಾಳಿ ಮಾತನಾಡಿ ಸರ್ಕಾರ ತುಂಬಾ ಅರ್ಥಪೂರ್ಣವಾಗಿ ಅಮೃತ ಮಹೋತ್ಸವವನ್ನು ಆಚರಿಸಲು ನಿಶ್ಚಯಿಸಿದ್ದು ಅರದ ಅಂಗವಾಗಿ ಅನೇಕ ಸ್ಪರ್ದೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗೃತಿ ಜಾಥಾಗಳು ನಡೆಯುತ್ತಿವೆ. ಪ್ರತಿಯೊಬ್ಬರೂ ಭಾಗಿಯಾಗುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಹೆಳಿದರು.

ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಿಂದ ಘೋಷದೊಂದಿಗೆ ಪ್ರಾರಂಭವಾದ ಅಭಿಯಾನ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ಮಾಡಿ ಘೋಷಣೆಗಳನ್ನು ಕೂಗಿ ಅಲ್ಲಿ ನೆರೆದ ಜನಸಮೂಹಕ್ಕೆ ಅಭಿಯಾನದ ಅರಿವು ಮೂಡಿಸಲಾಯಿತು.

ತಾಲೂಕ ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ,ಗೌರವ ಕಾರ್ಯದರ್ಶಿ ಶರಣು ವಸ್ತ್ರದ,ಮುಖಂಡರಾದ ಚನ್ನಣ್ಣ ಬಾಳಿ, ಅಣ್ಣಾರಾವ ಬಾಳಿ, ಶರಣು ಜ್ಯೋತಿ, ಮಹೇಶ ಬಾಳಿ, ಜಾಕೀರ ಹುಸೇನ, ಈಶ್ವರ ದೊಡ್ಡಮನಿ, ಭೀಮು ಜಡಿ, ಶಾಂತು ಬಾಳಿ, ನಾಗೇಶ ಸಜ್ಜನ, ಮಲ್ಲಿಕಾರ್ಜುನ ಇಟಗಿ, ಮಲ್ಲು ಮುತ್ತಗಿ, ಜಗದೀಶ ಪೂಜಾರಿ, ನಾಗೇಂದ್ರ ಜಡಿ, ವಿಶ್ವ ಬೈರಾಮಡಗಿ, ಮಹಾದೇವ ವಲಂಡಿ, ಅಶೋಕ ಗೋಳಾ, ಅಣವೀರಪ್ಪ ಬಾಳಿ ಸೇರಿದಂತೆ ಸಂಸ್ಥೆಯ ಸದಸ್ಯರು, ಶಿಕ್ಷಕರು, ಎನ್.ಸಿ.ಸಿ ಮಕ್ಕಳು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here