ಜಂತುಹುಳು ನಿವಾರಣೆ ಮಾಡಿದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಡಾ.ರಹೀಮ್

0
25

ಶಹಾಭಾದ:ಜಂತು ಹುಳು ಮಾತ್ರೆಗಳನ್ನು ಸರಿಯಾಗಿ ಸೇವಿಸಿ ಜಂತುಹುಳಗಳನ್ನು ನಿವಾರಣೆ ಮಾಡಿದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಹೇಳಿದರು.

ಅವರು ಬುಧವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರ್ಗಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ವತಿಯಿಂದ ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ರಕ್ತಹೀನತೆಯು ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಹೆಚ್ಚಾಗಿದ್ದು, ಸೂಕ್ತವಾಗಿ ಜಂತುಹುಳು ಮಾತ್ರೆ ಸೇವಿಸುವ ಮೂಲಕ ರಕ್ತಹೀನತೆಯನ್ನು ತಡೆಗಟ್ಟಬಹುದು.ಮಕ್ಕಳು ಶುಚಿತ್ವವನ್ನು ಕಾಯುದುಕೊಳ್ಳುವುದು ಅತಿ ಮುಖ್ಯ.ಉಗುರು ನಿಯಮಿತವಾಗಿ ಕತ್ತರಿಸಿ, ಆಹಾರ ಸೇವಿಸುವ ಸಂದರ್ಭದಲ್ಲಿ ಕೈಯನ್ನು ಸರಿಯಾಗಿ ತೊಳೆಯುವ ಮೂಲಕ ಸ್ವಚ್ಛತೆಯನ್ನು ಕಾಪಾಡಬೇಕೆಂದು ಹೇಳಿದರು.

ಡಾಕ್ಟರ್ ಶಂಕರ ರಾಠೋಡ ಮಾತನಾಡಿ,ಜಂತುಹುಳು ಮಾತ್ರೆಯನ್ನು ೬ತಿಂಗಳಿಗೊಮ್ಮೆ ಸೇವಿಸಿದರೆ ನಮ್ಮ ದೇಹದಲ್ಲಿರುವ ಜಂತುಹುಳುಗಳನ್ನು ಸಂಪೂರ್ಣ ನಿರ್ಮಲನೆ ಸಾಧ್ಯವಿದೆ.ಅಲ್ಲದೇ ಅಂಗನವಾಡಿ, ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲಾ ಮಕ್ಕಳಿಗೆ ಉಚಿತವಾಗಿ ಜಂತುಹುಳು ಮಾತ್ರೆಗಳನ್ನು ನೀಡಲಾಗುವುದು.ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.

ಆಪ್ತ ಸಮಾಲೋಚಕ ಅಮರೇಶ ಇಟಗಿಕರ ಮಾತನಾಡಿ, ಜಂತುಹುಳು ನಿವಾರಣೆ ಎಂಬುದು ಸಮುದಾಯ ಪಾಲಕರು ಮತ್ತು ಮಕ್ಕಳಿಗೆ ಈ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಒಂದು ವ?ದಿಂದ ಎರಡು ವ?ದ ಮಕ್ಕಳಿಗೆ ಅರ್ಧ ಮಾತ್ರೆಯನ್ನು ಹಾಗೂ ಎರಡು ವ? ಮೇಲ್ಪಟ್ಟವರಿಗೆ ಒಂದು ಮಾತ್ರೆಯನ್ನು ಹಾಕಬೇಕು. ನಗರದಲ್ಲಿ ೧೭೩೦೦ ಮಕ್ಕಳು ಗುರಿಯನ್ನು ಹೊಂದಿದೆ.ಈ ಮಾತ್ರೆಯನ್ನು ಪ್ರಯೋಜನ ಪಡೆದ ಮಕ್ಕಳಲ್ಲಿ ರಕ್ತಹೀನತೆ ನಿಯಂತ್ರಿಸಬಹುದು. ಪೌಷ್ಟಿಕಾಂಶ ಏರಿಕೆಯನ್ನು ಸುಧಾರಿಸುತ್ತದೆ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಪರಿಸರದಲ್ಲಿ ಜಂತು ಹುಳುಗಳನ್ನು ಕಡಿಮೆ ಮಾಡುವುದರ ಮೂಲಕ ಸಮುದಾಯಕ್ಕೆ ಪ್ರಯೋಜನಕಾರಿಯಾಗುತ್ತದೆ ಎಂದರು.

ಫಾದರ್ ಸ್ಟಾನಿ ಗೋವಿಯಸ್, ಕಿರಿಯ ಆರೋಗ್ಯ ಸಹಾಯಕ ಯೂಸುಫ್ ನಾಕೇದಾರ, ವಾಣಿಶ್ರೀ,ಶಂಕರ ವಾಲೀಕಾರ, ಇಮಾನ್ ವೆಲ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here