ವಿದ್ಯಾರ್ಥಿಗಳು ಸತತ ಅಧ್ಯಾಯನಶೀಲರಾಗಿ: ನಂದಿನಿ

0
7

ಸುರಪುರ: ಸತತ ಅಧ್ಯಾಯನ ನಿರಂತರ ಪರಿಶ್ರಮದ ಮೂಲಕ ಯಶಸ್ಸುಕಾಣಲು ಸಾಧ್ಯವಾಗುತ್ತದೆ, ಆ ದಿಶೇಯಲ್ಲಿ ವಿದ್ಯಾರ್ಥಿಗಳು ಸತತ ಅಧ್ಯಾಯನಶೀಲರಾಗಬೇಕು ಎಂದು ರಾಯಚೂರು ವಿಶ್ವವಿದ್ಯಾಲಯದ ವಿದ್ಯಾ ವಿಷಯಕ ಸಮಿತಿ ಸದಸ್ಯರಾದ ನಂದಿನಿ ಅಂಗಡಿ ಹುಣಸಗಿ ಹೇಳಿದರು.

ರಂಗಂಪೇಟೆಯ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ.ಎ ಪ್ರಥಮ ವರ್ಷ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಭಾಗದ ಶೈಕ್ಷಣಿಕ ಪ್ರಗತಿ ಮತ್ತು ಅಭಿವೃದ್ಧಿ ನಿಮ್ಮ ಕೈಯಲ್ಲಿದ್ದು, ನಿವು ನಿರಂತರವಾಗಿ ಅಭ್ಯಾಸ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಹಾಗೂ ಫಲಿತಾಂಶದ ಪ್ರಗತಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

Contact Your\'s Advertisement; 9902492681

ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಗಂಗಾಧರ ನಾಯಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಗುರಿ, ಶ್ರದ್ದೆ, ಸತತ ಅಧ್ಯಾಯನ ಅತ್ಯಂತ ಅವಶ್ಯವಾಗಿದೆ ಎಂದು ಹೇಳಿದರು. ಅತಿಥಿಗಳಾಗಿ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟ ಮಾತನಾಡಿದರು, ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ ಕಾಲೇಜಿನ ಪ್ರಗತಿ ಕುರಿತು ವರದಿ ವಾಚಿಸಿದರು, ಇದೇ ಸಂದರ್ಭದಲ್ಲಿ ಭಾರತ ಸ್ವಾತಂತ್ಯ್ರದ ಅಮೃತಮಹೋತ್ಸವದ ನಿಮಿತ್ಯ ರಾಯಚೂರು ವಿಶ್ವ ವಿದ್ಯಾಲಯದ ನಿಯಮದಂತೆ ಕ್ರೀಡಾಕೂಟ ಹಾಗೂ ವಿವಿಧ ಸ್ಪರ್ದೆಗಳಿಗೆ ಅತಿಥಿಗಳು ಚಾಲನೆ ನೀಡಿದರು ಹಾಗೂ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಕೂಡ ನಡೆಯಿತು, ಕಾರ್ಯಕ್ರಮವನ್ನು ಸಲಿಂಪಾಶಾ ನಿರೂಪಿಸಿದರು, ಶ್ರೀಕಾಂತ ರತ್ತಾಳ ಪ್ರಾರ್ಥಿಸಿದರು, ಬಲಭೀಮ ಪಾಟೀಲ್ ಸ್ವಾಗತಿಸಿದರು, ರುದ್ರಪ್ಪ ಕೆಂಭಾವಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here