ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ ಲೋಕಾರ್ಪಣೆಗೊಳಿಸಿದ ಪ್ರೊ. ಕೆ.ಇ. ರಾಧಾಕೃಷ್ಣ

0
38

೯೪ ಪುಟಗಳ ಈ ಪುಟ್ಟ ಪುಸ್ತಿಕೆ ಬಿಂದುವಿನಲ್ಲಿ ಸಿಂಧುವನ್ನು ಹಿಡಿದಿಟ್ಟಂತಿದೆ. ೬೫ ಪುಟ ಖರ್ಗೆ ಜೀವನ ಕಥನ ಹೇಳಿದರೆ ಇನ್ನುಳಿದ ಪುಟಗಳು ಇತರರು ಕಂಡಂತೆ ಖರ್ಗೆ ಎಂಬ ಹಲವು ಪ್ರಮುಖರ ಲೇಖನಗಳಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ೮೦ನೇ ಸಂವತ್ಸರ ಕಂಡ ಖರ್ಗೆಯವರಿಗೆ ಇದೊಂದು ವಿನೂತನ ಪುಸ್ತಕದ ಗೀಫ್ಟ್. -ಕೆ.ಇ. ರಾಧಾಕೃಷ್ಣ, ಬೆಂಗಳೂರು.

ಕಲಬುರಗಿ: ರಾಜ್ಯದ ಗೃಹ, ಶಿಕ್ಷಣ, ಕಾರ್ಮಿಕ, ಲೋಕೋಪಯೋಗಿ ಹೀಗೆ ಎಲ್ಲ ಇಲಾಖೆಯ ಸಚಿವರಾಗಿ ಕಾರ್ಯನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆಯವರು ಈ ರಾಷ್ಟ್ರ ಕಂಡ ಧೀಮಂತ ನಾಯಕ. ನೇರ ನಡೆ-ನುಡಿಯ ಖರ್ಗೆಯವರು ಇಂದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಮುಖವಾಣಿಯಾಗಿ, ಧ್ವನಿಯಾಗಿ ಹೊರ ಹೊಮ್ಮಿದ್ದಾರೆ ಎಂದು ಶಿಖ್ಷಣ ತಜ್ಞ ಪ್ರೊ. ಕೆ.ಇ. ರಾಧಾಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಗರದ ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿಯ ಇಂಜಿನಿಯರ್ಸ್ ಸಂಘದ ಸಭಾಂಗಣದಲ್ಲಿ ಪ್ರೊ. ಮಲ್ಲೇಪುರಂ ಪ್ರತಿಷ್ಠಾನ, ಕುಟುಂಬ ಪ್ರಕಾಶನ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ. ಎಚ್.ಟಿ. ಪೋತೆ ವಿರಚಿತ ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಯಾವುದೇ ಗಾಡ್ ಫಾದರ್‌ಗಳಿಲ್ಲದೆ ತಮ್ಮ ಸ್ವಂತ ಬಲದಿಂದಲೇ ರಾಜಕೀಯದಲ್ಲಿ ಉನ್ನತ ಸ್ಥಾನ ಪಡೆದಿರುವ ಖರ್ಗೆಯವರಿಗೆ ಸಿಎಂ ಆಗುವ ಆಸೆ ಇದೆ. ಆಗಲಿಲ್ಲ ಎಂಬ ನೋವು ಕೂಡ ಇದೆ. ಅಸೂಹೆ ಮತ್ತು ಜಾತಿ ರಾಜಕಾರಣದಿಂದಾಗಿ ಅವರು ಮುಖ್ಯಮಂತ್ರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ವೆಂಕಟೇಶ ಮಾತನಾಡಿ, ಖರ್ಗೆಯವರ ರಾಜಿಕೀಯ ಜೀವನದ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ರಾಷ್ಟ್ರಿಕ ಹಾಗೂ ಧರ್ಮದ ಮುಖಗಳನ್ನು ಅನಾವರಣಗೊಳಿಸುವ ಈ ಕೃತಿಯು ಸಾಮಾನ್ಯ. ಸರಳ ಜೀವನ ಕಥನವಾಗಿದೆ. ಅಂಬೇಡ್ಕರೋತ್ತರ ನಾಯಕರಾಗಿ ಬೆಳೆದಿರುವ ಖರ್ಗೆಯವರು, ವ್ಯಕ್ತಿತ್ವ ನಿರ್ಮಾಣದ ಪ್ರತಿಮಾ ರೂಪರಾಗಿದ್ದಾರೆ ಎಂದು ಬಣ್ಣಿಸಿದರು.

ಖರ್ಗೆ ಮತ್ತು ೩೭೧ ಕುರಿತು ಡಾ. ರಝಾಕ್ ಉಸ್ತಾದ, ರಾಜಕೀಯ ಸಂಕತನ ಮತ್ತು ಖರ್ಗೆ ಕುರಿತು ಎಸ್.ಆರ್. ಮನೂರ, ಸಾಮಾಜಿಕ, ಧಾರ್ಮಿಕ ನೆಲೆಗಳು ಮತ್ತು ಖರ್ಗೆ ಕುರಿತು ಡಾ. ಶ್ರೀಶೈಲ ನಾಗರಾಳ, ಖರ್ಗೆ ಮತ್ತು ಶೈಕ್ಷಣಿಕ ನೆಲೆಗಳು ವಿಷಯ ಕುರಿತು ಪ್ರೊ. ಎಸ್.ಎಲ್. ಪಾಟೀಲ ವಿಚಾರ ಮಂಡಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ನಿರೂಪಿಸಿದರು. ಪ್ರೊ. ಮಲ್ಲೇಪುರಂ ಪ್ರತಿಷ್ಠಾನ,ದ ಕಾರ್ಯದರ್ಶಿ ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು. ಡಾ. ಹನುಮಂತ ಮೇಲ್ಕೇರಿ ವಂದಿಸಿದರು. ಸಿದ್ಧಾರ್ತ ಚಿಮ್ಮಾ ಇದ್ಲಾಯಿ ಸಂಗಡಿಗರು ಖರ್ಗೆ ಕುರಿತಾದ ಗೀತೆಗಳನ್ನು ಪ್ರಸ್ತುತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here