ರಕ್ಷಣಾ ಸೇವೆಯಲ್ಲಿ ಹುತಾತ್ಮರಾದವರ ಕುಟುಂಬಗಳಿಗೆ ಗೌರವ ಮತ್ತು ಸನ್ಮಾನ

0
42

ಕಲಬುರಗಿ: ಪೂಜ್ಯಡಾ.ಶರಣಬಸವಪ್ಪಅಪ್ಪಾಜಿ ಫ್ಯಾಮಿಲಿ ಟ್ರಸ್ಟ್, ಶರಣಬಸವ ವಿಶ್ವವಿದ್ಯಾಲಯ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿಆಗಸ್ಟ್ ೧೭ ರಂದು, ದೇಶದಗಡಿರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದರಕ್ಷಣಾ ಸಿಬ್ಬಂದಿಯ ಕುಟುಂಬ ಸದಸ್ಯರನ್ನು ಹಾಗೂ ಕೋವಿಡ್-೧೯ ವೈರಸ್ ಸಂತ್ರಸ್ತರಕುಟುಂಬ ಸದಸ್ಯರನ್ನು ಮತ್ತು ಪ್ರಕೃತಿ ವಿಕೋಪದಲ್ಲಿ ಬೆಳೆ ಕಳೆದುಕೊಂಡ ರೈತರನ್ನುಗೌರವಿಸಲಾಗುವುದುಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವಡಾ. ಅನಿಲಕುಮಾರ ಬಿಡವೆ ತಿಳಿಸಿದ್ದಾರೆ.

ಹುತಾತ್ಮರಾದರಕ್ಷಣಾ ಸಿಬ್ಬಂದಿಯ ತಲಾಐದು ಕುಟುಂಬಗಳು, ಕೋವಿಡ್-೧೯ ಸೋಂಕಿಗೆ ಬಲಿಯಾದವರಐದು ಕುಟುಂಬಗಳು ಮತ್ತು ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಂಡ ಹಾಗೂ ತೀವ್ರಆರ್ಥಿಕ ಸಂಕಷ್ಟ ಅನುಭವಿಸುತ್ತಿರುವಐವರುರೈತರಿಗೆಆಗಸ್ಟ್ ೧೭ ರಂದು ಶರಣಬಸವ ವಿಶ್ವವಿದ್ಯಾಲಯದದೊಡ್ಡಪ್ಪಅಪ್ಪ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿತಲಾ ೨೫ ಸಾವಿರರೂ. ನೀಡಿ ಸನ್ಮಾನಿಸಲಾಗುವುದು.

Contact Your\'s Advertisement; 9902492681

ಮಾಜಿ ಸಂಸದ ಹಾಗೂ ಕಲ್ಯಾಣಕರ್ನಾಟಕ ಮಾನವ ಸಂಪನ್ಮೂಲ, ಕೃಷಿ, ಸಾಂಸ್ಕೃತಿಕ ಸಂಘದಅಧ್ಯಕ್ಷಡಾ.ಬಸವರಾಜ ಪಾಟೀಲ ಸೇಡಂ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಚೇರಪರ್ಸನ್ ಮಾತೋಶ್ರೀ ಡಾ. ದಾಕ್ಷಾಯಿಣಿಅವ್ವಾಜಿಅವರುಎಲ್ಲಾ ಮೂರು ವಿಭಾಗಗಳಲ್ಲಿ ಆಯ್ಕೆಯಾದಐದು ಕುಟುಂಬಗಳಿಗೆ ತಲಾ ೨೫ ಸಾವಿರರೂ. ನೀಡಿಅವರನ್ನುಗೌರವಿಸುವರು.

ಸಮಾರಂಭದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಪೂಜ್ಯಡಾ.ಶರಣಬಸವಪ್ಪಅಪ್ಪಾಜಿ, ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯಚಿರಂಜೀವಿ ದೊಡ್ಡಪ್ಪಅಪ್ಪಾಜಿ, ಬೆಳಗುಂಪಿ ಬ್ರಹನ್ಮಠದ?ಟಸ್ಥಲ ಬ್ರಹ್ಮಅಭಿನವ ಪರ್ವತೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿಡಾ.ನಿರಂಜನ್ ವಿ. ನಿಷ್ಠಿ ಉಪಸ್ಥಿತರಿರುವರು ಎಂದುಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here