ಶ್ರೀ ವೇಣುಗೋಪಾಲಸ್ವಾಮಿ ಹಾಲೋಕಳಿ ಜಾತ್ರೆ ೨೦ ರಿಂದ-ರಾಜಾ ಕೃಷ್ಣಪ್ಪ ನಾಯಕ

0
15

ಸುರಪುರ:ನಗರದ ಆರಾಧ್ಯ ದೈವರಾಗಿರುವ ಶ್ರೀ ವೇಣುಗೋಪಾಲಸ್ವಾಮಿ ದೇವರ ಹಾಲೋಕಳಿ ಜಾತ್ರೆ ಇದೇ ಅಗಸ್ಟ್ ೨೦ ರಿಂದ ಆರಂಭಗೊಳ್ಳಲಿದೆ ಎಂದು ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ತಿಳಿಸಿದರು.

ನಗರದ ದರಬಾರ ಆವರಣದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ವತನದಾರರ ಸಭೆಯಲ್ಲಿ ಮಾತನಾಡಿದ ಅವರು,ಕಳೆದ ಎರಡು ವರ್ಷಗಳು ಕೋವಿಡ್ ನಿಂಗ ಜಾತ್ರೆ ಸರಳವಾಗಿ ಆಚರಿಸಲಾಗಿತ್ತು,ಈ ವರ್ಷ ವಿಜೃಂಭಣೆಯಿಂದ ಜಾತ್ರೆಯನ್ನು ಆಚರಿಸಲಾಗುವುದು ಎಂದರು.ಇದೇ ೨೦ ರಂದು ಸಂಜೆ ಸುಪ್ರಭಾತ ಪಂಚಾಮೃತಾಭಿಷೇಕ ಹಾಗೂ ವಿಶೇಷ ಅಲಂಕಾರ ಮಹಾಮಂಗಳಾರತಿ ಸಂಜೆ ಉಯ್ಯಾಲೆ ತೀರ್ಥ ವಿನಿಯೋಗ ಹಾಗೂ ೨೧ ರಂದು ಬೆಳಿಗ್ಗೆ ಸುಪ್ರಭಾತ ಅಭಿಷೇಕ,ಮಹಾಮಂಗಳಾರತಿ ನಂತರ ಸಾಯಂಕಾಲ ದೇವರದರ್ಶನ ನಂತರ ದೇವರ ಸ್ಥಂಭಾರೋಹಣ ನಂತರ ಗರುಡವಾಹನದ ಮೇಲೆ ಶ್ರೀ ವೇಣುಗೋಪಾಲಸ್ವಾಮಿಯವರ ಪಲ್ಲಕ್ಕಿ ಉತ್ಸವ ನಡೆಯಲಿದೆ.೨೨ ರಂದು ಮುಂಜಾನೆ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದೆ ಹಾಗೂ ಸಂಜೆ ರಣಸ್ಥಂಭಾರೋಹಣ ನಡೆಯಲಿದೆ ಎಂದು ತಿಳಿಸಿದರು.

Contact Your\'s Advertisement; 9902492681

೨೧ ರಂದು ಸಂಜೆ ಮೊದಲಬಾರಿಗೆ ರಾಜಾ ಕೃಷ್ಣಪ್ಪ ನಾಯಕ ಅವರು ಹಿಂದಿನ ಅರಸರಂತೆ ರಾಜಾ ಪೋಷಾಕು ಧರಿಸಿ ರತ್ನ ಖಚಿತ ಕಿರಿಟ ಧರಿಸಿ ದರಬಾರದಿಂದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ವರೆಗೆ ರಾಜ ಮೆರವಣಿಗೆಯ ಬರಿಗಾಲಲ್ಲಿ ಸವಾರಿ ನಡೆಸಲಿದ್ದಾರೆ.

ಸಭೆಯಲ್ಲಿ ವತನದಾರರಾದ ಗಣೇಜ ಜಾಗೀರದಾರ್,ಸುನೀಲ್ ಸರ್ ಪಟ್ಟಣಶೆಟ್ಟಿ,ಶ್ರೀನಿವಾಸ ನಾಯಕ ಹವಲ್ದಾರ್,ತಿಮ್ಮಪ್ಪ ನಾಯಕ ಸರ್ ನೌಬತ್ ಸರ್ ಹವಲ್ದಾರ್,ಉಸ್ತಾದ ವಜಾಹತ್ ಹುಸೇನ್,ವೆಂಕಟೇಶ ನಾಯಕ ಹವಲ್ದಾರ್,ದಿನೇಶ ಜೋಷಿ,ವಿರೇಶ ನಿಷ್ಠಿ ದೇಶಮುಖ,ಆನಂದ ಜಮದ್ರಖಾನಿ,ರಂಗಪ್ಪ ನಾಯಕ ಹವಲ್ಧಾರ್ ಹಾಗೂ ಅಹ್ಮದ್ ಪಠಾಣ್ ಸೇರಿದಂತೆ ೧೪ ಕೇರಿಗಳ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here