ವಿವಿಧ ಯೋಜನೆಗಳಡಿ ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನ

0
63

ಕಲಬುರಗಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ೨೦೧೯-೨೦ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಉದ್ಯೋಗಿನಿ ಯೋಜನೆಯಡಿ ವಿವಿಧ ಆದಾಯೋತ್ಪನ್ನ ಸೇವಾ ಹಾಗೂ ವ್ಯಾಪಾರ ಚಟುವಟಿಕೆಗಳನ್ನು ನಡೆಸಲು ಎಲ್ಲ ವರ್ಗದ ಮಹಿಳೆಯರಿಗೆ ಬ್ಯಾಂಕಿನಿಂದ ಕನಿಷ್ಠ ೧ ಲಕ್ಷ ರೂ. ದಿಂದ ಗರಿಷ್ಠ ೩ ಲಕ್ಷ ರೂ. ವರೆಗೆ ಸಾಲ ಸೌಲಭ್ಯವಿರುತ್ತದೆ. ಅರ್ಜಿದಾರರ ವಯೋಮಿತಿ ೧೮ ರಿಂದ ೫೫ ವರ್ಷದೊಳಗಿರಬೇಕು. ಸಮೃದ್ಧಿ ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಲು ೧೦,೦೦೦ ರೂ. ಗಳ ಪ್ರೋತ್ಸಾಹಧನ ನೀಡಲಾಗುವುದು. ವಯೋಮಿತಿ ೧೮ ರಿಂದ ೬೦ ವರ್ಷದೊಳಗಿನ ಪೌರಾಡಳಿತ ಇಲಾಖೆ, ಪುರಸಭೆ, ಗ್ರಾಮ ಪಂಚಾಯತಿಯಿಂದ ಬೀದಿ ವ್ಯಾಪಾರಿ ಎಂದು ಗುರುತಿನ ಚೀಟಿ ಹೊಂದಿದವರು ಮಹಿಳೆಯರು ಮಾತ್ರ ಸೌಲಭ್ಯ ಪಡೆಯಲು ಅರ್ಹರು.

Contact Your\'s Advertisement; 9902492681

ಕಿರುಸಾಲ ಯೋಜನೆಯಡಿ ಇಲಾಖೆಯ ಸ್ತ್ರೀಶಕ್ತಿ ಯೋಜನೆಯಡಿ ರಚನೆಯಾದ ಗುಂಪುಗಳು ಮಾತ್ರ ೨ ಲಕ್ಷ ರೂ. ಗಳ ಬಡ್ಡಿ ರಹಿತ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿದ್ದು. ಸಂಘದ ಉಳಿತಾಯವು ೨ ಲಕ್ಷ ರೂ. ಮೇಲ್ಪಟ್ಟಿದ್ದು. ’ಎ’ ಶ್ರೇಣಿಕರಣವಾದ ಗುಂಪು ಉತ್ಪಾದನಾ ಚಟುವಟಿಕೆಯನ್ನು ನಡೆಸಲು ಆಸಕ್ತ ಗುಂಪುಗಳಾಗಿರಬೇಕು. ಪ್ರಸ್ತುತ ಯಾವುದೇ ಬ್ಯಾಂಕಿನಿಂದ ಸಾಲ ಪಡೆದಿರಬಾರದು. ಆಸಕ್ತ ಮಹಿಳೆಯರು ಅಗತ್ಯ ದಾಖಲಾತಿಗೊಂದಿಗೆ ೨೦೧೯ರ ಆಗಸ್ಟ್ ೧೫ರೊಳಗಾಗಿ ಸಂಬಂಧಪಟ್ಟ ಆಯಾ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕು.

ಅದೇ ರೀತಿ ಧನಶ್ರೀ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಹಾಗೂ ದಮನಿತ ಮಹಿಳೆಯರ (ಚೇತನಾ) ಪುನರ್ವಸತಿ ಯೋಜನೆಗಳಡಿ ಈ ವಿಶೇಷ ವರ್ಗದವರಿಗೆ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಲು ಸಮಾನವಾಗಿ ೨೫,೦೦೦ ರೂ. ಗಳ ಸಾಲ ಹಾಗೂ ೨೫,೦೦೦ ರೂ.ಗಳ ಸಹಾಯಧನ ಸೇರಿದಂತೆ ಒಟ್ಟು ೫೦,೦೦೦ ರೂ. ಗಳ ಬಡ್ಡಿ ರಹಿತ ನೇರಸಾಲ ಹಾಗೂ ಸಹಾಯಧನವನ್ನು ನೀಡಲಾಗುವುದು. ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ಕಚೇರಿಯಿಂದ ಅಥವಾ ಸಮುದಾಯಪರ ಸಂಸ್ಥೆಗಳ ಮೂಲಕ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದೃಢೀಕರಣದೊಂದಿಗೆ ೨೦೧೯ರ ಆಗಸ್ಟ್ ೯ ರೊಳಗಾಗಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಮುದಾಯಪರ ಸಂಸ್ಥೆಗಳು ಹಾಗೂ ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಅಂಧ ಮಕ್ಕಳ ಪಾಠ ಶಾಲೆ, ಸ್ಟೇಡಿಯಂ ಎದುರುಗಡೆ, ಕಲಬುರಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-228659 ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here