ತ್ಯಾಗ ಬಲಿದಾನದ ಸ್ಮರಣೆಗೆ ನ್ಯಾಯವಾದಿ ತಿಳಗೋಳ ಕರೆ

0
10

ಕಲಬುರಗಿ: ರಾಷ್ಟ್ರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಆಚರಿಸುವ ಈ ಸಂದರ್ಭದಲ್ಲಿ ನಮ್ಮ ಪೂರ್ವಿಕರು ಇದಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಗುರುರಾಜ ತಿಳಗೋಳ ಅವರು ಹೇಳಿದರು.

ನಗರದ ಸುಪರ ಮಾರುಕಟ್ಟೆ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಆಯೋಜಿದಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ರಾಷ್ಟ್ರಧ್ವಜರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ರಾಷ್ಟ್ರಪ್ರೇಮ ರಾಷ್ಟ್ರಾಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

Contact Your\'s Advertisement; 9902492681

ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಮಾತನಾಡಿ, ಸಂಘದಿಂದ ವಿತರಿಸಲಾದ ತಿರಂಗವನ್ನು ತಮ್ಮ ಮನೆಗಳಲ್ಲಿ ಹಾರಿಸುವ ಮೂಲಕಲ ರಾಷ್ಟ್ರಾಭಿಮಾನದ ಈ ಅಭಿಮಾನದಲ್ಲಿ ಪಾಲ್ಗೊಂಡ ಎಲ್ಲ ಬೀದಿಬದಿ ವ್ಯಾಪಾರಿಗಳಿಗೆ ಅವರು ಅಭಿನಂದಿಸಿದರು.

ಧ್ವಜರೋಹಣ ಕಾರ್ಯಕ್ರಮದಲ್ಲಿ ಡಾ.ವೇದಮೂರ್ತಿ, ಹೋರಾಟಗಾರ ಮಂಜುನಾಥ ನಾಲವಾರಕರ್, ಜೈ ಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಭಾಸಗಿ, ಬಾಬು ಪರಿಟ, ರಾಘವೇಂದ್ರ ರಾಮದಾಸಿ, ಮನಿಷ ವ್ಹಿ, ವೆಂಕಟೇಶ ಎಸ್,ಬಿ, ರಾಜು ಎಂ, ಗಣತೆ ಎನ್, ಲಕ್ಷ್ಮೀ ಬಾಬಾಜಿ, ಸೂಮಲಿಂಗ ಬಾಬಜೀ, ಧರ್ಮರಾಜ ಎಸ್, ಸಂತೋಷಮ್ಮ ಸೇರಿದಂತೆ ಸಂಘದ ಪದಾಧಿಕಾರಿಗಳು, ಮತ್ತು ಹಲವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here