ಸುರಪುರ: ಭಾರತೀಯ ಸಮಾಜದ ಎಲ್ಲಾ ವರ್ಗಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿ ಅದರಲ್ಲಿ ಒಂದು ಒಳ ಎಚ್ಚರವನ್ನು ಮೂಡಿಸಿದ ಮೊತ್ತಮೊದಲ ನಿಜವಾದ ಅರ್ಥದ ಸಾಮಾಜಿಕ ಚಳುವಳಿಯು ಬಸವಾದಿ ಪ್ರಮಥರ ಮೂಲಕ ನಡೆದಿರುವುದು ಗಮನಾರ್ಹವಾಗಿದೆ ಎಂದು ಉಪನ್ಯಾಸಕ ಶ್ರೀ ದೇವು ಎಸ್.ಹೆಬ್ಬಾಳ ಮಾತನಾಡಿದರು.
ನಗರದ ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಶ್ರಾವಣ ಶ್ರವಣ ಶಿವಾನುಭ ಚಿಂತನದಲ್ಲಿ ಭಾಗವಹಿಸಿ ಮಾತನಾಡಿ,ಮತದ ಉದಾತ್ತ ಚಿಂತನೆ, ಸಮಾಜದ ತೀರ ಕೆಳಗಿನ ಪದರಗಳನ್ನು ಮುಟ್ಟಿದ್ದು ಇಲ್ಲಿಯೇ ಎಂಬಲ್ಲಿ ಉತ್ಪ್ರೇಕ್ಷೆ ಇಲ್ಲ. ಬಹಳಷ್ಟು ವಚನಕಾರರ ವಚನಗಳು ಇಂದು ಸಾಹಿತ್ಯಕ ಮಾನದಂಡದಿಂದ ಅಳೆದರೆ ತೀರ ಸಾಮಾನ್ಯ ಎನಿಸಬಹುದಾದರೂ ಸಮಾಜಶಾಸ್ತ್ರದ ದೃಷ್ಟಿಯಿಂದ ಪ್ರಮುಖ ಎನಿಸುತ್ತವೆ ಎಂದು,ಸಮಾಜೋಧಾರ್ಮಿಕ ಆಂದೋಲನದ ಫಲ ಸಾಮಾನ್ಯರೂ ಮಾತನಾಡುವ ಮನಸ್ಸು ಮಾಡಿದ್ದು. ಸಾಮಾಜಿಕ ಪ್ರಜ್ಞೆಯು ಸಮಾಜದ ವಸ್ತು ಸ್ಥಿತಿಯನ್ನು ತಿಳಿಸಿ ಕುಂದು ಕೊರತೆಗಳನ್ನು ಟೀಕಿಸುವುದಷ್ಟೇ ಅಲ್ಲ ಅದನ್ನು ಸುಧಾರಿಸುವ, ಬದಲಿಸುವ ಮಾರ್ಗದರ್ಶಕ ಕಾರ್ಯವನ್ನು ನಿರ್ವಹಿಸುವಂತೆಯೂ ಮಾಡುತ್ತದೆ. ಶಿವಾನುಭವಿಗಳು, ಲೋಕಾನುಭವಿಗಳು ಆಗಿದ್ದ ವಚನಕಾರರ ಸಾಮಾಜಿಕ ಪ್ರಜ್ಞೆ ಅತ್ಯುನ್ನತ ಮಟ್ಟದ್ದಾಗಿತ್ತು ಎಂದರು.
ಆಶಿರ್ವಚನ ನೀಡಿದ ಶ್ರೀ ಮಠದ ಪೂಜ್ಯರಾದ ಪ್ರಭುಲಿಂಗ ಮಹಾಸ್ವಾಮಿಗಳವರು ಮಾತನಾಡಿ, ಅವರು ಕನ್ನಡನಾಡಿನ ವಚನ ಚಳುವಳಿಯು ಸಮಾಜೋಧಾರ್ಮಿಕ ಚಳುವಳಿಯು ಹೌದು. ಈ ಚಳುವಳಿಯು ತನಗೆ ತಾನೇ ಸ್ವಯಂಸ್ಫೂರ್ತವಾಗಿ ಕೂಡಲೇ ಕಾಣಿಸಿಕೊಂಡಿದ್ದಲ್ಲ. ಮಧ್ಯಕಾಲೀನ ರಾಜಕೀಯ ಹಿನ್ನೆಲೆಯಲ್ಲಿ ಕನ್ನಡ ನಾಡಿನಾದ್ಯಂತ ವ್ಯಾಪಿಸಿತು ಎಂದರು.
ಶಿವಾನುಭವ ಚಿಂತನದಲ್ಲಿ ಉಪಸ್ಥಿತರಿದ್ದ ವೀರಪ್ಪ ನಿಷ್ಟಿ ಇಂಜನಿಯರಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ.ಶರಣಬಸಪ್ಪ ಸಾಲಿಯವರು ಹನ್ನೆರಡನೇ ಶತಮಾನದಲ್ಲಿ ನಡೆದ ಸಮಾಜೋ ಧಾರ್ಮಿಕ ಚಳುವಳಿಯ ಸಂದರ್ಭದಲ್ಲಿ ವಚನ ರೂಪ ಕನ್ನಡ ಸಾಹಿತ್ಯದಲ್ಲಿ ಆವಿರ್ಭವಿಸಿತು. ಪ್ರ
ಥಮ ಬಾರಿಗೆ ಸಮಾಜದ ವಿವಿಧ ಸ್ತರಗಳಿಂದ ಬಂದ ಸಾಮಾನ್ಯ ಜನತೆಗೆ ಲಿಂಗಭೇದವಿಲ್ಲದೆ ಸಾಹಿತ್ಯಾಭಿವ್ಯಕ್ತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಚನ ಚಳುವಳಿಯ ಪ್ರಮುಖ ಸಾಧನೆ ಎಂದು ಪ್ರಮುಖರಾದ ಅರವಿಂದ ಬಿದರಿ ಸುರೇಶ ಎಮ್ ಪಾಟೀಲ್ ತಾಲೂಕು ಕ.ಸಾ.ಪ. ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ. ರಾಜಶೇಖರ ದೇಸಾಯಿ. ಡಾ.ಮಾಹಾಂತೇಶ ಸುಬೇದಾರ. ಸುಭಾಸ್ ಹೂಗಾರ. ಮಹೇಶ ಅಂಗಡಿ. ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪಮಠ ಮುಂತಾದವರು ಉಪಸ್ಥಿತರಿದ್ದರು.
ಸಂಗೀತ ಕಲಾವಿದರಾದ ಶಿವಶರಣಯ್ಯಸ್ವಾಮಿ ಭಳುಂಡಗಿಮಠ. ಪ್ರಾಣೇಶರಾವ್ ಕುಲಕರ್ಣಿ. ದಾಸವಾಣಿ ಕಲಾವಿದ ಶರಣಪ್ಪ ಕಮ್ಮಾರ. ಮಹಾಂತೇಶ ಶಹಪೂರಕರ. ಪ್ರಭುಗೌಡ.ಗೋಪಾಲರಾವ್. ಗುರುನಾಥ ರಡ್ಡಿ ಶೀಲವಂತ.ಇತರರು ಸಂಗೀತಸೇವೆ ಸಲ್ಲಿಸಿದರು. ಮೋಹನರಾವ ಮಾಳದಕರ ಮತ್ತು ರಮೇಶ ಕುಲಕರ್ಣಿ ಪ್ರಾರ್ಥನೆ ನೆರವೇರಿಸಿದರು ಶಿಕ್ಷಕರಾದ ಹೆಚ್. ರಾಠೋಡ ಸ್ವಾಗತಿಸಿದರು ವೆಂಕಟೇಶ್ ಎಂ ಪಾಟೀಲ ನಿರೂಪಿಸಿದರು ಶರಣಯ್ಯಸ್ವಾಮಿ ಬಳುಂಡಗಿಮಠ ಮತ್ತು ಸಂಗಡಿಗರು ಭಾಗವಹಿಸಿದ್ದರು.