ಛಾಯಾಗ್ರಾಹಕರ ಸೇವೆ ಅನನ್ಯ: ಜಿಪಂ. ಸಿಒ ಬಡೋಲೆ

0
20

ಕಲಬುರಗಿ: ೧೮೩೯ರಲ್ಲಿ ಆರಂಭವಾಗಿರುವ ವಿಶ್ವ ಛಾಯಾಗ್ರಾಹಕರ ದಿನಾಚರಣೆಯ ಮೂಲಕ ಅದೇಷ್ಟೋ ವಿಶ್ವಪ್ರಸಿದ್ದ ಛಾಯಾಗ್ರಹಕರನ್ನು ಬೆಳಕಿಗೆ ತರಲು ಸಾಧ್ಯವಾಗಿದೆ. ಛಾಯಾಗ್ರಾಹಕರ ಕ್ರಿಯಾತ್ಮಕತೆಯ ಆಧಾರದ ಮೇಲೆ ಮೂಡಿಬಂದಿರುವ ಚಿತ್ರ ಸಾವಿರ ಪದಗಳನ್ನು ಬಿಚ್ಚಿಡುತ್ತದೆ ಎಂದು ಜಿಲ್ಲಾ ಪಂಚಾಯತಿ ಸಿಇಓ ಡಾ. ಗೀರೀಶ ಬಡೋಲೆ ಅಭಿಪ್ರಾಯಪಟ್ಟರು.

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಉದ್ಘಾಟಿಸಿ ಉದ್ದೇಶಿಸಿ ಮಾತನಾಡಿದ ಅವರು, ಇಂದು ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಎಲ್ಲರೂ ಛಾಯಾಗ್ರಾಹಕರಾಗಿ ಬೆಳೆಯಲು ಅವಕಾಶ ಸಿಕ್ಕಂತಾಗಿದೆ ನಿಜ ಆದರೆ ನಿಜವಾದ ಛಾಯಾಗ್ರಾಹಕ ಆತನು ಪ್ರದರ್ಶಿಸುವ ಚಾಕಚಕ್ಯತೆಯ ಮೇಲೆ ಅವಲಂಬಿತವಾಗಿದೆ ಎಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ಹುಬ್ಬಳ್ಳಿ ಶಾಹೀನ್ ಮೂಕಾಶಿ ಮಾತನಾಡಿ, ಪತ್ರಿಕೋದ್ಯಮ ಇಷ್ಟೊಂದು ಗಟ್ಟಿಯಾಗಿ ಬೆಳೆಯುವುದಕ್ಕೆ ಛಾಯಾಚಿತ್ರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ, ಅಂದು ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತಿತ್ತು ಆದರೆ ಅದನ್ನು ಈಗ ನಿಲ್ಲಿಸಿದೆ. ಒಂದು ಚಿತ್ರ ಈಗ ಕಥೆಯನ್ನೇ ಹೇಳುತ್ತಿದೆ ಎಂದ ಅವರು ಛಾಯಾಚಿತ್ರವಿಲ್ಲದೆ ಪತ್ರಿಕೆಯ ಮುನ್ನುಡಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಛಾಯಾಗ್ರಾಹಕ ತಾಜುದ್ದೀನ ಆಜಾದ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಛಾಯಾಗ್ರಾಹಕರಾuಟಿಜeಜಿiಟಿeಜ ಭವಾನಿಸಿಂಗ್ ಠಾಕೂರ್, ಅಶೋಕ ಪಾಟೀಲ, ಗುರು ಚವ್ಹಾಣ, ವಿಜಯಕುಮಾರ ಗಾಜರೆ, ಮನೀಷ ಪವಾರ, ಮುಜಿಬ್ ಅಲಿ ಖಾನ್, ಆನಂದ ನರೋಣ, ಬಸವರಾಜ ತೋಟದ ಅವರನ್ನು ವಿಶೇಷವಾಗಿ
ಸನ್ಮಾನಿಸಲಾಯಿತು.

ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಶರಣಬಸಪ್ಪ ಜಿಡಗಿ, ಮೊಹ್ಮದ್ ಮುಕ್ತಾರೋದ್ದಿನ್, ರಾಜು ಕೋಷ್ಠಿ ವೇದಿಕೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here