ಕಲಬುರಗಿ: ಮೂರನೇ ಮಹಾಡಿಯಿಂದ ಬಿದ್ದು ಖೈದಿ ಸಾವು

0
134

ಕಲಬುರಗಿ: ಪೊಲೀಸರರಿಂದ ತಪ್ಪಿಸಿಕೊಳ್ಳಲು ಹೋಗಿ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಮೂರನೇ ಫ್ಲೋರನಿಂದ ಬಿದ್ದು ಆರೋಪಿ ಸಾವನ್ನಪ್ಪಿದ ಘಟನೆ ಶುಕ್ರವಾರ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ನಗರದ ಹಮಾಲವಾಡಿ ಬಡಾವಣೆ ನಿವಾಸಿ ಮುನ್ನಾ ಅಲಿಯಾಸ್ ಶೇಖ್ ಸೋಹೆಲ್ ಮೃತ ಆರೋಪಿ ಎಂದು ತಿಳಿದುಬಂದಿದೆ. ದರೋಡೆ ಪ್ರಕರಣದಲ್ಲಿ ಈತನನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದ ಮುಂದೆ ಹಾಜರುಪಡಿಸುವ ಮುನ್ನ ಕೋವಿಡ್ ತಪಾಸಣೆಗೆ ಕರೆದೊಯ್ದಾಗ ಘಟನೆ ಜರುಗಿದೆ.

Contact Your\'s Advertisement; 9902492681

ಕೋವಿಡ್ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುನ್ನಾ ಯತ್ನಿಸಿದಾಗ ಆಸ್ಪತ್ರೆಯ ಮೂರನೇ ಮಹಡಿ ಹತ್ತಿ ಹಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here