ವಿಮುಕ್ತಿ ದಿನ ಕಾರ್ಯಕ್ರಮದಲ್ಲಿ ಚವ್ಹಾಣ ಹೆಸರು ಕೈ ಬಿಟ್ಟಿರುವುದಕ್ಕೆ ಖಂಡನೆ

0
103

ಶಹಾಬಾದ: ಕಲ್ಬುರ್ಗಿ ನಗರದಲ್ಲಿ ಹಿಂದ ಬಂಜಾರ ಗೌರವ ಗಾಥಾ ಸಮಿತಿಯಿಂದ ಅಗಸ್ಟ ೩೧ ರಂದು ಬೆಳಿಗ್ಗೆ ಕಲಬುರಗಿಯ ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಲಾದ ವಿಮುಕ್ತಿ ದಿನ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಾಬುರಾವ್ ಚವ್ಹಾಣ ಅವರ ಹೆಸರನ್ನು ಕೈ ಬಿಟ್ಟಿರುವುದಕ್ಕೆ ಅಖಿಲ ಭಾರತ ಬಂಜಾರ ಸೇವಾ ಸಂಘದ ತಾಲೂಕ ಅಧ್ಯಕ್ಷ ಕುಮಾರ ಚವ್ಹಾಣ ಹಾಗೂ ನಗರದ ಅಧ್ಯಕ್ಷ ದಿಲೀಪ್ ನಾಯಕ್ ತೀವ್ರವಾಗಿ ಖಂಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಮೊದಲ ಬಂಜಾರ ಸಮಾಜದ ಶಾಸಕರಾಗಿ, ಸಚಿವರಾಗಿ ಬಾಬುರಾವ ಚವ್ಹಾಣ ಸಮಾಜವನ್ನು ಸಂಘಟಿಸಿದ್ದಾರೆ.ಸಮಾಜಕ್ಕಾಗಿ ಹಲವಾರು ಸೇವೆಯನ್ನು ಸಲ್ಲಿಸಿದ್ದಾರೆ. ಅವರು ಬಂಜಾರ ತಾಂಡಗಳಲ್ಲಿ ಪ್ರವಾಸ ಮಾಡುವ ಮೂಲಕ ಸಮಾಜದ ಜನರಿಗೆ ಅರಿವು ಮೂಡಿಸಿರುವ ಏಕೈಕ ಪ್ರಮುಖ ನಾಯಕರು. ಕಲಬುರ್ಗಿ ಜಿಲ್ಲೆ ಅಲ್ಲದೆ ಇಡೀ ರಾಜ್ಯದಲ್ಲಿ ಚವ್ಹಾಣ ಅವರು ಚಿರಪರಿಚಿತರಿದ್ದಾರೆ.

Contact Your\'s Advertisement; 9902492681

ದೇಶದಲ್ಲಿಯೇ ಸಂತ ಸೇವಾಲಾಲ್ ಮಹಾರಾಜರ ಜಯಂತಿಯನ್ನು ಮೊದಲು ಪ್ರಾರಂಭ ಮಾಡಿರುವ ಶ್ರೇಯಸ್ಸು ಬಾಬುರಾವ ಚವ್ಹಾಣ ಅವರಿಗೆ ಸಲ್ಲುತ್ತದೆ. ಇಂದು ಕೆಲವರು ತಮ್ಮ ತೋಚಿದಂತೆ ಸಮಾಜದ ಹೆಸರು ಹಾಗೂ ಸಮಾಜಕ್ಕೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಏನೆಲ್ಲಾ ಮಾಡುತ್ತಿದ್ದಾರೆ.ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತಿದೆ. ಅಲ್ಲದೆ ಬಂಜಾರ ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಇಡೀ ದೇಶದಲ್ಲಿ ಬಂಜಾರ ಸಮಾಜ ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಮುನ್ನಡೆಯುತ್ತಿದೆ. ಆದರೆ ಕೆಲ ರಾಜಕೀಯ ಪಕ್ಷದ ಮುಖಂಡರು ಬಂಜಾರ ಸಮಾಜದ ತಮ್ಮ ಮನೆಯ ಆಸ್ತಿ ಎನ್ನುವಂತೆ ವರ್ತಿಸುತ್ತಿದ್ದಾರೆ.

ಹಿಂದ ಬಂಜಾರ ಗೌರವ ಗಾಥಾ ಸಮಿತಿಯಿಂದ ವಿಮುಕ್ತಿ ದಿನ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಂಜಾರಾ ಸಮಾಜದ ಒಬ್ಬ ಹಿರಿಯ ಮುಖಂಡ ಮಾಜಿ ಸಚಿವ ಬಾಬುರಾವ್ ಚವ್ಹಾಣ ಅವರಿಗೆ ಕಾರ್ಯಕ್ರಮದಲ್ಲಿ ಕೈಬಿಟ್ಟಿರುವುದು ಹಾಗೂ ಆಹ್ವಾನ ಕೂಡ ನೀಡದಿರುವುದಕ್ಕೆ ನೋವು ತಂದಿದೆ. ಈ ರೀತಿ ಮಾಡುವುದರಿಂದ ಏನು ಸಾಧಿಸುವುದಕ್ಕೆ ಮುಂದಾಗಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ.

ಈ ರೀತಿಯ ಚವ್ಹಾಣ ಹೆಸರು ಬಿಟ್ಟಿರುವುದಕ್ಕೆ ತೀವ್ರವಾಗಿ ಖಂಡಿಸುತ್ತೆವೆ. ಅಲ್ಲದೆ ಸಮಾಜದ ಕಾರ್ಯಕರ್ತರು ವಿಮುಕ್ತಿ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು ಎಂದು ಸಮಾಜದವರಿಗೆ ಅಖಿಲ ಭಾರತ ಬಂಜಾರ ಸೇವಾ ಸಂಘದ ತಾಲೂಕ ಅಧ್ಯಕ್ಷ ಕುಮಾರ ಚವ್ಹಾಣ ಹಾಗೂ ನಗರದ ಅಧ್ಯಕ್ಷ ದಿಲೀಪ್ ನಾಯಕ್ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here