ಸ್ವಾತಂತ್ರದ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಶೌರ್ಯ ಮರೆಯುವಂತಿಲ್ಲ

0
13

ಕಲಬುರಗಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮಗಾಂಧೀಜಿಅವರಅಹಿಂಸೆಯ ಹೋರಾಟದಜೊತೆಗೆ ಬುಡಕಟ್ಟು ಸಮುದಾಯ ವೀರತನ, ಶೂರತನವುಇದೆ. ಆದರೆಅದುಇತಿಹಾಸದಲ್ಲಿ ಮರೆಯಾಗಿದ್ದುದುರ್ದೈವಎಂದು ವಿಧಾನ ಪರಿಷತ್ ಸದಸ್ಯ ಹಾಗೂ ವನವಾಸಿ ಕಲ್ಯಾಣಕರ್ನಾಟಕದರಾಜ್ಯ ಕಾರ್ಯದರ್ಶಿ ಶಾಂತಾರಾಮ್ ಸಿದ್ದಿ ಹೇಳಿದರು.

ನವದೆಹಲಿಯ ಪರಿಶಿಷ್ಠ ಪಂಗಡಗಳ ರಾಷ್ಟ್ರೀಯಆಯೋಗದಆಶ್ರಯದಡಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ಅಖಿಲ ಭಾರತೀಯ ವನವಾಸಿ ಕಲ್ಯಾಣಆಶ್ರಮ ಸಹಯೋಗದೊಂದಿಗೆ ಶುಕ್ರವಾರ ವಿ.ವಿ.ಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಸ್ವಾತಂತ್ರ್ಯ ಭಾರತದಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ “ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟು ವೀರರು” ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದಅವರು, ಬ್ರಿಟಿಷರ ವಿರುದ್ಧದ ಸ್ವಾತಂತ್ರ ಹೋರಾಟದಲ್ಲಿ ಬುಡಕಟ್ಟು ಸಮುದಾಯದಕೊಡುಗೆ, ಪರಿಶ್ರಮ ಬಹಳಷ್ಟಿದೆ. ಸ್ವಾತಂತ್ರದ ಸಂಗ್ರಾಮದಲ್ಲಿಕರ್ನಾಟಕದ ಹಲಗಲಿ ಬೇಡರ ಪಾತ್ರವೂ ಹಿರಿದಾಗಿದೆಎಂದು ಹೇಳಿದರು. ಹೋರಾಟದಇತಿಹಾಸದಲ್ಲಿಇದುದಾಖಲಾಗದಿರುವುದು ವಿಷಾದದ ಸಂಗತಿಎಂದಅವರುಇತಿಹಾಸದ ಸತ್ಯ ಶೋಧನೆಅಗತ್ಯವಾಗಿದೆಎಂದು ತಿಳಿಸಿದರು.

Contact Your\'s Advertisement; 9902492681

೧೮೫೭ ದೇಶದ ಮೊದಲ ಸ್ವಾತಂತ್ರ ಸಂಗ್ರಾಮಎಂದು ಹೇಳುತ್ತೆವೆ. ಅದರೆ ಬಿಹಾರದತಿಲಕ್ ಮಾಂಜಿ ಎಂಬ ಬುಡಕಟ್ಟು ಸಮುದಾಯದಯುವಕ ೧೭೫೦ರಲ್ಲಿಯೇ ಬುಡಕಟ್ಟುಜನರ ಮೇಲೆ ಬ್ರಿಟಿಷರ ದಬ್ಬಾಳಿಕೆ ಸಹಿಸದೆಆಂಗ್ಲಅಧಿಕಾರಿಯನ್ನುತನ್ನ ಬಿಲ್ಲಿನಿಂದಕೊಲ್ಲುವ ಮೂಲಕ ಆಂಗ್ಲರ ವಿರುದ್ಧತೊಡೆತಟ್ಟಿದ್ದ.ರಾಮಾಯಣ-ಮಹಾಭಾರತದಕಥಾರೂಪಕದ ಪ್ರತಿ ಹಂತದಲ್ಲಿಯೂ ವನವಾಸಿ ಸಮುದಾಯಕಾಣುತ್ತದೆ. ರಾಮಾಯಣ ಬರೆದ ವಾಲ್ಮೀಕಿ ಸಹ ಬುಡಕಟ್ಟು ಸಮುದಾಯಕ್ಕೆ ಸೇರಿದ್ದಾರೆ.ಹೀಗಾಗಿ ಬುಡಕಟ್ಟುಜನಾಂಗ ಭಾರತದ ಅವಿಭಾಜ್ಯ ಅಂಗ ಎಂದರು.

ಪರಿಶಿಷ್ಟ ಪಂಗಡಗಳ ರಾಷ್ಟ್ರೀಯಆಯೋಗದ ಸಲಹೆಗಾರರಾಘವ ಮಿತ್ತಲ್, ರಾಷ್ಟ್ರೀಯಆಯೋಗದಅಧಿಕಾರ ಮತ್ತು ವ್ಯಾಪ್ತಿಕುರಿತು ವಿವರಿಸಿದರು.ಶೈಕ್ಷಣಿಕ ಸಂಯೋಜಕ ಪ್ರೊ.ಗೂರು ಶ್ರೀರಾಮುಲು ಪ್ರಾಸ್ತಾವಿಕವಾಗಿ ಮಾತನಾಡಿದರು.ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದಅಗಸರಅಧ್ಯಕ್ಷತೆಯಲ್ಲಿ ನಡೆದಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯಗಂಗಾಧರ ನಾಯಕ್, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ಟಿ. ಶಂಕರಪ್ಪ, ಕುಲಸಚಿವ ಪ್ರೊ.ವಿ.ಟಿ.ಕಾಂಬಳೆ, ಮುಖ್ಯ ಸಂಯೋಜಕ ಪ್ರೊ.ಚಂದ್ರಕಾಂತಆರ್. ಕೆಳಮನಿ, ಆಡಳಿತ ಸಂಯೋಜಕ ಪ್ರೊ. ಬಸವರಾಜ ಸಣ್ಣಕ್ಕಿಇದ್ದರು.ನಿಂಗಣ್ಣಕಣ್ಣೂರು ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯಹೋರಾಟದಲ್ಲಿತಮ್ಮಜೀವದ ಹಂಗು ತೊರೆದು ಹೋರಾಡಿದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಬುಡಕಟ್ಟು ವೀರರಕುರಿತ ವಿಡಿಯೋಚಿತ್ರ ಪ್ರದರ್ಶಿಸಲಾಯಿತು.

ದೇಶದಲ್ಲಿ ಸುಮಾರು ೧೧ ಕೋಟಿಜನ ಬುಡಕಟ್ಟುಜನಾಂಗವಿದೆ.ನಾಗಲ್ಯಾಂಡ್, ಅರುಣಾಚಲ ಪ್ರದೇಶ, ಮಿಜೋರಾಂ ನಂಥ ರಾಜ್ಯಗಳಲ್ಲಿ ಆದಿವಾಸಿ ಜನ ಹೆಚ್ಚಾಗಿ ಕಾಣಸಿಗುತ್ತಾರೆ.ರಾಜ್ಯದಲ್ಲಿ ೫೧ ಪ್ರಕಾರದ ಬುಡಕಟ್ಟು ಸಮುದಾಯದವರು ವಾಸಿಸುತ್ತಿದ್ದಾರೆ. ಉಡುಪಿಯಲ್ಲಿನಕೊರಗ ಸಮುದಾಯ, ಮೈಸೂರು, ಕೊಡಗು ಹಾಗೂ ದಕ್ಷಿಣಕನ್ನಡಜಿಲ್ಲೆಯಲ್ಲಿರುವಜೇನುಕುರುಬ ವನವಾಸಿ ಸಮುದಾಯಕ್ಕೆ ಇಂದಿಗೂ ಸುರಕ್ಷತೆಯ ಮನೆಯಿಲ್ಲ. ಇಂತಹಕಷ್ಟದಜೀವನ ವನವಾಸಿಗಳದ್ದಾಗಿದ್ದು, ಪರಿಶಿಷ್ಟ ಪಂಗಡಗಳ ರಾಷ್ಟ್ರೀಯಆಯೋಗಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ೧೦೦ ವಿಶ್ವವಿದ್ಯಾಲಯಗಳಲ್ಲಿ ಯುವ ಪೀಳಿಗೆಯ ಅರಿವಿಗೆ ಸ್ವಾತಂತ್ರ ಹೋರಾಟದಲ್ಲಿ ಬುಡಕಟ್ಟುಜನಾಂಗದ ಪಾತ್ರದ ಬಗ್ಗೆ ಬೆಳಕು ಚೆಲ್ಲುವಕಾರ್ಯಕ್ರಮ ಆಯೋಜಿಸಿದ್ದು ಔಚಿತ್ಯಪೂರ್ಣವಾಗಿದೆ. -ಶಾಂತಾರಾಮ್ ಸಿದ್ದಿ, ವಿಧಾನ ಪರಿಷತ್ ಸದಸ್ಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here