ವೃತ್ತಿಗೆ ಮೌಲ್ಯ, ಮಹತ್ವತಂದು ಕೊಟ್ಟ ಹೂಗಾರ ಮಾದಣ್ಣ

0
155

ಕಲಬುರಗಿ: 12ನೇ ಶತಮಾನದ ಬಸವಾದಿ ಶರಣರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯಬೇಕಾದರೆಜಾತಿ ಪದ್ಧತಿ ಮತ್ತು ಮೂಢನಂಬಿಕೆಯಿಂದ ಹೊರ ಬರಬೇಕುಎಂದುಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಭಿಪ್ರಾಯಪಟ್ಟರು.

ನಗರದರಾಜಾಪುರ ಬಡಾವಣೆಯಲ್ಲಿ ಹೂಗಾರ ಮಾದಣ್ಣನವರಜಯಂತ್ಯುತ್ಸವಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಆಡಂಬರದಆಚರಣೆಗಿಂತ ಬದಲಾವಣೆತರುವಆಚರಣೆಯನ್ನುಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಪತ್ರಕರ್ತ-ಲೇಖಕ ಡಾ.ಶಿವರಂಜನ ಸತ್ಯಂಪೇಟೆ ಹೂಗಾರ ಮಾದಣ್ಣಣವರಕುರಿತು ವಿಶೇಷ ಉಪನ್ಯಾಸ ನೀಡಿ, ಹೂ ಕೇಂದ್ರೀತ ವೃತ್ತಿಕಾಯಕ ಮಾಡುತ್ತಿದ್ದ ಮಾದಣ್ಣನವರು, ತಮ್ಮಕಾಯಕನಿಷ್ಠೆಯಿಂದ ಬಸವ ಭಕ್ತರೆನಿಸಿಕೊಂಡಿದ್ದರು.ವೃತ್ತಿಗೆ ಮೌಲ್ಯ ಮತ್ತು ಮಹತ್ವತಂದುಕೊಟ್ಟ ಮಾದಣ್ಣನವರು ನಿನ್ನ ಸ್ವರ್ಗಕ್ಕಿಂತ ನನ್ನಕಾಯಕ ಹೆಚ್ಚು ಎಂದು ಶಿವನಿಗೆ ತಿಳಿಸಿಕೊಟ್ಟವರು.ವಚನಕಾರರಲ್ಲಿ ಹೂ ಕಾಯಕದ ಮಾದಯ್ಯ, ಮಹಾದೇವಿ, ದಸರಯ್ಯ ಮುಂತಾದವರ ಬಗ್ಗೆ ಹೆಚ್ಚಿನ ಮಾಹಿತಿದೊರೆಯುವುದಿಲ್ಲ. ಆದರೆಅವರ ಭಕ್ತಿ ನಿಷ್ಠೆ ಎಂಥದುಎಂಬುದುಅವರನ್ನುಕುರಿತಜಾನಪದ ತ್ರಿಪದಿಗಳು ತಿಳಿಸಿಕೊಡುತ್ತವೆ ಎಂದು ಹೇಳಿದರು.

ಸರ್‍ಜಗದೀಶ್ಚಂದ್ರ ಭೋಸ್‍ಅವರು ಸಸ್ಯಕ್ಕೂಜೀವಇದೆಎನ್ನುವುದಕ್ಕಿಂತ ಮುಂಚೆಯೇ ” ಉದುರಿ ಬೀಳುವುದನ್ನಕ್ಕ ನಿನ್ನ ಹಂಗು, ಉದುರಿ ಬಿದ್ದಲ್ಲಿಎನ್ನ ಹಂಗು, ನಾ ಪೂಜಿಸಿದನ್ನಕ್ಕ ದೇವ” ಎಂದುದಸರಯ್ಯ ಹೇಳಿರುವುದನ್ನು ನೋಡಿದರೆ, ಶರಣರಿಗೆಅಂದೇಎಂತಹ ವೈಜ್ಞಾನಿಕ ವಿಚಾರವಿತ್ತುಎಂಬುದು ತಿಳಿದು ಬರುತ್ತದೆಎಂದುಆಶ್ಚರ್ಯ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಪಿ. ಹೂಗಾರ ಮಾತನಾಡಿದರು. ಪಾಲಿಕೆ ಸದಸ್ಯರಾದರವಿ ಬಾಬು ಹಾಗರಗಿ, ವೀರಣ್ಣ ಹೊನ್ನಳ್ಳಿ, ಮಾಜಿ ಮೇಯರ್‍ರವೀಂದ್ರ ಹೊನ್ನಳ್ಳಿ, ಮಲ್ಲಿನಾಥ ಹೂಗಾರ, ಶಿವಪುತ್ರಪ್ಪ ಹೂಗಾರ ಸಾವಳಗಿ, ಶ್ರೀಮಂತ ಹೂಗಾರ, ಬಸವರಾಜ ಹೂಗಾರಜಿಲ್ಲಾ ಹೂಗಾರ ಸಮಾಜಅಧ್ಯಕ್ಷ ಪ್ರಕಾಶ ಜಿ. ಫುಲಾರಿಅಧ್ಯಕ್ಷತೆ ವಹಿಸಿದ್ದರು.ಪ್ರಶಾಂತ ಹೂಗಾರಚಿಂಚನಸೂರ ನಿರೂಪಿಸಿದರು.ಅಂಬರೀಶ ಹೂಗಾರ ಸ್ವಾಗತಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here