ಕಲ್ಬುರ್ಗಿ ಸೆ 18- ಮನುಷ್ಯನ ನಿಧನದ ನಂತರ ಅವರ ಕಣ್ಣುಗಳನ್ನು ಮಣ್ಣುಪಾಲು ಮಾಡದೆ ಅಂಧ ವ್ಯಕ್ತಿಗಳಿಗೆ ನೇತ್ರದಾನ ಮಾಡಿ ಅವರ ಬಾಳಿಗೆ ಬೆಳಕಾಗಬೇಕೆಂದು ನಂದಿಕೂರ ಗ್ರಾ ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪವನಕುಮಾರ ಬಿ ವಳಕೇರಿ ಹೇಳಿದ್ದರು.
ನಂದಿಕೂರು ಗ್ರಾಮದ ತೆಲ್ಕರ್ ನಗರದಲ್ಲಿ ಲಿಂಗೈಕ್ಕೆ ಷಡಕ್ಷರಿ ಶಿವಯೋಗಿ ಶ್ರೀ ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಯವರ 94ನೇ ಜಯಂತ್ಯುತ್ಸವನು ಉದ್ದೇಶಿಸಿ ಮಾತನಾಡಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀ ಅಲ್ಲಮಪ್ರಭು ಪಾಟೀಲ್ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಬೇಕು ಆರೋಗ್ಯ ಭಾಗ್ಯ ಕಿಂತಲೂ ಇನ್ನೊಂದು ಭಾಗ್ಯ ಇಲ್ಲವೆಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ನೀಲಕಂಠರಾವ ಮುಲಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ್ ಬಡಿಗೇರ್, ನಂದಿಕೂರು ಮಂಡಲ ಪಂ ಮಾಜಿ ಅಧ್ಯಕ್ಷ ಮಲ್ಲನಗೌಡ ಪಾಟೀಲ್, ಅವರೆಲ್ಲರೂ ಮಾತನಾಡಿ ಯುವ ನಾಯಕ ಪವನ ಕುಮಾರ್ ವಳಕೇರಿವರ ಅಪಾರ ಸಮಾಜಿಕ ಕಳಕಳಿಯನ್ನು ಕೊಂಡಾಡಿದ್ದರು. ಆರಂಭಕ್ಕೆ ಬಡಾವಣೆಯ ಹಿರಿಯ ಮುಖಂಡರು ಭೋಜರಾಜ್ ಮಠ ಅವರು ಪ್ರಾರ್ಥನೆಯನ್ನು ನಡೆಸಿ ಕೊಟ್ಟರು.
ಅನುಗ್ರಹ ಆಸ್ಪತ್ರೆಯ ಮೇಲಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರೀ ಬಾಬುರಾವ ಸರ್, ವಿಶ್ವನಾಥ್ ಚಿಲ್ಲಾಳ, ಸಂತೋಷ್, ಕು ಲಕ್ಷ್ಮಿ ಜಾದವ್ ನಂದೂರ್ ಪಿ ಹೆಚ್ ಸಿ ಮಮ್ಮದ್ ಅಲಿ ಖಾನ್, ಮಹಾದೇವ, ಶ್ರೀಮತಿ ಪವಿತ್ರ ಸೇರಿದಂತೆ ಅನೇಕ ವೈದ್ಯರು ಸುಮಾರು ನೂರಾರು ಜನರಿಗೆ ಉಚಿತ ನೇತ್ರ ಚಿಕಿತ್ಸೆ ನಡೆಸಿಕೊಟ್ಟರು. ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಸುಮಾರು 31 ಜನರು ಆಯ್ಕೆಯಾಗಿದ್ದಾರೆ ದಿನಾಂಕ 22 ಸೆಪ್ಟೆಂಬರ್ 2022 ರಂದು ಶಸ್ತ್ರಚಿಕಿತ್ಸೆ ಮಾಡುವುದಾಗಿ ಅನುಗ್ರಹ ಆಸ್ಪತ್ರೆಯ ಮೇಲಧಿಕಾರಿಗಳು ತಿಳಿಸಿರುತ್ತಾರೆ. ಪಿ ಹೆಚ್ ಸಿ ನಂದೂರ್ ಆರೋಗ್ಯ ಇಲಾಖೆಯವರು ಶುಗರ, ಬಿ ಪಿ, ಎಚ್ಐವಿ, ಆರ್ ಬಿ ಎಸ. ಪರೀಕ್ಷೆ ಮಾಡಿದರು.
ಶಿಬಿರದಲ್ಲಿ ಗ್ರಾ ಪಂ ಸದಸ್ಯರು ವಿಜಯಕುಮಾರ್ ರಾಠೋಡ, ಮಲ್ಲಣ್ಣ ಖಂಡಪ್ಪಗೋಳು, ರಾಜು ಬಾಯಿ ಡಿ ಚವಾಣ, ಕುಪ್ಪಣ್ಣ ವರ್ಮ, ಭೀಮಶಂಕರ ನಂದಿಕೂರ, ಮೈಲಾರಿ ಇಟಗಾ, ನಾಗೇಶ್ ಮುಚಖೆಡ, ಹಾಗೂ ಸಂಜುಕುಮಾರ ಕೊಬಾಳಕರ, ಬಸವಲಿಂಗ ಪಾಟೀಲ್, ವಿಠ್ಠಬಾಯಿ ಪಾಟೀಲ ಸಿಇಓ ಸ್ವಾಗತ ಕೋರಿದರು ಅನಿಲ್ ಕೊರಬ ವಂದನಾರ್ಪಣೆ ಮಾಡಿದರು.
19 ರಂದು ದಂತ ತಪಾಸಣೆ ಹಾಗೂ ಚಿಕಿತ್ಸೆ ಜಿಮ್ಸ್ ಆಸ್ಪತ್ರೆ ಕಲ್ಬುರ್ಗಿ ಆಗಮಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಅನಿತಾ ಪವನ್ ಕುಮಾರ್ ವಳಕೇರಿ ಮಾಜಿ ಉಪಾಧ್ಯಕ್ಷರು ಜಿ ಪಂ ಕಲ್ಬುರ್ಗಿ.