ಯುವಕರು ಚಿತ್ತಾಪುರ ಕ್ಷೇತ್ರದ ಭವಿಷ್ಯ ಬದಲಿಸುವ ಶಕ್ತಿ ಹೊಂದಿದ್ದಾರೆ: ಶಾಸಕ ಪ್ರಿಯಾಂಕ್ ಖರ್ಗೆ

0
20

ವಾಡಿ/ಚಿತ್ತಾಪುರ: ಯುವಕರು ಪಕ್ಷದ ಆಸ್ತಿ ಚಿತ್ತಾಪುರ ಕ್ಷೇತ್ರದ ಭವಿಷ್ಯ ಬದಲಿಸುವ ಶಕ್ತಿ ನಿಮ್ಮಲ್ಲಿದೆ. ಇಂದಿನ ಯುವಗರ್ಜನೆ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರು ನೂರು ಮತ ಹಾಕಿಸುವ ಶಕ್ತಿಯುಳ್ಳವರಾಗಿದ್ದಾರೆ ಎಂದು ಮಾಜಿ‌ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ವಾಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಯುವಗರ್ಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಡಿಜಿಟಲ್ ವ್ಯವಸ್ಥೆಯಡಿಯಲ್ಲಿ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡುವ ಕಾರ್ಯದಲ್ಲಿ ಇಡೀ ರಾಜ್ಯದಲ್ಲಿಯೇ ಚಿತ್ತಾಪುರ ಕ್ಷೇತ್ರದಲ್ಲಿ ಅತಿ‌ಹೆಚ್ಚು ಸದಸ್ಯರಾಗಿದ್ದಾರೆ.‌ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ನೀಡಲಾಗುವುದು.

Contact Your\'s Advertisement; 9902492681

ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದಾದರೊಂದು ಜನಪರ ಯೋಜನೆ ಜಾರಿಗೆ ತಂದಿದ್ದರೆ ಹೇಳಿಬಿಡಲಿ ಎಂದು ಚಾಲೆಂಜ್ ಮಾಡಿದ ಶಾಸಕರು ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನರ ಹಣ ಲೂಟಿಯಾಗುತ್ತಿದೆ. ಗುತ್ತಿಗೆದಾರರು ಸರ್ಕಾರ 40% ಕಮಿಷನ್‌ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ” ರೂಪ್ಸ್ ” ಆರೋಪಿಸಿದೆ. ಸಚಿವರಿಗೆ 10% ಎಂದು ತೋಟಗಾರಿಕೆ‌ ಇಲಾಖೆಯ ಅಧಿಕಾರಿಗಳು ಷರಾ ಬರೆದಿದ್ದಾರೆ. ಮೋದಿ ಅವರ ನ‌ ಖಾವೂಂಗಾ, ನ ಖಾನೇದುಂಗಾ ಘೋಷಣೆ ಏನಾಯಿತು? ಎಂದು ಕುಟುಕಿದರು.

ರಾಜ್ಯದ ಭ್ರಷ್ಟ ಸರಕಾರ ಟ್ರಾಫಿಕ್ ಪೊಲೀಸರ ಮೂಲಕ 701 ಕೋಟಿ‌ ದಂಡ ವಸೂಲಿ ಮಾಡಿಸಿದೆ. ಪೊಲೀಸರಿಗೆ ಟಾರ್ಗೆಟ್ ನೀಡುವ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಬಗ್ಗೆ ಸ್ವತಃ‌ ಮಾಧುಸ್ವಾಮಿ, ರೇಣುಕಾಚಾರ್ಯ, ಬಸನಗೌಡಪಾಟೀಲ ಯತ್ನಾಳ ಹಾಗೂ‌ ಎಚ್ ವಿಶ್ವನಾಥ ಬಹಿರಂಗವಾಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಈಶ್ವರಪ್ಪನವರನ್ನ ‘ ಸ್ವಯಂ ಘೋಷಿತ ಆರೋಪಮುಕ್ತ ‘ ಎಂದು ಕರೆದ ಶಾಸಕರು, ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ‌ ಅವರಿಗೆ ಸರ್ಕಾರ ಕ್ಲೀನ್ ಚಿಟ್ ನೀಡಿದೆ. ಈಗ ಅದೇ ಈಶ್ವರಪ್ಪ ಮತ್ತೆ ಸಚಿವರಾಗಲು ರೆಡಿಯಾಗಿಯಾಗಿದ್ದು,‌ ” ಮದುವೆಯಾಗಲು ರೆಡಿ ಇದ್ದೇನೆ ಆದರೆ ಮದುವೆ ಮಾಡಲು ಮನೆಯವರು ರೆಡಿ ಇಲ್ಲ ಎಂದಿದ್ದಾರೆ.‌ ಈಶ್ವರಪ್ಪನವರೇ, ಮದುವೆ ಆಗಲು ಎರಡೂ ಕಡೆಯವರು ಒಪ್ಪಬೇಕು” ಎಂದು ವ್ಯಂಗ್ಯ ಮಾಡಿದರು.

545 PSI ಹುದ್ದೆಗಳಿಗೆ 1,29,000 ಜನ ಅರ್ಜಿ ಬರೆದರೆ 20,000 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯ ರೂಪಿಸಬೇಕಿದ್ದ ಸರ್ಕಾರ ಪ್ರತಿಯೊಂದು ಹುದ್ದೆಗೆ ಒಂದು ಕೋಟಿ ಲಂಚ ಪಡೆದು ಅಭ್ಯರ್ಥಿಗಳ ಬದುಕನ್ನು ಮೂರಾಬಟ್ಟೆ ಮಾಡಿ ವಿಧಾನಸೌಧವನ್ನ ವ್ಯಾಪಾರ ಸೌಧ ಮಾಡಿದ್ದಾರೆ ಎಂದು ಆಕ್ರೋಸ ವ್ಯಕ್ತಪಡಿಸಿದ ಖರ್ಗೆ, ಗೃಹ ಸಚಿವ ಅರ್ಧಜ್ಞಾನದ ಅರಗ ಜ್ಞಾನೇಂದ್ರ ಪಿಎಸ್ ಐ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಾದಿಸಿದ್ದರು ಎಂದರು.

3,50,000 ಯುವಕರು KPTCL ಇಲಾಖೆಯಲ್ಲಿ ಪರೀಕ್ಷೆ ಬರೆದಿದ್ದಾರೆ. ಅಲ್ಲಿಯೂ ಭ್ರಷ್ಠಾಚಾರ ನಡೆದಿದೆ. ಬಡವರ ಜೀವನದ ಜೊತೆ ಚೆಲ್ಲಾಟವಾಡಿದ ಸರ್ಕಾರ ಅವರನ್ನ ಬೀದಿಪಾಲು ಮಾಡಿದೆ ಎಂದರು.

ಸಿಎಂ ಬೊಮ್ಮಾಯಿ ಅವರಿಗೆ ತಾಕತ್ತು ಇದ್ದರೆ ಧಮ್ ಇದ್ದರೆ ನಿರುದ್ಯೋಗಿ ಯುವಕರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಅವರನ್ನು ಎದುರಿಸಲಿ. ಕುರುಬರಿಗೆ ಹಾಗೂ ಕೋಲಿ ಸಮಾಜವನ್ನು ಎಸ್ ಟಿ ಗೆ ಸೇರಿಸುವುದಾಗಿ ಭರವಸೆ ನೀಡಿದ್ದರಲ್ಲ ಅವರ ಮುಂದೆ ನಿಂತು ಮಾಡಲಿ ಎಂದು ಸವಾಲೆಸೆದರು.

ಯುವಕರೇ ಕೇಸರಿ ಶಾಲಿನ ಬಲೆಗೆ ಬೀಳಬೇಡಿ. ಬಿಜೆಪಿಯ ಆಮೀಷಕ್ಕೆ ಒಳಗಾಗಬೇಡಿ. ಕೇಸರಿ ಶಾಲು ಹಾಕುವ ಮುನ್ನ ಬಿಜೆಪಿ ನಾಯಕರ ಮಕ್ಕಳು ಏನು ಮಾಡುತ್ತಿದ್ದಾರೆ ಕೇಳಿ. ಅವರ ಮಕ್ಕಳನ್ನು ದೇಶದ ಪ್ರತಿಷ್ಠಿತ ಶಾಲೆ ಕಾಲೇಜುಗಳಲ್ಲಿ ಓದಿಸುತ್ತಿದ್ದಾರೆ. ಆದರೆ ಬಡ ಮಕ್ಕಳ ಹೆಗಲಿಗೆ ಕೇಸರಿ ಶಾಲು ತೊಡಿಸಿ ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆಗೆ ಕಳಿಸುತ್ತಾರೆ ಎಂದು ಖರ್ಗೆ ಕಿಡಿಕಾರಿದರು.

ಮಾಜಿ ಸಚಿವರಾದ ಡಾ ಶರಣಪ್ರಕಾಶ ಪಾಟೀಲ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಸುಭಾಷ್ ರಾಠೋಡ, ಮಾಜಿ ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಶಿವಾನಂದ ಪಾಟೀಲ,‌ನವೀನ್, ನಿಕೇತ್ ರಾಜ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here