ಕಂಪ್ಲಿ ಪುರಸಭೆ ಕಾರ್ಯಾಲಯದಲ್ಲಿ ಸಿಸಿಟಿವಿ ಅಳವಡಿಸುವಂತೆ ದಲಿತ ಪ್ಯಾಂಥರ್ ಮನವಿ

0
10

ಕಂಪ್ಲಿ: ಸೆ: 22 ರಂದು ಕಂಪ್ಲಿ ಪುರಸಭಾ ಕಾರ್ಯಾಲಯದಲ್ಲಿ ಭ್ರಷ್ಟಚಾರವು ಎಗ್ಗಿಲ್ಲದೆ ಸಾಗುತ್ತಿದ್ದು ಪುರಸಭೆ ಸಿಬ್ಬಂದಿಗಳು ಕರ್ತವ್ಯ ಅವಧಿಯಲ್ಲಿ ಕಚೇರಿಯಲ್ಲಿ ಕೂಡದೆ ಅನ್ಯ ಕೆಲಸಗಳಿಗೆ ವೈಯಕ್ತಿಕ ಕೆಲಸಗಳಲ್ಲಿ ತೊಡಗಿದ್ದು ಪಾರದರ್ಶಕವಾಗಿರಲು ಪುರಸಭೆ ಕಚೇರಿಯಲ್ಲಿ ಸಿಸಿಟಿವಿ ಅಳವಡಿಸುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯಿಂದ ಕಂಪ್ಲಿ ಪುರಸಭಾ ಮುಖ್ಯಾಧಿಕಾರಿ ಎನ್. ಶಿವಲಿಂಗಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತಾನಾಡಿದ ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ಎನ್. ಸೈಯದ್ ವಾರೀಶ್ ಪುರಸಭೆ ವ್ಯಾಪ್ತಿಯಲ್ಲಿ ಬರುವ ನಿವಾಸಿಗಳು ಪ್ರತಿ ವರ್ಷ ಸರ್ಕಾರಕ್ಕೆ ತೆರಿಗೆ ಹಣವನ್ನು ಪಾವತಿಸುತ್ತಿರುವುದು ಮೇಲ್ನೋಟಕ್ಕೆ ವ್ಯರ್ಥವಾಗಿ ಕಾಣಿಸುತ್ತಿದೆ ಕಾರಣ ನಂ.3 ಫಾರಂಗಾಗಿ 2000 ರಿಂದ 3000 ರೂ. ಗಳಷ್ಟು ಹಣವನ್ನು ಲಂಚದ ರೂಪದಲ್ಲಿ ಖರ್ಚು ಮಾಡುವ ದುಸ್ಥಿತಿ ಕಂಪ್ಲಿ ಜನರಿಗೆ ಎದುರಾಗಿದ್ದು ಕಾರ್ಯಾಲಯದಲ್ಲಿ ಅಧಿಕಾರಿಗಳು ಹಣವಿಲ್ಲದ ಕೆಲಸವನ್ನು ವೇಗವಾಗಿ ಮಾಡುವುದಿಲ್ಲಾ ಹಾಗೂ ತಮ್ಮ ಕೆಲಸದ ಅವಧಿಯಲ್ಲಿ ಅಧಿಕಾರಿಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲಾ ಎಂದರು.

Contact Your\'s Advertisement; 9902492681

ನಂತರ ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ್ ದಾನಪ್ಪ ಮಾತಾನಾಡಿ ಕಂಪ್ಲಿ ಪುರಸಭೆಯಲ್ಲಿ ಲಂಚಾವತರ ಯಾವ ಮಟ್ಟಕ್ಕೆ ಬಂದಿದೆ ಎಂದರೆ ಸರ್ಕಾರಕ್ಕೆ ತೆರಿಗೆ ಹಣವನ್ನು ಪಾವತಿ ಮಾಡಲು ಇಲ್ಲಿನ ಅಧಿಕಾರಿಗಳು 100 ರೂ ಗಳನ್ನು ಕೇಳುತ್ತಿದು ಯಾವ ಕಾರಣಕ್ಕೆಂದು ಕೇಳಿದರೆ ತೆರಿಗೆ ಮೊತ್ತವನ್ನು ಲೆಕ್ಕ ಮಾಡುವುದಕ್ಕಾಗಿ ಎಂದು ಉಢಾಫೆ ಉತ್ತರ ನೀಡುತ್ತ ಭ್ರಷ್ಟಚಾರಕ್ಕೆ ಉತ್ತೇಜನೆಯನ್ನು ನೀಡುತ್ತಿದ್ದು ಇನ್ನು ಬೇರೆ ಕಾರ್ಯಗಳಗೆ ಇನ್ನಷ್ಟು ಹಣದ ಬೇಡಿಕೆಯನ್ನು ಇಟ್ಟಿರಬಹುದು ಎನ್ನುವ ಅನುಮಾನ ಮೂಡುತಿದ್ದು ಆದ್ದರಿಂದ ಇವೆಲ್ಲವನ್ನು ನಿಯಂತ್ರಿಸಲು ಮುಖ್ಯಾಧಿಕಾರಿಗಳು ಈ ಕೂಡಲೇ ಪುರಸಭೆ ಕಾರ್ಯಾಲಯದ ಪ್ರತಿಯೊಂದು ಕೋಠಡಿಯಲ್ಲೂ CCTV ಕ್ಯಾಮೆರಾವನ್ನು ಅಳವಡಿಸುವಂತೆ ಭಾರತೀಯ ದಲಿತ ಪ್ಯಾಂಥರ್ ನಿಂದ ಮನವಿ ಸಲ್ಲಿಸಲಾಯಿತು,

ಈ ಸಂಧರ್ಭದಲ್ಲಿ ಹೆಚ್. ವೆಂಕಟೇಶ್, ರೋಷನ್, ಗಂಗಾವತಿ ಕೃಷ್ಣ, ಪುಟಾಣಿ ಈರಣ್ಣ ಪಾಲ್ಗೊಂಡಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here