ಆರೋಗ್ಯ ಮೇಳ: 121 ಜನರ ಆರೋಗ್ಯ ತಪಾಸಣೆ

0
16

ಸುರಪುರ: ಲಕ್ಷ್ಮೀಪೂರ ಚೌಡಮ್ಮ ದೇವಾಲಯದ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ, ಜಿಲ್ಲಾ ಪಂಚಾಯತ್ ಯಾದಗಿರಿ, ಜಿಲ್ಲಾ ಆರೋಗ್ಯ ಕುಟುಂಬ ಇಲಾಖೆ ಯಾದಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಸನಾಪುರ ಆರೋಗ್ಯ ಮತ್ತು ಕ್ಷೇಮಾ ಕೇಂದ್ರ ಲಕ್ಷ್ಮೀಪೂರ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ-22 ನಡೆಸಲಾಯಿತು.

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಆಯೋಜಿಸಿದ ಮೇಳಕ್ಕೆ ಡಾ. ಅಲ್ಲಾವುದ್ಧೀನ್ ಅರಕೇರಿ ಚಾಲನೆ ನೀಡಿ ಮಾತನಾಡಿದರು. ಯಾವದೇ ರೋಗ ಕಂಡುಬಂದ ತಕ್ಷಣ ವೈದ್ಯರನ್ನು ಕಂಡು ಅವರಿಂದ ಚಿಕಿತ್ಸೆಯನ್ನು ಪಡೆಯಬೇಕು ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.

Contact Your\'s Advertisement; 9902492681

ಪ್ರತಿಯೊಬ್ಬರು ಅವಸರದ ಜೀವನ ನಡೆಸುತ್ತಿರುವದರಿಂದ ಹಾಗೂ ಧೂಮಪಾನ, ಮಧ್ಯಪಾನ ದುಶ್ಚಟಗಳಿಗೆ ಬಲಿಯಾಗುತ್ತಿರುವದರಿಂದ ಆರೋಗ್ಯದ ಬಗ್ಗೆ ಯಾವು ಗಮನಕೊಡುತ್ತಿಲ್ಲಾ ಇದ್ದರಿಂದಾಗಿ ಅನೇಕ ರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ. ವೈದ್ಯರು ಹೇಳಿದ ಮಾತುಗಳಿಗೆ ಗಮನಕೊಟ್ಟು ಸಲಹೆ ಪಡೆಯಬೇಕು ಈಗಿನ ತಂತ್ರಜ್ಞಾನದಲ್ಲಿ ದೇಶ ಮುಂದುವರೆಯುತ್ತಿದೆ. ಆಸ್ಪತ್ರೆಗಳ ಸೌಲಭ್ಯ ಸಾಕಷ್ಟು ಇವೆ ಯಾರು ರೋಗಗಳಿಗೆ ನಿರ್ಲಕ್ಷ ಮಾಡಬಾರದೆಂದು ಹೇಳಿದರು.

ಈ ಮೇಳದಲ್ಲಿ 121 ರೋಗಿಗಳನ್ನು ತಪಾಸಣೆ ಮಾಡಿ ಕೆಲವು ಸಲಹೆಗಳನ್ನು ತಪಾಸಣೆ ವೇಳೆಯಲ್ಲಿ ಮೇಳದಲ್ಲಿ ಭಾಗವಹಿಸಿದಂತ ಗ್ರಾಮಸ್ಥರಿಗೆ ಹೇಳಿದರು. ಅಂಗನವಾಡಿ ಕಾರ್ಯಕರ್ತೆಯರು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here