ದೀನದಯಾಳರಿಗೆ ದೇಶದ ರಾಜಕೀಯ ಚಿತ್ರವನ್ನೇ ಬದಲಾಯಿಸುವ ಶಕ್ತಿಯಿತ್ತು: ಮತ್ತಿಮಡು

0
80

ಶಹಾಬಾದ: ನಗರದ ಬಿಜೆಪಿ ಮಂಡಲ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ದೀನದಯಾಳ ಉಪಾಧ್ಯಾಯ ವರ ಜನ್ಮ ದಿನ ಕಾರ್ಯಕ್ರಮವನ್ನು ಆಚರಿಸಲಾಯಿತು.

ಬಿಜೆಪಿ ಮುಖಂಡ ಕನಕಪ್ಪ ದಂಡಗುಲಕರ್ ಮಾತನಾಡಿ, ದೀನದಯಾಳರು ಸಂಘಟಿಕರಾಗಿ, ಸಂಘದ ಪ್ರಚಾರಕರಾಗಿ, ಜನಸಂಘದ ಪದಾಧಿಕಾರಿಯಾಗಿಯೂ, ಸಂಘಟನಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.ದೀನ ದಯಾಳರ ಕಾರ್ಯಶೈಲಿಯನ್ನು ನೋಡಿದ ಡಾ.ಶ್ಯಾಮ ಪ್ರಸಾದ ಮುಖರ್ಜಿಯವರು ನನಗೆ ಇಂತಹ ಇನ್ನಿಬ್ಬರು ದೀನದಯಾಳರು ಸಿಕ್ಕರೆ ದೇಶದ ರಾಜಕೀಯ ಚಿತ್ರವನ್ನೇ ಬದಲಾಯಿಸುತ್ತೆನೆ ಎಂದಿದ್ದರು.

Contact Your\'s Advertisement; 9902492681

ಈ ದೇಶದ ರಾಜಕೀಯದ ಬಗ್ಗೆ ಚಿಂತನೆ ಮಾಡಿ ಏಕತಾ ಮಾನವತಾವಾದ ಪುಸ್ತಕ ಬರೆದಿದ್ದರು.ಅಖಂಡ ಭಾರತವನ್ನು ಬಲಪಡಿಸಬೇಕೆಂದು ದಿನದ ಹೆಚ್ಚಿನ ಸಮಯವನ್ನು ಜನಸಂಘದ ಬಗ್ಗೆ ಚಿಂತಿಸಿದವರು. ಕೊನೆಗೆ ದೇಶಕ್ಕಾಗಿಯೇ ತನ್ನ ಪ್ರಾಣವನ್ನು ತ್ಯಾಗಮಾಡಿದರು. ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ನಾವೆಲ್ಲ ಕಾರ್ಯಕರ್ತರು ಅನುಸರಿಸಬೇಕೆಂದು ಹೇಳಿದರು.

ಜಯಶ್ರೀ ಸೂಡಿ, ಜ್ಯೋತಿ ಶರ್ಮಾ, ಶಶಿಕಲಾ ಸಜ್ಜನ್, ನೀಲಗಂಗಮ್ಮ ಘಂಟ್ಲಿ, ಲತಾ ಸಂಜೀವ, ಮಹಾದೇವ ಗೊಬ್ಬೂರಕರ್,ಚಂದ್ರಕಾಂತ ಗೊಬ್ಬೂರಕರ, ಡಿ.ಸಿ.ಹೊಸಮನಿ, ಶರಣು ವಸ್ತ್ರದ, ರಾಜು ಕುಂಬಾರ, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಭೀಮರಾವ ಸಾಳೂಂಕೆ, ಅರುಣ ಪಟ್ಟಣಕರ,ಸುಭಾಷ ಜಾಪೂರ,ನಾಗರಾಜ ಮೇಲಗಿರಿ, ಬಸವರಾಜ ಬಿರಾದಾರ, ರವಿ ರಾಠೋಡ, ಚಂದ್ರಕಾಂತ ಸುಭೆದಾರ, ಭೀಮಯ್ಯ ಗುತ್ತೆದಾರ, ಸೂರ್ಯಕಾಂತ ವಾರದ, ದತ್ತು ಘಂಟಿ, ಸಂಜಯ ವಿಠಕರ್,ಮರ ಕೋರೆ, ಸಾಯಿಬಣ್ಣ ಬೆಳಗುಂಪಿ,ಮೋಹನ ಘಂಟ್ಲಿ, ಸಂದೀಪ ಹದನೂರ್, ಶ್ರೀನಿವಾಸ ನೇದಲಗಿ,ನಾರಾಯಣ ಕಂದಕೂರ, ಯಲ್ಲಪ್ಪ ದಂಡಗುಲಕರ್,ವಿಶ್ವರಾಧ್ಯಸ್ವಾಮಿ ಜೀವಣಗಿ, ಅಪ್ಪಾರಾವ ನಾಗಶೆಟ್ಟಿ, ರಾಜು ದಂಡಗುಲಕರ್ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here