ಸುರಪುರ ನಾಡಹಬ್ಬ ಆಚರಣೆ:ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಯಕ್ಷಗಾನ ಪ್ರದರ್ಶನ

0
20

ಸುರಪುರ:ಇಲ್ಲಿಯ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ನಡೆಯುತ್ತಿರುವÀ 36ನೇ ನಾಡ ಹಬ್ಬ ಉತ್ಸವ ಆಚರಣೆಯ ಸಮಾರಂಭದಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಶರಣಬಸವ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ಯಕ್ಷಗಾನ, ನವ ದುರ್ಗೆಯ ಮಹಿಷಾ ಮರ್ಧನ ನೃತ್ಯ ಹಾಗೂ ನಾಡು ನುಡಿ ಸಂಸ್ಕøತಿ ಬಗೆಗಿನ ನೃತ್ಯಗಳನ್ನು ಅದ್ಭುತವಾಗಿ ಪ್ರದರ್ಶನ ನೀಡಿದರು.

ಅಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ಶರಣಬಸಪ್ಪ ಸಾಲಿ ಪ್ರಾಂಶುಪಾಲರು ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಸುರಪುರ ಇವರು ಸಂಸ್ಥೆಯ ವತಿಂದ ಅದ್ಭುತವಾದ ಕಾರ್ಯಕ್ರಮ ಆಯೋಜನೆಗೆ ಕಾರಣರಾಗಿರುವ ರಾಜಾಮುಕುಂದ ನಾಯಕ ಅಧ್ಯಕ್ಷರು ನಾಡ ಹಬ್ಬ ಉತ್ಸವ ಸಮಿತಿ ಹಾಗೂ ಬಸವರಾಜ ಜಮದ್ರಖಾನಿ ಅಧ್ಯಕ್ಷರು ಕನ್ನಡ ಸಾಹಿತ್ಯ ಸಂಘ, ಸುರಪುರ ಇವರಿಗೆ ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಈ ಎಲ್ಲಾ ಮಕ್ಕಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಶರಣಬಸವಪ್ಪ ಅಪ್ಪಾ, ಕಾರ್ಯದರ್ಶಿಗಳಾದ ಶರಣಬಸಪ್ಪ ವ್ಹಿ ನಿಷ್ಠಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ.ಎಸ್.ನಿಷ್ಠಿ, ಪ್ರಾಂಶುಪಾಲರಾದ ಶಿವಾನಂದ ಹವಶೆಟ್ಟಿ, ಸಿಬ್ಬಂದಿ ವರ್ಗದವರು ಹಾಗೂ ಈ ಕಾರ್ಯಕ್ರಮಕ್ಕೆ ಬಂದಿರುವ ಸಮಸ್ತ ಸುರಪುರ ನಗರದ ಹಾಗೂ ಗ್ರಾಮೀಣ ಭಾಗದ ಜನರು, ಪಾಲಕ,ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here