ಮಾದ್ಯಮ ಕ್ಷೇತ್ರದಲ್ಲಿ ಬಣಗಾರ ಕೊಡುಗೆ ಅಪಾರ: ಬಣಗಾರ ಸಮಾಜದಿಂದ ಸನ್ಮಾನ

1
171

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆಶಂಕರಲಿಂಗ ದೇವಸ್ಥಾನ ಟ್ರಸ್ಟ್ ವತಿಯಿಂದ ಇಂದು ಬುಧವಾರ ಬೆಳಿಗ್ಗೆ ಮಾಧ್ಯಮ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಮುಖ್ಯಮಂತ್ರಿಯಿಂದ ಸನ್ಮಾನಿತಗೊಂಡಿರುವ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರು ಆದ ಸುಭಾಷ್ ಬಣಗಾರ ಅವರಿಗೆ ಸಮಾಜದ ಮುಖಂಡರು ಅವರ ಮನೆಯಲ್ಲಿ ಗೃಹ ಸನ್ಮಾನ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರಾದ ಆನಂದ ದಂಡೋತಿ ಅವರು, ನಮ್ಮ ಸಮಾಜದಲ್ಲಿ ಅನೇಕರು ಎಲೆ ಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲಿದ್ದು ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ಬಣಗಾರ ಅವರ ಮನೆಯಲ್ಲಿ ಅವರ ಕುಟುಂಬ ಸಮೇತ ಸನ್ಮಾನಿಸಲಾಗಿದೆ. ಇದು ಅವರು ಸಾಮಾಜಿಕ ಹಾಗೂ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಯಶಸ್ವಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದರು.

Contact Your\'s Advertisement; 9902492681

ಬಣಗಾರ ಅವರು ಕೇವಲ ಮುದ್ರಣ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಮಾಧ್ಯಮ ಕ್ಷೇತ್ರದ ದೂರದರ್ಶನ, ಆಕಾಶವಾಣಿ, ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಉಪನ್ಯಾಸಕರಾಗಿ ತಮ್ಮದೇ ಆದ ಪ್ರಾಮಾಣಿಕ ಸೇವೆಯೊಂದಿಗೆ ಗುರುತಿಸಿಕೊಂಡು, ರಾಜ್ಯ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪಡೆದಿರುವುದು ನಮ್ಮೆಲ್ಲರಿಗೂ ಸಂತಸವನ್ನುಂಟು ಮಾಡಿದೆ ಎಂದರು.

ಬಣಗಾರ‌‌ ಅವರ ಕುಟುಂಬದ ಹಲವಾರು ಜನರು ಮಾದ್ಯಮ ಕ್ಷೇತ್ರದಲ್ಲಿ ತೊಡಗಿದ್ದನ್ನೂ ಅವರು ಶ್ಲಾಘಿಸಿ, ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಬಗ್ಗೆ ಇವರಿಗೆ ಇರುವ ಕಾಳಜಿ ತೋರಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರ ಮಾಧ್ಯಮ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ನಾಗಲೀಕರ್ ಕುಟುಂಬದವರನ್ನು ಕೂಡ ಸಮಾಜದ ವತಿಯಿಂದ ಗೌರವಿಸಿ ಸನ್ಮಾನಿಸಿದರು.

ಸಮಾಜದ ಮುಖಂಡರಾದ ನಾಗಪ್ಪ ರೋಣದ, ವೀರಪ್ಪ ಉಡಚಣ, ರವಿ ದಂಡೋತಿ, ಸಿದ್ದಣ್ಣ ಕಮರಡಗಿ, ಶಾಂತಪ್ಪ ಘೂಳಿ, ಗಾಳೆಪ್ಪ ದೊಡ್ಡಮನಿ, ರವಿ ನಿಂಬರ್ಗಿ, ಸೇರಿದಂತೆ ಕುಟುಂಬದ ಸದಸ್ಯರು ಭಾಗವಹಿಸಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here