ಜೆಡಿಎಸ್ ಕಚೇರಿ: ದಿ. ಎನ್. ಮಿರಾಜುದ್ದೀನ್ ಪಟೇಲ್ 14ನೇ ಪುಣ್ಯಸ್ಮರಣೆ ದಿನ | ಮುಖಂಡರ ಸಂಕಲ್ಪ

0
14

ಕಲಬುರಗಿ: ನಗರದ ಜಿಲ್ಲಾ ಜಾತ್ಯತೀತ ಜನತಾ ದಳ ಕಚೇರಿಯಲ್ಲಿ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಸೇರಿ ಮಾಜಿ ಸಚಿವರು ದಿವಂಗತ ಎನ್. ಮಿರಾಜುದ್ದೀನ್ ಪಟೇಲ್ ಅವರ 14ನೇ ಪುಣ್ಯಸ್ಮರಣೆ ಆಚರಣೆ ಮಾಡಿ ಅನೇಕ ಮುಖಂಡರು ಪಟೇಲ್‍ರ ಕಾರ್ಯಸಾಧನೆ ಪಕ್ಷ ನಿಷ್ಠೆ ಕೊಂಡಾಡಿದರು.

ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್ ಮಾತನಾಡಿ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಜಾತ್ಯತೀತ ಜನತಾದಳ ಪಕ್ಷ ಕಟ್ಟಿ ರಾಷ್ಟ್ರಮಟ್ಟದಲ್ಲಿ ಅಧಿಕಾರ ನಡೆಸಿ ಲಕ್ಷಾಂತರ ಕಾರ್ಯಕರ್ತರನ್ನು ಬೆಳಸಿದ್ದಾರೆ. ಮಾದರಿಯಾಗುವ ನೀರಾವರಿ ಆರ್ಥಿಕ ಸಬಲೀಕರಣ ರೈತರ ಪರ ಬಡವರ ಕಾರ್ಯಕ್ರಮ ರೂಪ ಗೊಂಡಿವೆ ರಾಜ್ಯದ ರಾಜಕಾರಣಕ್ಕೆ ಉತ್ತಮ ಜನಪರ ರೈತ ಪರ ಆಡಳಿತ ನೀಡಿದ ಶೈಷಿತ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು 2023ಕ್ಕೆ ಕುಮಾರಣ್ಣ ಮತ್ತೊಮ್ಮೆ ಜನರ ನಿರೀಕ್ಷೆದ ಮೇರೆಗೆ ತಳಮಟ್ಟದಿಂದ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಪ್ರತಿ ತಾಲೂಕ ಮಟ್ಟದಲ್ಲಿ ಜೆಡಿಎಸ್ ಪಕ್ಷದ ಸಂವಿಧಾನ ಇತಿಹಾಸ ಪಕ್ಷ ಸಂಘಟನೆ ಕುರಿತು ಅಧ್ಯಯನ ಶಿಬಿರ ನಡೆಸಲು ಕಾರ್ಯಕ್ರಮ ರೂಪಿಸಬೇಕು ನವಂಬರ್ 1 2002 ರಂದು ಆರಂಭ ವಾಗಲಿರುವ ಪಂಚರತ್ನ ಕಾರ್ಯಕ್ರಮ ಹಳ್ಳಿಹಳ್ಳಿಗಳಲ್ಲಿ ಪಂಚರತ್ನ ಕಾರ್ಯಕ್ರಮ ರೂಪಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಕಾರ್ಯಕ್ರಮ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸದೃಢರಾಗಬೇಕೆಂದು ತಡಕಲ್ ಹೇಳಿದರು.

Contact Your\'s Advertisement; 9902492681

ಈ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಮೇಹಮೂದ್ ಖುರೇಶಿ ಅವರು ವಹಿಸಿದರು. ಮಹಾನಗರ ಪಾಲಿಕೆ ಸದಸ್ಯ ಅಲಿಮೋದ್ದಿನ್ ಪಟೇಲ್, ಹಿರಿಯ ಮುಖಂಡರಾದ ಶಾಮರಾವ ಸೂರನ, ಬಸವರಾಜ ಬಿರಬಿಟ್ಟಿ, ಮಲ್ಲಿಕಾರ್ಜುನ ಸಂಗಾಣಿ, ರಾಮಚಂದ್ರ ಅಟ್ಟೂರ, ಅಲಿಂ ಇನಾಮ್ದಾರ್, ಶಂಕರಕಟ್ಟಿ ಸಂಗಾವಿ, ಶಿವಾನಂದ ದ್ಯಾಮಗೊಂಡ, ಮನೋಹರ ಪೂದ್ದಾರ, ಹಣಮಂತ ಸನಗುಂದಿ, ಡಾ. ಸಿದ್ದಣ್ಣ ಪಾಟೀಲ್, ಸಾಜಿದ ಕಲ್ಯಾಣಿ, ಚಾಂದ ಪಾಷಾ, ಸುನಿತಾ ಕೊರವಾರ, ಮಹಾನಂದ ಪಡಶೆಟ್ಟಿ, ಮಾಣಿಕ ಶಾಪುರಕರ, ಮಾಂತಪ್ಪ ಮದುರಿ, ಹಣಮಂತ ಕಂದಳ್ಳಿ, ವಿದ್ಯಾಧರ ಹುಗಿ,್ಗ ಹನುಮಯ್ಯ ಗುತ್ತೇದಾರ್, ನರಸಯ್ಯ ಗುತ್ತೇದಾರ, ಶಿವಲಿಂಗಪ್ಪ ಪಾಟೀಲ್, ಮರಲಿಂಗಪ್ಪ ಕಿಣಿಕೇರಿ, ಮಂಜೂರು ಪಟೇಲ್, ವಲಸನಕುಮಾರ, ಸುವರ್ಣ ಜವಳಿ, ಪರ್ವೀನ್ ಅತ್ತಾರ್, ನಾಡಗೌಡ, ಯೇಸು ತಾರಫೈಲ್, ವಿಜಯಕುಮಾರ ಚಿಂಚನಸೂರ್, ನಾಗಯ್ಯ ಸ್ವಾಮಿ ಚಿತ್ತಾಪುರ, ಜೇಮ್ ಸಿಂಗ್ ಚೌವ್ಹಾಣ, ಮಾರುದ್ರ ಚೌವ್ಹಾಣ, ನಾಗೇಶ ಲಕ್ಕಿ, ಶ್ರೀನಿವಾಸ ನಾಡೆಪಲ್ಲಿ, ಜಾಕಿರಹುಸೇನ್, ಸುನೀಲ ಗಾಜರೆ ಇದ್ದರು. ನಂತರ ಎಲ್ಲಾ ಮುಖಂಡರು ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಲು ನಿರ್ಣಯ ಕೈಗೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here