ಶಂಕ್ರಯ್ಯ ಆರ್. ಘಂಟಿ ಅವರ ನಮ್ ಸಾಲಿ ಪುಸ್ತಕ ಲೋಕಾರ್ಪಣೆ

0
69

ಕಲಬುರಗಿ: ಗ್ರಾಮೀಣ ಪ್ರದೇಶದಲ್ಲಿ ಕಮ್ಮಾರ ಸಾಲಿ, ಕುಂಬಾರ ಸಾಲಿ, ಉಪ್ಪಿಟ್ಟು ಸಾಲಿ ಪಡಸಾಲಿಗಳಂತಹ ಬಹು ಶಾಲೆಗಳಿದ್ದು, ನಗರದವರಿಗೆ ಕೇವಲ ಸ್ಕೂಲ್ ಮಾತ್ರ ಇದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಬಾ ಸಾಹೇಬ ಲೋಕಾಪುರ ಅಭಿಪ್ರಾಯಪಟ್ಟರು.

ನಗರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆವರಣದಲ್ಲಿರುವ ರಂಗಾಯಣ  ಸಭಾಂಗಣದಲ್ಲಿ ಜನರಂಗ ಕಲಬುರ್ಗಿ ಭಾನುವಾರ ಆಯೋಜಿಸಿದ್ದ ಶಂಕ್ರಯ್ಯ ಆರ್. ಘಂಟಿ ಅವರ ನಮ್ ಸಾಲಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಗಂಗ್ಯಾ ಅನ್ನುವ ಹುಡುಗಗಂಗಾಧರ  ಆಗಿ ಬೆಳೆಯುವ ಪ್ರಕ್ರಿಯೆ ಈ ಕಾದಂಬರಿಯ ವಸ್ತು ವಿಷಯವಾಗಿದ್ದು, ಗಂಗ್ಯಾ ಗಂಗಾಧರ ಆಗಿ ಬೆಳೆಯುವ ಈ ಗ್ಯಾಪ್‍ನಲ್ಲಿ ಗಂಗ್ಯಾತನ್ನ ಮನಸ್ಸಿನ ಸತ್ಯ ಹಾಗೂ  ಲೋಕ ಸತ್ಯದೊಂದಿಗೆ (ಧ್ವಂದ್ವ) ಬಾಳುವ, ಬೆಳೆಯುವ ಪರಿಯನ್ನು ಈ ಕಾದಂಬರಿ ಬಹಳ ಅಚ್ಚುಕಟ್ಟಾಗಿ ತಿಳಿಸಿಕೊಡುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಶ್ರವ್ಯ ಪಠ್ಯ ಪರಂಪರೆಯ ಈ ಕಾದಂಬರಿಯು ಸ್ಥಳೀಯ ಚರಿತ್ರೆಕಟ್ಟಿಕೊಡುವುದರಜೊತೆಗೆಇದು ನಮ್ಮೆಲ್ಲರ ಸಾಲಿ ಎನ್ನುವಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ.ಯಾವುದೇಒಂದು ಸೃಜನಶೀಲ ಕೃತಿಯಿಲ್ಲಿ ಮೌನ, ಪಿಸುಮಾತುಇರಬೇಕುಎನ್ನುವಂತೆ ಈ ಕೃತಿಯಲ್ಲಿ ಆ ಗ್ಯಾಪ್‍ಕಂಡು ಬರುತ್ತದೆ.ಆ ಮೂಲಕ ಇದೊಂದುಉತ್ತಮಕಾದಂಬರಿಯಾಗಿ ಹೊರ ಹೊಮ್ಮಿದೆಎಂದುಅವರು ತಿಳಿಸಿದರು.

ಕೃತಿಕುರಿತುಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವಡಾ.ಅಜೀಮ್ ಪಾಶಾ ಮಾತನಡಿ, ಕಲ್ಯಾಣಕರ್ನಾಟಕದ ಹಳ್ಳಿ ಭಾಷೆಯ ಸೊಗಡಿನೊಂದಿಗೆತುಂಬಿ ತುಳುಕಾಡುತ್ತಿರುವ ಈ ಕಾದಂಬರಿಯು ಹಿಂದಿನ ಶಿಕ್ಷಣ ಪದ್ಧತಿ ಮತ್ತು ಇಂದಿನ ಶಿಕ್ಷಣ ಪದ್ಧತಿಯಕುರಿತು ಹೇಳುವುದರ ಜೊತೆಗೆ ನಮ್ಮಅರಿವು ಮತ್ತುಅನುಭವದ ಮುಂದೆ ಈಗಿನ ಶಿಕ್ಷಣ ಪದ್ಧತಿಯಾವ ಲೆಕ್ಕ?ಎಂಬುದನ್ನುಚಿತ್ರಿಸುತ್ತದೆ.ಕನ್ನಡದಡ್ರಾಮೆಟಿಕ್ ನಾವಲೆಗಳಿಗೆ ಈ ಕೃತಿ ನಾಂದಿ ಹಾಡಿದಂತಿದೆಎಂದು ತಿಳಿಸಿದರು.

ಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದಡಾ.ಶಿವಗಂಗಾ ರುಮ್ಮಾಅಧ್ಯಕ್ಷತೆ ವಹಿಸಿದ್ದರು. ಹಿರಿಯಕಲಾವಿದಡಾ. ವಿ.ಜಿ. ಅಂದಾನಿ, ಪತ್ರಕರ್ತ ಪಿಎಂ.ಮಣ್ಣೂರ, ವೈದ್ಯ ಸಾಹಿತಿಡಾ.ಎಸ್.ಎಸ್. ಗುಬ್ಬಿ ವೇದಿಕೆಯಲ್ಲಿದ್ದರು.ಇದೇವೇಳೆಯಲ್ಲಿ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಬಾಬುರಾವಎಚ್‍ಅವರನ್ನು ಸನ್ಮಾನಿಸಲಾಯಿತು.ಡಾ. ರಾಜಕುಮಾರ ಮಾಳಗೆ ನಿರೂಪಿಸಿದರು.

ಶಂಕ್ರಯ್ಯಆರ್.ಘಂಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಹ್ಮದ್‍ಅಯಾನ್, ಅಹಮ್ದ್‍ಅಮಾನ್ ಪಾಶಾ ಪ್ರಾರ್ಥನೆಗೀತೆ ಹಾಡಿದರು.ಡಾ.ಕೆ.ಎಂ. ಕುಮಾರಸ್ವಾಮಿ ವಂದಿಸಿದರು.ಶಿವಶರಣಪ್ಪ ಮೂಳೆಗಾಂವ, ಶಾಂತಾ ಭೀಮಸೇನರಾವ, ಸಿದ್ಧರಾಮ ಹೊನ್ಕಲ್, ಪ್ರಭುಲಿಂಗಜುಮ್ಮಣ್ಣ, ರಾಜಶೇಖರ ಪೋತ್ದಾರ, ಡಾ. ಪಿ. ಪರುಶುರಾಮ, ಬಿ.ಎಚ್.ನಿರಗುಡಿ, ಸಂಗಯ್ಯ ಸ್ವಾಮಿ ಹಳ್ಳದಮಠ, ಸಂದ್ಯಾ ಹೊನಗುಂಟಿಕರ್, ಡಾ. ಸ್ವಾಮಿರಾವಕುಲಕರ್ಣಿಇನ್ನಿತರರಿದ್ದರು.

ನಮ್ಮ ಶಿಕ್ಷಣ ಪದ್ಧತಿ ಹಾಗೂ ಬದುಕುವ ಅನಿವಾರ್ಯತೆ ಈ ಎರಡೂ ವಿಷಯಗಳಿಗಾಗಿ ಕಾದಂಬರಿ ಬಹಳಷ್ಟು ಪ್ರಸ್ತುತ ಅನಿಸುತ್ತದೆ. ಕಾದಂಬೆರಿಕ್ಲೈಮ್ಯಾಕ್ಸ್‍ಕೂಡತುಂಬಾಚೆನ್ನಾಗಿದೆ.ಒಂದು ನಿಳ್ಗತೆಯಾಗಿ ಕಾದಂಬರಿ ಸಂಪುರ್ಣ ಯಶಸ್ವಿಯಾಗಿದೆ.ಕಾದಂಬರಿಯಾಗಿಇನ್ನಷ್ಟು ಸತ್ವಯುತವಾಗಿರಬೇಕು. ಸಿನಿಮಾ ಆಬೇಕಾದರೆ ಮತ್ತಷ್ಟುಟ್ರಿಮ್‍ಆಗಬೇಕಾಗುತ್ತದೆ.ಕೋಮುಸಾಮರಸ್ಯಕಾಪಾಡಬೇಕು ಎಂಬ ಇರಾದೆ ಹೊಂದಿರುವ ಈ ಕೃತಿಯುಕೋಮಸಾಮರಸ್ಯವನ್ನು ಬಿಂಬಿಸುವಂತಿದೆ. -ಡಾ. ಶಿವಗಂಗಾ ರುಮ್ಮಾ, ಕನ್ನಡ ಪ್ರಾಧ್ಯಾಪಕರು, ಸಿಯುಕೆ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here