ಜನರನ್ನು ಒಗ್ಗೂಡಿಸುವಲ್ಲಿ ಕಲಾವಿದರ ಪಾತ್ರ ಮಹತ್ವದಾಗಿದೆ | ಎರಡು ದಿನಗಳ ಇಸ್ಲಾಮಿಕ್ ಕಲಾ ಪ್ರದರ್ಶನಕ್ಕೆ ಚಾಲನೆ

0
78

ಕಲಬುರಗಿ: ಜನರನ್ನು ಒಗ್ಗೂಡಿಸುವಲ್ಲಿ ಕಲಾವಿದರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶೇಖ್ ಸಿರಾಜುದ್ದೀನ್ ಜುನೈದಿ ದರ್ಗಾ ಸಜ್ಜಾದ ನಶೀನ್ ಮಹಮ್ಮದ್ ಅಫಜಲುದ್ದೀನ್ ಜುನೈದಿ ಹೇಳಿದರು.

ಕಲಬುರಗಿ ನಗರದ ಹಿದಾಯತ್ ಸೆಂಟರ್ನಲ್ಲಿ ಭಾನುವಾರ ನಡೆದ ಮೀಲಾದ್-ಉನ್-ನಬಿ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನ) ಪ್ರಯುಕ್ತ ಎರಡು ದಿನಗಳ ಇಸ್ಲಾಮಿಕ್ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ಮಿನಾಕ್ಷಿ ಬಾಳಿ ಮಾತನಾಡಿ, ಕಲಾವಿದರು, ಸಾಹಿತಿಗಳು, ಚಿಂತಕರು ರಾಷ್ಟ್ರದ ಮೇಲೆ ಜವಾಬ್ದಾರಿ ಹೊಂದಿದ್ದಾರೆ. ದುರಾಡಳಿತದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದರು. ಖ್ಯಾತ ಕಲಾವಿದ ಡಾ.ಎ.ಎಸ್.ಪಾಟೀಲ್ ಕೂಡ ಇಸ್ಲಾಮಿಕ್ ಕಲೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಚಿತ್ರಗಳು ಮಾನವೀಯತೆಯ ಸಂದೇಶವನ್ನು ನೀಡುತ್ತವೆ ಎಂದರು. ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞÂ ವಿವಿಧತೆಯಲ್ಲಿ ಏಕತೆ ಕುರಿತು ಉಪನ್ಯಾಸ ನೀಡಿದರು.

ಪ್ರದರ್ಶನದ ಸಂಚಾಲಕ ಹಾಗೂ ಖ್ಯಾತ ಕಲಾವಿದ ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ವಿವಿಧ ಸಮುದಾಯದ ಕಲಾವಿದರನ್ನು ಒಗ್ಗೂಡಿಸಿ ತಮ್ಮ ಅಭಿಪ್ರಾಯಗಳನ್ನು ಚಿತ್ರಕಲೆಗಳ ಮೂಲಕ ವ್ಯಕ್ತಪಡಿಸಲು ಪ್ರಯತ್ನಿಸಿದ್ದೇವೆ ಎಂದರು.
ರಾಜ್ಯಾದ್ಯಂತ ಸುಮಾರು 24 ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ವೀಕ್ಷಕರೊಂದಿಗೆ ಸಂವಾದ ನಡೆಸಿದ್ದಾರೆ. ಸ್ಮಾರಕಗಳು, ಕ್ಯಾಲಿಗ್ರಪಿ,ü ಸಾಮಾಜಿಕ-ಸಾಂಸ್ಕøತಿಕ-ಮಾನವೀಯತೆಯ ಸಂದೇಶಗಳು ಮತ್ತು ಕುರಾನ್ನ ಪದ್ಯಗಳನ್ನು ಆಧರಿಸಿದ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ಸುಬ್ಬಯ್ಯ ನೀಲಾ, ರಾಜಶೇಖರ್ ಎಸ್, ವಾಜಿದ್ ಸಾಜಿದ್, ಟಿ ದೇವೇಂದ್ರ, ಹಾಜಿ ಮಲಾಂಗ್, ರೆಹಮಾನ್ ಪಟೇಲ್, ಮೊಹಮ್ಮದ್ ಸೈಯದ್ ಶೋಬ್, ಶಾಹೆದ್ ಪಾμÁ, ಶೇಕ್ ಅಹ್ಸಾನ್, ಹಜರತ್ ಅಲಿ, ಸಲೀಮುದ್ದೀನ್, ಶಫಿ ಮಶಲ್ಕರ್, ಮಹಮ್ಮದ್ ಜಲೀಲ್, ಖಾಸಮ್ಮದ್ ರಯೀಸ್ ಈ ಸಂದರ್ಭದಲ್ಲಿ ಜಲಜಾಕ್ಷಿ ಕುಲಕರ್ಣಿ, ಉಜ್ವಲಾ ಪಾಟೀಲ್, ಸೈಯದ್ ಮುಸ್ತಫಾ, ಕೆಹಕಶನ್ ನಜನೀನ್, ಶಾಹೀನ್ ಫಾತಿಮಾ, ಸಲ್ಮಾ, ಲಕ್ಷ್ಮೀ ಪೊದ್ದಾರ್ ಮತ್ತು ಕವಿತಾ ಕಟ್ಟೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.

ಪ್ರದರ್ಶನವು ಸಾರ್ವಜನಿಕರಿಗೆ ಅಕ್ಟೋಬರ್ 10 ರವರೆಗೆ, ಬೆಳಿಗ್ಗೆ 11 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here