ಎಸ್ಸಿ-ಎಸ್.ಟಿ ಮೀಸಲಾತಿ ಹೆಚ್ಚಳ ಸ್ವಾಗತಾರ್ಹ

0
18

ಕಲಬುರಗಿ: ರಾಜ್ಯದ ಮುಖ್ಯಮಂತ್ರಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿದ್ದು ಸ್ವಾಗತಾರ್ಹ ಎಂದು ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೊರ್ಚಾದ ಜಿಲ್ಲಾ ಸಂಯೋಜಕರಾದ ಅವ್ವಣ್ಣ ಮ್ಯಾಕೇರಿ ತಿಳಿಸಿದರು.

ಸುಮಾರು 240 ದಿನಗಳಿಂದ ವಾಲ್ಮೀಕಿ ಸಮುದಾಯದಗುರುಗಳಾದ ಪ್ರಸನ್ನಾನಂದ ಸ್ವಾಮೀಜಿಯವರ ಹೋರಾಟದ ಫಲವಾಗಿ ಇಂದು 50 ಜಾತಿಗಳಿರುವ ಪರಿಶಿಷ್ಟ ಪಂಗಡದ ಬಹು ದಿನದ ಬೇಡಿಕೆಯಾದ ಮೀಸಲಾತಿಯನ್ನುಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರು ಎಸ್.ಸಿಯ ಶೇ. 2 ಹಾಗೂ ಎಸ್.ಟಿಯ ಶೇ. 4ರಷ್ಟು ಮೀಸಲಾತಿ ಹೆಚ್ಚಿಸಿದಕ್ಕೆ ಸರ್ವ ಹಿಂದುಳಿದ ವರ್ಗಗಳಿಂದ ಅವರಿಗೆಅಭಿನಂದನೆ ತಿಳಿಸುತ್ತೇನೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಅದೇರೀತಿಯಾಗಿ ತಳವಾರ ಸಮುದಾಯದ ಮುಖಂಡರು, ಜನತೆ ಅನೇಕ ದಿನಗಳಿಂದ ಎಸ್.ಟಿಜಾತಿ ಪ್ರಮಾಣ ಪತ್ರ ವಿತರಿಸುವಂತೆ ಹೋರಾಟ ಮಾಡುತ್ತಿದ್ದು, ಈ ಹಿಂದೆ ತಳವಾರ ಸಮುದಾಯಕ್ಕೆಎಸ್.ಟಿಜಾತಿ ಪ್ರಮಾಣ ಪತ್ರ ವಿತರಿಸುವುದನ್ನುತಾಂತ್ರಿಕ ದೋಷಗಳಿಂದ ತಡೆಹಿಡಿದಿದ್ದು, ಮುಂಬರುವಚುನಾವಣೆ ಒಳಗಾಗಿ ಆ ಸಮುದಾಯಕ್ಕೆಎಸ್.ಟಿಜಾತಿ ಪ್ರಮಾಣ ಪತ್ರಒದಗಿಸುವ ಪ್ರಯತ್ನ ಮಾಡಲಾಗುತ್ತದೆಎಂದು ತಿಳಿಸಿದರು. ಬಸವರಾಜ ಸಪ್ಪನಗೋಳ, ರಾಘವೇಂದ್ರಕುಲಕರ್ಣಿ, ಗೀರೀಶಎಲ್.ಭಜಂತ್ರಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here