ಗೊಂಡ ಸಮುದಾಯ ಎಸ್.ಟಿಗೆ ಸೇರಿಸಲು ಒತ್ತಾಯ

0
8

ಕಲಬುರಗಿ: ಬೀದರ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿರುವ ಗೊಂಡ ಸಮುದಾಯವನ್ನು ಕುರುಬ ಎಂದು ಪರಿಗಣಿಸಿ ಎಸ್‍ಟಿಗೆ ಸೇರ್ಪಡೆ ಮಾಡಬೇಕು ಎಂದು ಗೊಂಡ ಕುರುಬ ಎಸ್.ಟಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಮಹಾಂತೇಶ ಎಸ್. ಕೌಲಗಿ ಒತ್ತಾಯಿಸಿದರು.

ಈ ಕುರಿತು 1996 ರಲ್ಲಿ ಬೀದರ್‍ಜಿಲ್ಲೆಗೆ ಸಂಬಂಧಿಸಿದಂತೆ ಮತ್ತು 1997 ಅವಿಭಜಿತ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ಅಂದಿನ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಅದೇ ರೀತಿಯಾಗಿ ಧಾರವಾಡ ವಿಶ್ವವಿದ್ಯಾಲಯದಿಂದ ಗೊಂಡ ಪರ್ಯಾಯ ಪದ ಕುರುಬ ಇದರ ಕುರಿತು ಕುಲಶಾಸ್ತ್ರೀಯ ಅಧ್ಯಯನವನ್ನು ಮಾಡಿಸಿ, ಪರಿಶಿಷ್ಟ ವರ್ಗಗಳ ಸಂಶೋಧನಾ ಸಂಸ್ಥೆ ಮೈಸೂರುಇವರ ಮುಖಾಂತರ ವರದಿ ಸಿದ್ದಪಡಿಸಿ 2014 ರಲ್ಲಿ ಮತ್ತೊಮ್ಮೆ ಸಚಿವ ಸಂಪುಟದಲ್ಲಿಒಪ್ಪಿಗೆ ನೀಡಿಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಬಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Contact Your\'s Advertisement; 9902492681

ಕೇಂದ್ರಕ್ಕೆ ವರದಿ ಸಲ್ಲಿಸಿದ 8 ವರ್ಷಗಳು ಕಳೆದರೂ ಸಹ ಇದನ್ನುಇನ್ನೂವರೆಗು ಪರಿಗಣೀಸದೆಇದ್ದದ್ದು ಮೂರುಜಿಲ್ಲೆಯಗೊಂಡ ಸಮುದಾಯದಜನರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಈ ಕಾರಣಕ್ಕಾಗಿಇದೇ ನವ್ಹೆಂಬರ, ಡಿಸೆಂಬರ ತಿಂಗಳಲ್ಲಿ ಸಂಸತ್ತುಅಧಿವೇಶನದಲ್ಲಿ ಮೂರುಜಿಲ್ಲೆಯಲ್ಲಿರುವಗೊಂಡ ಪರ್ಯಾಯ ಪದಕುರುಬ ಸಮುದಾಯಎಂದು ಪರಿಗಣಿಸುವಂತೆ ಮುಖ್ಯಂಮತ್ರಿಗಳು ಕೇಂದ್ರದ ಮೇಲೆ ಒತ್ತಡ ಹೇರಬೇಕು.ಇಲ್ಲವಾದರೆ ಮೂರು ಜಿಲ್ಲೆಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆಎಂದು ತಿಳಿಸಿದರು.ಮಲ್ಲಿಕಾರ್ಜುನ ಪೂಜಾರಿ, ನಿಂಗಪ್ಪ ಹೇರೂರ, ಎಸ್. ಎಸ್‍ಕಮಠಾಣ, ರೇವಣಸಿದ್ದಪ್ಪ ಮುಗಟಿ, ಸಿದ್ದಪ್ಪ ರುಸ್ತಾಂಪುರಎಸ್.ಎಸ್‍ಕೆಸರಟ್ಟಿಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here