ನಿವೃತ್ತ ನೌಕರರಿಗೆ ಆರೋಗ್ಯ ಭಾಗ್ಯ ಕಲ್ಪಿಸಿ

0
20

ಕಲಬುರಗಿ : ಸುಮಾರು ಮೂವತ್ತೈದು ವರ್ಷಗಳಿಂದ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿಂಚಣಿದಾರರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿತಲುಪಬೇಕುಎಂದುಕರ್ನಾಟಕರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದಅಧ್ಯಕ್ಷರಾದ ಡಾ.ಎಲ್.ಭೈರಪ್ಪ ಆಗ್ರಹಿಸಿದರು.

ರಾಜ್ಯದಲ್ಲಿ ಸುಮಾರು 4ಲಕ್ಷ 20 ಸಾವಿರ ಪಿಂಚಣಿದಾರರು ಹಾಗೂ 1 ಲಕ್ಷ 50 ಸಾವಿರಕುಟುಂಬ ಪಿಂಚಣೀದಾರರು ಸರ್ಕಾರದಿಂದ ನಿವೃತ್ತಿ ವೇತನ ಪಡೆಯುತ್ತಿದ್ದಾರೆ. ಸಾಲಷ್ಟು ಸರ್ಕಾರಿ ನೌಕರರಿಗೆ ದೀರ್ಘಕಾಲದಆರೋಗ್ಯ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅವರಿಗೆ ಮತ್ತು ಅವರ ಕುಟುಂಬದವರಿಗೆ ಸರ್ಕಾರದಿಂದ ಇದುವರೆಗೂ ನಗದುರಹಿತ ಯಾವುದೇ ಆರೋಗ್ಯ ಭಾಗ್ಯಯೋಜನೆ ಪಡೆದುಕೊಂಡಿಲ್ಲ. ಈ ಯೋಜನೆ ಶೀಘ್ರದಲ್ಲಿ ಅನುಷ್ಠಾನ ಗೊಳಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ಯೋಜನೆಕುರಿತುಕರಡುಯೋಜನೆ ಸಿದ್ಧಪಡಿಸಿ ಅಭಿಪ್ರಾಯಕೋರಿಆರ್ಥಿಕ ಇಲಾಖೆ ಮತ್ತುಆರೋಗ್ಯಕುಟುಂಬ ಕಲ್ಯಾಣ ಇಲಾಖೆಗಳಿಗೆ ಕಡತಗಳನ್ನು ಕಳುಹಿಸಿ ಎರಡರಿಂದ ಮೂರು ತಿಂಗಳಾದರೂ ಇದುವರೆಗೂ ಈ ಇಲಾಖೆಗಳು ತಮ್ಮಅಭಿಪ್ರಾಯ ತಿಳಿಸಿಲ್ಲ. ಅಲ್ಲದೇ ಸರ್ಕಾರಿ ನಿವೃತ್ತ ನೌಕರರಿಗೆ ನಗದುರಹಿತಆರೋಗ್ಯಯೋಜನೆಕೂಡಲೇ ಜಾರಿಗೊಳಿಸಬೇಕು, 75-80 ವರ್ಷದ ನಿವೃತ್ತ ನೌಕರರಿಗೆ ಮೂಲ ಪಿಂಚಣಿಯಲ್ಲಿ ಶೇ.10 ರಿಂದ 15ಕ್ಕೆ ಹೆಚ್ಚಿಸಬೇಕು, ಕೂಡಲೇ ಸರ್ಕಾರ ಪಿಂಚಣಿ ಪರಿಷ್ಕರಣೆಗೆ 7ನೇ ವೇತನಆಯೋಗರಚಿಸಬೇಕು ಸೇದರಿಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕುಎಂದು ಆಗ್ರಹಪಡಿಸಿದರು.

ನಾಗಣ್ಣಗಣಜಲಖೇಡ, ಸೂರ್ಯಕಾಂತ, ಶಂಕರಗೌಡ ಬಿರಾದಾರ, ರಂಗೇಗೌಡ, ಎಸ್.ಎಂಆನಂದಪ್ಪ.ಎನ್.ನಂಜಪ್ಪ, ಸಿದ್ಧಣ್ಣ ಕೋಲಾರ ಸೇರಿದಂತೆಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here